ಬ್ರೇಕಿಂಗ್ ನ್ಯೂಸ್
23-10-25 10:46 pm Mangalore Correspondent ಕರಾವಳಿ
ಮಂಗಳೂರು, ಅ.23 : ಇತ್ತೀಚೆಗೆ ರೋಗಿಯೊಬ್ಬರು ವೈದ್ಯರ ಅಚಾತುರ್ಯದಿಂದ ಸತ್ತು ಬದುಕಿದ್ದಾರೆಂಬ ಸುದ್ದಿಯ ಬಗ್ಗೆ ದೇರಳಕಟ್ಟೆ ಯೇನಪೋಯ ಆಸ್ಪತ್ರೆಯವರು ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ಬೆಳವಣಿಗೆ ಆಗಿಲ್ಲ. ರಮಾನಾಥ ಗಟ್ಟಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ನಿಜ. ಅ.19ರಂದು ಕುಟುಂಬಸ್ಥರು ಗಟ್ಟಿಯವರ ಸ್ಥಿತಿ ಗಂಭೀರ ಇರುವಾಗಲೇ ಇಲ್ಲಿಂದ ಡಿಸ್ಚಾರ್ಚ್ ಮಾಡಿಕೊಂಡು ತೆರಳಿದ್ದರು ಎಂದು ತಿಳಿಸಿದ್ದಾರೆ.
ಕುಂಬಳೆಯ ಕಂಚಿಕಟ್ಟೆ ನಿವಾಸಿ ರಮಾನಾಥ ಗಟ್ಟಿ(70) ಅ.14ರಂದು ಕೈಕಾಲುಗಳ ಬಲಹೀನತೆ ಮತ್ತು ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ದಾಖಲಾಗಿದ್ದರು. ರೋಗಿಗೆ ಕೃತಕ ಉಸಿರಾಟದ ವ್ಯವಸ್ಥೆ ಮತ್ತು ಅಗತ್ಯ ಇರುವ ಚಿಕಿತ್ಸೆ ನೀಡಲಾಗಿತ್ತು. ಹೀಗಿರುವಾಗಲೇ ರೋಗಿಯ ಸಂಬಂಧಿಕರು ಅ.19ರಂದು ವೈದ್ಯರ ಸಲಹೆಗೆ ವಿರುದ್ಧವಾಗಿ ಅವರನ್ನು ಕರೆದೊಯ್ಯಲು ಮುಂದಾಗಿದ್ದರು. ವೈದ್ಯರು ಸೀರಿಯಸ್ ಇರುವ ಬಗ್ಗೆ ತಿಳಿಸಿದರೂ ಅದನ್ನು ಲೆಕ್ಕಿಸದೆ ಡಿಸ್ಚಾರ್ಜ್ ಫಾರ್ಮ್ ಗೆ ಸಹಿ ಮಾಡಿ ರೋಗಿಯನ್ನು ಬಾಡಿಗೆ ಆಂಬುಲೆನ್ಸ್ ನಲ್ಲಿ ಕರೆದೊಯ್ದಿದ್ದರು. ಈ ವೇಳೆ, ರೋಗಿಗೆ ಶ್ವಾಸೋಚ್ಛಾಸಕ್ಕಾಗಿ ಆಕ್ಸಿಜನ್ ಮಾಸ್ಕ್ ಹಾಕಲಾಗಿತ್ತು.
