ಕೋಳಿ‌ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ? ಪೊಲೀಸರು ಅಂದ್ರೆ ಅವರದೇ ದರ್ಬಾರು ಅಂದ್ಕೊಂಡಿದ್ದಾರಾ? ಕಳ್ಳರು..! ಶಾಸಕ ಆಶೋಕ ರೈ ಬೈಗುಳ 

22-12-25 12:26 pm       Mangalore Correspondent   ಕರಾವಳಿ

ಕೇಪು ಜಾತ್ರೆಯ ಕೋಳಿ ಅಂಕದ ನೆಪದಲ್ಲಿ ಶಾಸಕ ಅಶೋಕ ರೈ ಪೊಲೀಸರನ್ನು ಕಳ್ಳರೆಂದು ಬೈದಿದ್ದು ಅದರ ವಿಡಿಯೋ ವೈರಲ್ ಆಗಿದೆ. ಪೊಲೀಸರು ಕೋಳಿ‌ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ? ಪೊಲೀಸರು ಅಂದ್ರೆ ಎಲ್ಲ ಕಡೆ ಅವರದೇ ದರ್ಬಾರು ಅಂದ್ಕೊಂಡಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ. 

ಪುತ್ತೂರು, ಡಿ.22 : ಕೇಪು ಜಾತ್ರೆಯ ಕೋಳಿ ಅಂಕದ ನೆಪದಲ್ಲಿ ಶಾಸಕ ಅಶೋಕ ರೈ ಪೊಲೀಸರನ್ನು ಕಳ್ಳರೆಂದು ಬೈದಿದ್ದು ಅದರ ವಿಡಿಯೋ ವೈರಲ್ ಆಗಿದೆ. ಪೊಲೀಸರು ಕೋಳಿ‌ ಅಂಕದಲ್ಲಿ ಪೆಟ್ಟು ಕೊಡಲು ಇವರ ಅಪ್ಪನ ಜಾಗವಾ? ಪೊಲೀಸರು ಅಂದ್ರೆ ಎಲ್ಲ ಕಡೆ ಅವರದೇ ದರ್ಬಾರು ಅಂದ್ಕೊಂಡಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ. 

ಕೇಪು ಜಾತ್ರೆಯಲ್ಲಿ ಜೂಜು ಏನು ನಡೆಯೋದಿಲ್ಲ, ಸಂಪ್ರದಾಯ ಆಚರಣೆಗಷ್ಟೇ ಕೋಳಿ ಕಟ್ಟುತ್ತಾರೆ.‌ ಅಲ್ಲಿನ ಜನ ಕೋಳಿಯನ್ನು ಒಳ್ಳೆದಾಗಿ ಬೆಳೆಸಿ ಪದಾರ್ಥಕ್ಕೆ ಕೋಳಿ ಕಟ್ಟುವುದು ವಾಡಿಕೆ. ಆದರೆ ಅಲ್ಲಿಗೆ ಬಂದು ಪೊಲೀಸರು ಲಾಠಿ ಚಾರ್ಜ್ ಮಾಡ್ತೇವೆ ಅಂದ್ರೆ ಏನರ್ಥ? ಇವರಿಗೆ ಯಾರದ್ದೂ ಹೆದರಿಕೆ ಇಲ್ಲ, ಕಳ್ಳರಿಗೆ..! ಎಂದು ಕೋಳಿ ಕಟ್ಟ ನೆಪದಲ್ಲಿ ಶಾಸಕ ಅಶೋಕ ರೈ ಪೊಲೀಸರಿಗೆ ಕಳ್ಳರೆಂದು ಬೈದಿದ್ದಾರೆ. 

ನಿನ್ನೆ ಅಲ್ಲಿ ಸಂಜೆ ವರೆಗೆ ನಿಂತು ಕೋಳಿ ಕಟ್ಟ ಮಾಡಿಕೊಂಡು ಬಂದಿದ್ದೆ. ಹಾಗಂತ, ಕೋಳಿ ಅಂಕ ಅಧಿಕೃತ ಮಾಡುವುದಕ್ಕೇನು ತೊಂದ್ರೆ ಇಲ್ಲ. ಆದರೆ ಇಲ್ಲಿ ಹೆಂಗಸರು ನಮಗೆ ಬೈತಾರಲ್ವಾ..?ಕೆಲವರು ಕೋಳಿ ಕಟ್ಟ ಎಂದು ಅವ್ರ ಬಂಗಾರ ಎತ್ತಿಕೊಂಡು ಹೋಗ್ತಾರೆ. ಹಾಗಾಗಿ ಕೋಳಿ ಕಟ್ಟದ ಪರವಾಗಿ ನಿಲ್ಲುವುದಕ್ಕೂ ಆಗುವುದಿಲ್ಲ ನಮ್ಗೆ. ಹಾಗೆ ನಿಂತರೆ ಮಹಿಳೆಯರು ಮುಂದೆ ನಮನ್ನೇ ಸೋಲಿಸಿಯಾರು ಎಂದು ಅಶೋಕ ರೈ ಹೇಳಿದ್ದಾರೆ. ಭಾನುವಾರ ಕಡಬ ತುಳುಕೂಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಶೋಕ ರೈ ತುಳುವಿನಲ್ಲಿ ಗಡದ್ದು ಭಾಷಣ ಮಾಡಿದ್ದಾರೆ.

MLA Ashok Rai has harshly criticised the police for their actions during the Kepu Jaatre “Koli Ank” (traditional rooster tying ritual), calling them thieves, in a video that has now gone viral.  Rai questioned the behaviour of the police, saying: “Do the police think the land belongs to their fathers to go and beat people during Koli Ank? Do they think they can act like this everywhere? They behave as if they run their own kingdom. Thieves!”