ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ ಎದುರಲ್ಲೇ ಕುಳಿತು ಕೇಪು ಜಾತ್ರೆಯ ಕೋಳಿ ಅಂಕ ಮಾಡಿಸಿದ ಶಾಸಕ ಅಶೋಕ ರೈ, ಜನರ ಶಹಭಾಷ್ ಗಿರಿ ! 

20-12-25 08:47 pm       Mangalore Correspondent   ಕರಾವಳಿ

ನೂತನ ಎಸ್ಪಿ ಮತ್ತು ಕಮಿಷನರ್ ಬಂದ ಬಳಿಕ ಜಿಲ್ಲೆಯಾದ್ಯಂತ ಕಳೆದ ಆರು ತಿಂಗಳಲ್ಲಿ ಕೋಳಿ ಅಂಕಕ್ಕೆ ಬ್ರೇಕ್ ಬಿದ್ದಿದೆ. ಆದರೆ ಪುತ್ತೂರು ಕ್ಷೇತ್ರದ ಶಾಸಕ ಅಶೋಕ ರೈ ತಾಲೂಕಿನ ಕೇಪು ಉಳ್ಳಾಲ್ತಿ ಜಾತ್ರೆ ನಿಮಿತ್ತ ಜನರ ಭಾವನೆಯಂತೆ ಜೂಜು ರಹಿತ ಕೋಳಿ ಅಂಕ ಆಗಲೇಬೇಕೆಂದು ಪಟ್ಟು ಹಿಡಿದು ಕೋಳಿ ಅಂಕ ಮಾಡಿಸಿದ್ದಾರೆ. 

ಪುತ್ತೂರು, ಡಿ.20 : ನೂತನ ಎಸ್ಪಿ ಮತ್ತು ಕಮಿಷನರ್ ಬಂದ ಬಳಿಕ ಜಿಲ್ಲೆಯಾದ್ಯಂತ ಕಳೆದ ಆರು ತಿಂಗಳಲ್ಲಿ ಕೋಳಿ ಅಂಕಕ್ಕೆ ಬ್ರೇಕ್ ಬಿದ್ದಿದೆ. ಆದರೆ ಪುತ್ತೂರು ಕ್ಷೇತ್ರದ ಶಾಸಕ ಅಶೋಕ ರೈ ತಾಲೂಕಿನ ಕೇಪು ಉಳ್ಳಾಲ್ತಿ ಜಾತ್ರೆ ನಿಮಿತ್ತ ಜನರ ಭಾವನೆಯಂತೆ ಜೂಜು ರಹಿತ ಕೋಳಿ ಅಂಕ ಆಗಲೇಬೇಕೆಂದು ಪಟ್ಟು ಹಿಡಿದು ಕೋಳಿ ಅಂಕ ಮಾಡಿಸಿದ್ದಾರೆ. 

ವಿಟ್ಲ ಸಮೀಪದ ಕೇಪು ಉಳ್ಳಾಲ್ತಿ ಕ್ಷೇತ್ರದ ವಾರ್ಷಿಕ ಉತ್ಸವ ವಿಶಿಷ್ಟ. ಇಲ್ಲಿ ಉತ್ಸವ ಮುಗಿದು ಪ್ರತಿ ವರ್ಷ ಮೂರು ದಿನಗಳ ಜೂಜು ರಹಿತ ಕೋಳಿ ಅಂಕ‌ ಆಗುವುದು ವಾಡಿಕೆ. ಆದರೆ ಈ ಬಾರಿ ಎಲ್ಲಿಯೂ ಕೋಳಿ ಅಂಕ ಇಲ್ಲದೇ ಇರುವುದರಿಂದ ಇಲ್ಲಿ ಆಗುತ್ತಾ ಎಂಬ ಆತಂಕ ಇತ್ತು. ಬೆಳಗ್ಗೆ ಕೋಳಿ ಅಂಕಕ್ಕೆ ಜನರು ಸೇರುತ್ತಿದ್ದಾಗಲೇ ವಿಟ್ಲ ಪೊಲೀಸರು ಬಂದು ಕೋಳಿ ಅಂಕ ಮಾಡದಂತೆ ತಡೆದಿದ್ದಾರೆ.‌ ಪೊಲೀಸರನ್ನು ನೋಡಿ ಕೋಳಿ ಹಿಡಿದು ಬಂದಿದ್ದ ಜನರು ಯರ್ರಾಬಿರ್ರಿ ಓಡಿ ತಪ್ಪಿಸಿಕೊಂಡಿದ್ದರು. 

