ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ್ಯವೆಂದು ಜಾಲತಾಣದಲ್ಲಿ ಪೋಸ್ಟ್ ; ಆರೋಪಿ ಬಂಧನ 

18-12-25 10:24 pm       Mangalore Correspondent   ಕರಾವಳಿ

ಬಜ್ಪೆ ಪೊಲೀಸರ ಬಗ್ಗೆ ಅವಹೇಳನಕಾರಿಯಾಗಿ ಇನ್ ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದ ಪ್ರಕರಣದಲ್ಲಿ ಆರೋಪಿ ಕಾಟಿಪಳ್ಳ ನಿವಾಸಿ ಅಭಿಷೇಕ್(23) ಎಂಬಾತನನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.  

ಮಂಗಳೂರು, ಡಿ.18 : ಬಜ್ಪೆ ಪೊಲೀಸರ ಬಗ್ಗೆ ಅವಹೇಳನಕಾರಿಯಾಗಿ ಇನ್ ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದ ಪ್ರಕರಣದಲ್ಲಿ ಆರೋಪಿ ಕಾಟಿಪಳ್ಳ ನಿವಾಸಿ ಅಭಿಷೇಕ್(23) ಎಂಬಾತನನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.  

mr_a_titude ಎಂಬ Instagram ಪೇಜ್ ಮೂಲಕ Hotel Nisarga ಎಂಬ ಫೋಟೋವನ್ನು ಹಾಕಿ ಅದರ ಮೇಲೆ 'ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕೊಲೆ ಪ್ರಕರಣದ ಆರೋಪಿತರಿಗೆ ಬಜಪೆ ಪೊಲೀಸರಿಂದ ರಾಜಾತಿಥ್ಯ, ದಿನವೂ ನಿಸರ್ಗ ಹೋಟೆಲ್ ಬಜಪೆ ಇಂದ ಬೀಫ್ ಊಟವನ್ನು ನೀಡುತ್ತಿದ್ದಾರೆ... ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸ್ ಇಲಾಖೆ ಅಪರಾಧಿಗಳೊಟ್ಟಿಗೆ ಸೇರಿಕೊಂಡು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಇಲ್ಲಿ ಪೊಲೀಸ್ ನವರ ಮೇಲೆ ಇಟ್ಟಿರುವ ಭರವಸೆ ಸುಳ್ಳಾಗುತ್ತಿದೆ' ಎಂಬುದಾಗಿ ಪ್ರಚೋದನಕಾರಿ ಸಂದೇಶಗಳನ್ನು ಹರಿಯಬಿಟ್ಟಿದ್ದ ಬಗ್ಗೆ ಮೇ 08ರಂದು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ನಗರದ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕೈಗೊಳ್ಳಲಾಗಿರುತ್ತದೆ.

ಸದ್ರಿ ಆರೋಪಿತನ ವಿರುದ್ದ ಈ ಹಿಂದೆ ಕೊಲೆ, ಕೊಲೆಯತ್ನ, ಹಲ್ಲೆ, ದರೋಡೆ ಸೇರಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ -3, ಕಾಪು ಪೊಲೀಸ್ ಠಾಣೆಯಲ್ಲಿ -1 ಪ್ರಕರಣಗಳು ದಾಖಲಾಗಿರುತ್ತದೆ.

ಪ್ರಕರಣದಲ್ಲಿ mr a titude ಎಂಬ Instagram ಪೇಜ್ ನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಹರಿಬಿಡುತ್ತಿದ್ದ ಆರೋಪಿತನನ್ನು ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ತಾಂತ್ರಿಕ ಸಾಕ್ಷ್ಯಗಳ ಮುಖಾಂತರ ಪತ್ತೆ ಮಾಡಿ, ದಸ್ತಗಿರಿ ಕ್ರಮ ಜರುಗಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

Mangaluru police have arrested a 23-year-old man for allegedly posting derogatory and provocative content against Bajpe police on Instagram. The accused, identified as Abhishek, a resident of Katipalla, was taken into custody by the City Crime Branch’s CEN police.