ಬ್ರೇಕಿಂಗ್ ನ್ಯೂಸ್
23-12-25 10:02 pm Mangaluru Correspondent ಕರಾವಳಿ
ಮಂಗಳೂರು, ಡಿ.23: ಇತ್ತೀಚೆಗೆ ಕೈದಿಗಳ ಗಲಾಟೆಯಿಂದ ಸುದ್ದಿಯಾಗಿದ್ದ ಮಂಗಳೂರು ಸಬ್ ಜೈಲಿಗೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಳಗಡೆ ಪರಿಶೀಲನೆ ನಡೆಸಿ ಜೈಲು ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ರೈಟ್ ಲೆಫ್ಟ್ ತೆಗೆದುಕೊಂಡಿದ್ದಾರೆ.
ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಂಗಳೂರು ಕಾರಾಗೃಹಕ್ಕೆ ಔಪಚಾರಿಕವಾಗಿ ಭೇಟಿ ಕೊಟ್ಟಿದ್ದೇನೆ. ರಾಜ್ಯದಲ್ಲಿ 54 ಕಾರಾಗೃಹಗಳು ಇದ್ದು ಎಲ್ಲಾ ಕಾರಾಗೃಹವನ್ನು ಆಗಿಂದಾಗ್ಗೆ ಪರಿಶೀಲನೆ ನಡೆಸಬೇಕು. ಮಂಗಳೂರಿನದ್ದು ಸೂಕ್ಷ್ಮ ಕಾರಾಗೃಹ. ಈಗಾಗಲೇ ಇಲ್ಲಿ ಹಲವು ಬಾರಿ ಪೊಲೀಸರು ರೈಡ್ ಗಳನ್ನು ಮಾಡಿದ್ದಾರೆ. ಒಳಗಡೆ ಗಲಾಟೆ ಮಾಡಿದ ಖೈದಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ.
ಇನ್ನೊಂದಿಷ್ಟು ಖೈದಿಗಳನ್ನು ಬೇರೆ ಜಾಗಕ್ಕೆ ಕಳುಹಿಸುತ್ತೇವೆ. ಒಳ್ಳೆಯ ನಡತೆ ಹೊಂದಿರುವವರಿಗೆ ಸಹಕಾರ ಕೊಡ್ತೇವೆ. ಅಧಿಕಾರಿಗಳ ಜೊತೆಯೂ ಚರ್ಚೆ ಮಾಡ್ತೇನೆ. ಜೈಲಿನ ಒಳಗೆ ಯಾವ ರೀತಿ ನಿಷೇಧಿತ ವಸ್ತುಗಳು ಬರ್ತಿದೆ ಎಂದು ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.



ಟ್ರಯಲ್ ಬೇಸಿಸ್ ಮೇಲೆ ಜೈಲಿನಲ್ಲಿ ಎಐ ಟೆಕ್ನಾಲಜಿ ಕ್ಯಾಮರಾ ಬಳಕೆ ಮಾಡ್ತಿದ್ದೇವೆ. ಇದು ಎಷ್ಟು ಪರಿಣಾಮಕಾರಿ ಆಗುತ್ತೆ ಎಂದು ನೋಡಿ ಅಳವಡಿಕೆ ಮಾಡ್ತೇವೆ. ಪರಪ್ಪನ ಅಗ್ರಹಾರ, ಮೈಸೂರು ಜೈಲಿನಲ್ಲಿ ಕ್ಯಾಮರಾ ಟ್ರಯಲ್ ಆಗಿದೆ. ಮಂಗಳೂರು ಜೈಲಿನಲ್ಲಿಯೂ ಬೇಕಾದ್ರೆ ಟ್ರಯಲ್ ಮಾಡ್ತೀವಿ ಎಂದು ಆ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಜೈಲಿನಲ್ಲಿ ಜಾಮರ್ ಸಮಸ್ಯೆಯನ್ನು ಹದಿನೈದು ವರ್ಷದಿಂದ ಕೇಳ್ತಾ ಇದ್ದೇನೆ. ಕಾಲ ಕಾಲಕ್ಕೆ ಬದಲಾವಣೆ ಆಗ್ತಾ ಬಂದಿದೆ. ಆದ್ರೆ ಇನ್ನೂ ಸಹ ಕೆಲ ಸಮಸ್ಯೆಗಳು ಇದೆ. ನಿನ್ನೆ ಶೋಧ ನಡೆಸಿದ ಸಂದರ್ಭ ಒಂದು ಮೊಬೈಲ್ ಫೋನ್ ಜೈಲಿನಲ್ಲಿ ಸಿಕ್ಕಿದೆ. ಮುಂದೆಯು ಪೊಲೀಸರು ಸಹ ಪರಿಶೀಲನೆ ಮಾಡ್ತಾರೆ. ಜೈಲಿನಲ್ಲಿ ಕಂಟ್ರೋಲ್ ಮಾಡಿದ್ರೆ 60% ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಬರುತ್ತೆ. ದೊಡ್ಡ ದೊಡ್ಡ ತರ್ಲೆ ಮಾಡೋರು ಇಲ್ಲಿಗೆ ಬರ್ತಾರೆ. ಒಮ್ಮೆ ಜೈಲಿಗೆ ಬಂದು ಜಾಮೀನು ಮೇಲೆ ಹೊರಗೆ ಬರ್ತಾರೆ. ಇಲ್ಲಿ ನಾವು ಕಂಟ್ರೋಲಲ್ಲಿ ಇಟ್ಟರೆ ಸರಿ ಆಗುತ್ತೆ ಎಂದು ಜೈಲು ಕೈದಿಗಳ ಬಗ್ಗೆ ಡಿಜಿಪಿ ಅಲೋಕ್ ಕುಮಾರ್ ಹೇಳಿದರು.
Following recent incidents of unrest among inmates, Director General of Police (Prisons) Alok Kumar made a surprise visit to the Mangaluru Sub-Jail and conducted a detailed inspection. He reviewed the internal arrangements of the prison, held a meeting with jail officials, and issued strict instructions to ensure discipline and security.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am