ಇದರ ಬೆನ್ನಲ್ಲೇ ಸಾರ್ವಜನಿಕರು ಶಾಸಕರಿಗೆ ಕರೆ ಮಾಡಿ ಇಲ್ಲಿನ ಧಾರ್ಮಿಕ ಭಾವನೆಗೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ತಕ್ಷಣವೇ ಶಾಸಕ ಅಶೋಕ ರೈ ಸ್ಥಳಕ್ಕೆ ಬಂದಿದ್ದು ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ ಯಾನುಲ್ಲೆ (ಎಲ್ಲರೂ ಕೋಳಿ ಕಟ್ಟಿ, ಯಾರೂ ಓಡಬೇಡಿ, ನಾನಿದ್ದೇನೆ) ಎಂದು ಹೇಳಿ ಅಲ್ಲಿಯೇ ಚೇರ್ ಹಾಕಿ ಕುಳಿತಿದ್ದಾರೆ. ವಿಟ್ಲ ಎಸ್ಐಯನ್ನು ಉದ್ದೇಶಿಸಿ ಇದು ಪ್ರತಿ ವರ್ಷ ಆಗುವ ಧಾರ್ಮಿಕ ಪ್ರಕ್ರಿಯೆ. ಇಲ್ಲಿ ಜೂಜು ಇಲ್ಲ. ಕೇವಲ ಕೋಳಿ ಕಟ್ಟುವುದು ಮಾತ್ರ. ಜನರ ಧಾರ್ಮಿಕ ನಂಬಿಕೆ ಚ್ಯುತಿ ತರಬೇಡಿ. ನೀವು ಕೇಸು ಮಾಡುವುದಿದ್ದರೆ ನನ್ನ ಮೇಲೆ ಮಾಡಿ, ಅರೆಸ್ಟ್ ಮಾಡೋದಿದ್ದರೂ ನನ್ನನ್ನು ಮಾಡಿ.. ಎಂದು ಹೇಳಿದರು. 

ಪ್ರತಿ ವರ್ಷ ಮೂರು ದಿನ ಇಲ್ಲಿ ಕೋಳಿ ಅಂಕ ಆಗುತ್ತದೆ. ಈ ಬಾರಿ ಒಂದು ದಿನ ಸಾಕು. ಇವತ್ತು ಸಂಜೆ ಆರು ಗಂಟೆ ವರೆಗೆ ಕೋಳಿ‌ ಕಟ್ಟಿ. ಯಾವುದೇ ಭಯ ಬೇಡ.‌ ಎರಡು ಗಂಟೆ ವರೆಗೆ ಇಲ್ಲೇ ಇರುತ್ತೇನೆಂದೂ ಅಶೋಕ ರೈ ಹೇಳಿದರು. ಸಂಜೆ ಐದು ಗಂಟೆ ವೇಳೆಗೆ ಮತ್ತೆ ಬಂದ ಅಶೋಕ ರೈ, ಸಾಕು ಸಾಕು, ಕೋಳಿ ಅಂಕ ನಿಲ್ಲಿಸಿ. ಮತ್ತೆ ಪೊಲೀಸರು ಬಂದು ಕೊಂಡೋದ್ರು ಅಂತ ಹೇಳಬೇಡಿ ಎನ್ನುತ್ತ ಕೋಳಿ ಅಂಕ ನಿಲ್ಲಿಸಿದರು. ಆಮೂಲಕ ಕೇಪು ಉಳ್ಳಾಲ್ತಿಯ ಉತ್ಸವಕ್ಕೆ ಶಾಸಕ ಅಶೋಕ ರೈಯವರೇ ಖುದ್ದಾಗಿ ನಿಂತು ಪ್ರತಿ ವರ್ಷದಂತೆ ಅದ್ದೂರಿಯಾಗಿ ಜೂಜು ರಹಿತ ಕೋಳಿ ಅಂಕ ಮಾಡಿಸಿದ್ದಾರೆ. ‌

After the arrival of a new SP and Police Commissioner, rooster-tying events (Koli Ank), traditionally held across Dakshina Kannada, had been halted for the past six months. But Puttur MLA Ashok Rai ensured that the customary non-gambling religious rooster-tying ritual at the Kepu Ullalthi annual festival was conducted without interruption—right in front of the police.