ಆದರೆ ರೋಗಿಯನ್ನು ಆಸ್ಪತ್ರೆಯ ಫ್ರೀಜರಿನಲ್ಲಿ ಇಡಲಾಗಿತ್ತು ಮತ್ತು ಅವರು ಆಸ್ಪತ್ರೆಯಲ್ಲಿ ಇದ್ದಾಗಲೇ ಮರಣವನ್ನಪ್ಪಿದ್ದರು ಎನ್ನುವ ಸುದ್ದಿ ಸಂಪೂರ್ಣ ಸುಳ್ಳಾಗಿದ್ದು ವಾಸ್ತವಕ್ಕೆ ದೂರವಾಗಿದೆ. ಆಸ್ಪತ್ರೆಯಿಂದ ಆಕ್ಸಿಜನ್ ಆಂಬುಲೆನ್ಸ್ ನಲ್ಲಿ ಹೋಗುವಾಗ ರೋಗಿ ಜೀವಂತವಾಗಿದ್ದರು. ಇದು ರೋಗಿಯ ಸಂಬಂಧಿಕರಿಗೂ ತಿಳಿದಿತ್ತು. ಆದರೆ ಕೆಲವು ಸುದ್ದಿ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಯನ್ನು ಹರಡಲಾಗಿದ್ದು ಇದರಿಂದ ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಗೌರವಕ್ಕೆ ಹಾನಿ ಉಂಟು ಮಾಡಿದೆ.
ಯೇನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪರಿಶೀಲನೆಗೆ ಒಳಗಾಗದ ತಪ್ಪು ಹಾಗೂ ಭ್ರಮೆ ಉಂಟು ಮಾಡುವ ಮಾಹಿತಿ ಹಂಚುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಇಂತಹ ಸುಳ್ಳು ಸುದ್ದಿಗಳು ನಮ್ಮ ಸಂಸ್ಥೆಯ ಗೌರವ ಹಾಗೂ ಕಾರ್ಯದಕ್ಷತೆಯನ್ನು ಹಾನಿಗೊಳಿಸುತ್ತದೆ. ಮಾಧ್ಯಮ ಸಂಸ್ಥೆಗಳು ಆರೋಗ್ಯ ಸಂಸ್ಥೆಗಳ ಮೇಲೆ ತಪ್ಪು ಕಲ್ಪನೆ ಮೂಡಿಸುವ ಸುದ್ದಿ ಹರಡುವ ಮೊದಲು ವಾಸ್ತವ ತಿಳಿದುಕೊಳ್ಳಿ ಎಂದು ಮನವಿ ಮಾಡುತ್ತೇವೆ ಎಂದೇ ಯೇನಪೋಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.
Yenepoya Hospital in Deralakatte, Mangaluru, has issued a clarification regarding media reports claiming that a patient “died and came back to life” due to medical negligence. The hospital stated that Ramanath Gatti (70) was admitted on October 14 in a serious condition and was discharged by his family on October 19 against doctors’ advice. The patient was alive and on oxygen support when he left the hospital in an ambulance, the statement said.
23-10-25 03:42 pm
HK News Desk
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅರ್ಹ ವ್ಯಕ್ತಿ ;...
22-10-25 08:12 pm
ರಾಜ್ಯದ ಸಂಪನ್ಮೂಲವನ್ನು ಹೈಕಮಾಂಡ್ ಸಮರ್ಪಣಾಮಸ್ತು ಮಾ...
21-10-25 11:01 pm
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
23-10-25 03:39 pm
HK News Desk
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
ಡ್ರೆಸ್ಸಿಂಗ್ ರೂಮಿನಲ್ಲಿ ಇಸ್ಲಾಂ ಪ್ರಚಾರ ಮಾಡಿದ್ದಕ...
21-10-25 03:11 pm
23-10-25 10:52 pm
Mangalore Correspondent
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
ಜಾನುವಾರು ಸಾಗಾಟಕ್ಕೆ ಪೊಲೀಸರ ತಡೆ ; ಲಾರಿಯಿಂದ ಹಗ್ಗ...
22-10-25 09:55 pm
ಗಟ್ಟಿಯವರ ಆಯುಷ್ಯ ಗಟ್ಟಿಯಿದೆ! ದೇರಳಕಟ್ಟೆ ವೈದ್ಯರು...
22-10-25 04:30 pm
23-10-25 06:53 pm
Mangalore Correspondent
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am
Mulki Fraud, Mangalore Police: ಹಣ ಡಬಲ್ ಆಮಿಷದಲ...
21-10-25 10:51 pm
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm