ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು ; ಆದೇಶ ಮತ್ತೊಮ್ಮೆ ಜಾರಿ ಮಾಡಿದ ಪುತ್ತೂರು ವಿಭಾಗಾಧಿಕಾರಿ 

18-12-25 10:52 am       Mangalore Correspondent   ಕರಾವಳಿ

ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಮತ್ತೆ ರಾಯಚೂರು ಜಿಲ್ಲೆಯ ಮಾನ್ವಿಗೆ ಗಡೀಪಾರುಗೊಳಿಸಿ ಆದೇಶ ಮಾಡಲಾಗಿದೆ. 

ಮಂಗಳೂರು, ಡಿ.18 : ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಮತ್ತೆ ರಾಯಚೂರು ಜಿಲ್ಲೆಯ ಮಾನ್ವಿಗೆ ಗಡೀಪಾರುಗೊಳಿಸಿ ಆದೇಶ ಮಾಡಲಾಗಿದೆ. 

ಪುತ್ತೂರು ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ತನ್ನ ಹಿಂದಿನ ಆದೇಶವನ್ನು ಮಾರ್ಪಡಿಸಿ ಮತ್ತೆ ಜಾರಿಗೊಳಿಸಿದ್ದಾರೆ. ಈ ಹಿಂದಿನ ಆದೇಶದಂತೆ, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡೀಪಾರು ಮಾಡಿ ಆದೇಶ ಮಾಡಿದ್ದಾರೆ. 

ಈ ಹಿಂದಿನ ಆದೇಶದಲ್ಲಿ ಕಾನೂನಾತ್ಮಕ ತೊಂದರೆ ಇದೆ, ಕಾನೂನು ಪಾಲನೆಯಾಗಿಲ್ಲ ಎಂಬ ಕೊರತೆ ಇದ್ದುದನ್ನು ಸರಿಪಡಿಸಿ ಸ್ಟೆಲ್ಲಾ ವರ್ಗೀಸ್ ಮತ್ತೊಮ್ಮೆ ಆದೇಶ ಮಾಡಿದ್ದಾರೆ. ಎಸಿ ಆದೇಶ ಪ್ರತಿ ಹಿಡಿದು ಮಹೇಶ್ ಶೆಟ್ಟಿಯವರ ಉಜಿರೆ ಬಳಿಯ ತಿಮರೋಡಿ ಮನೆಗೆ ಬೆಳ್ತಂಗಡಿ ಪೊಲೀಸರು ಇಂದು ಬೆಳಗ್ಗೆ ತೆರಳಿದ್ದಾರೆ.

ಆದರೆ ವಿಷಯ ತಿಳಿದ ಮಹೇಶ್ ಶೆಟ್ಟಿ ಪೊಲೀಸರು ಮನೆ ತಲುಪುವ ಮೊದಲೇ ಅಲ್ಲಿಂದ ನಾಪತ್ತೆಯಾಗಿದ್ದಾರೆ. ಬಳಿಕ ಮನೆಯಲ್ಲಿ ಶೋಧ ನಡೆಸಿ, ನೋಟಿಸ್ ಅಂಟಿಸಿ ಪೊಲೀಸರು ವಾಪಸಾಗಿದ್ದಾರೆ. ಇತ್ತೀಚೆಗೆ ಕಾನೂನಾತ್ಮಕ ತೊಂದರೆ ನೆಪದಲ್ಲಿ ಪುತ್ತೂರು ವಿಭಾಗಾಧಿಕಾರಿ ಹೊರಡಿಸಿದ್ದ ಗಡೀಪಾರು ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು.

Mahesh Shetty Timarodi, who has been actively leading protests against Dharmasthala, has once again been externed to Manvi taluk of Raichur district. Puttur Sub-Divisional Officer Stella Varghese reissued the externment order after rectifying legal shortcomings found in the earlier directive.