ಬ್ರೇಕಿಂಗ್ ನ್ಯೂಸ್
19-10-25 07:19 pm Mangalore Correspondent ಕರಾವಳಿ
ಮಂಗಳೂರು, ಆ.19 : ಚಿನ್ನಾಭರಣ ಕ್ಷೇತ್ರದಲ್ಲಿ ನಲವತ್ತು ವರ್ಷಗಳಿಂದ ಪ್ರಸಿದ್ಧಿಯಾಗಿ ಕೇರಳದ ಜನರ ಮನೆಮಾತಾಗಿರುವ 'ಬಿಂದು ಜ್ಯುವೆಲ್ಲರಿ' ಮಂಗಳೂರು ಶಾಖೆಯನ್ನು ರಾಮಕೃಷ್ಣ ಆಶ್ರಮದ ಸ್ವಾಮಿ ಯುಗೇಶನಾಂದ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್, ಯು.ಟಿ. ಇಫ್ತಿಕಾರ್ ಫರೀದ್, ಕೆನರಾ ಚೇಂಬರ್ ಅಧ್ಯಕ್ಷ ಪಿ.ಬಿ. ಅಹಮದ್ ಮುದಸರ್, ಪಾಲುದಾರರಾದ ಶೋಭನಾ ಉಪಸ್ಥಿತರಿದ್ದರು.
ಖ್ಯಾತ ನಟಿ ಸ್ನೇಹ ಪ್ರಸನ್ನ ಕಾರ್ಯಕ್ರಮದಲ್ಲಿ
ಮಾತನಾಡಿ, ಬಿಂದು ಸಂಸ್ಥೆಯ ಚಿನ್ನಾಭರಣಗಳ ಸಂಗ್ರಹ ಅದ್ಭುತವಾಗಿದೆ. ವಾಣಿಜ್ಯ ನಗರಿ ಮಂಗಳೂರಿನಲ್ಲಿ ಹೊಸ ಶಾಖೆ ಆರಂಭಿಸಿದ ಸಂಸ್ಥೆಯನ್ನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದು ಶುಭ ಹಾರೈಸಿದರು. ಇದೆ ವೇಳೆ ಬಿಂದು ಸಂಸ್ಥೆಯ ಉತ್ಪನ್ನಗಳಾದ 'ಮೈ ಬ್ಲೂ ಡೈಮಂಡ್' ಹಾಗೂ 'ಸ್ವರ್ಣ ಬಿಂದು ಸಿಎಸ್ ಆರ್' ಎಂಬ ಲೋಗೋವನ್ನು ನಟಿ ಸ್ನೇಹ ಪ್ರಸನ್ನ ಬಿಡುಗಡೆಗೊಳಿಸಿದರು.






ಬಿಂದು ಜ್ಯುವೆಲ್ಲರಿ ಸಂಸ್ಥೆಯ ಮಾಲಕರಾದ ಅಭಿಲಾಷ್ ಕೆ.ವಿ. ಹಾಗೂ ಡಾ| ಅಜಿತೇಶ್ ಕೆ.ವಿ, ಮತ್ತು ಕುಟುಂಬ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಟರಾದ ಶೋಧನ್ ಶೆಟ್ಟಿ, ಅನೀಶ್ ಉಪಸ್ಥಿತರಿದ್ದರು. ಬಿಂದು ಶೋರೂಂನಲ್ಲಿ ವಿಶೇಷವಾಗಿ 'ಲೈಟ್ ವೈಟ್ ಜ್ಯುವೆಲ್ಲರಿ' ಎಂಬ ಬ್ರಾಂಡ್ ಗ್ರಾಹಕರಿಗೆ ವಿಶೇಷ ದರದಲ್ಲಿ ದೊರೆಯಲಿದೆ. ಡೈಮಂಡ್ ವಿಭಾಗದಲ್ಲೂ ಅತ್ಯಾಧುನಿಕ ಆಭರಣಗಳ ಸಂಗ್ರಹ ದೊರೆಯಲಿದೆ.
ಬಿಂದು ಜ್ಯುವೆಲ್ಲರಿ- ಶುದ್ಧತೆ, ಶ್ರೇಷ್ಠತೆಯ ಸಂಕೇತ
ಚಿನ್ನದ ಪರಿಶುದ್ಧತೆ, ಶ್ರೇಷ್ಠತೆ ಹಾಗೂ ನಂಬಿಕೆಯ ವಾಗ್ದಾನದೊಂದಿಗೆ ಬಿಂದು ಜ್ಯುವೆಲ್ಲರಿ ಕೇರಳ, ಕರ್ನಾಟಕದಲ್ಲಿ ಒಂದು ಭವ್ಯ ಪರಂಪರೆಯನ್ನು ಹುಟ್ಟುಹಾಕಿದೆ. ಇದೇ ಕಾರಣದಿಂದ ಪ್ರಗತಿ ಹಾಗೂ ಪರಂಪರೆಯೊಂದಿಗೆ ಬೆಳೆಯುತ್ತಿರುವ ವಾಣಿಜ್ಯ ನಗರಿ ಮಂಗಳೂರಿನಲ್ಲಿ ಹೊಸ ಶಾಖೆ ಆರಂಭಿಸಲಾಗಿದೆ. ಸಂಸ್ಕೃತಿ ಹಾಗೂ ವ್ಯಾಪಾರವನ್ನು ಒಟ್ಟಾಗಿ ಬೆಸೆದಿರುವ ಬಿಂದು ಸಂಸ್ಥೆಯು ಕಲಾತ್ಮಕ ಪರಂಪರೆ, ವೈವಿಧ್ಯಮಯ ವಿನ್ಯಾಸಗಳು ಹಾಗೂ ನಂಬಿಕೆಯ ವಾಗ್ದಾನದೊಂದಿಗೆ ಗ್ರಾಹಕರ ಬಳಿಗೆ ಬರುತ್ತಿದೆ ಎಂದು ಸಂಸ್ಥೆಯ ಮಾಲಕ ಅಭಿಲಾಷ್ ಕೆ.ವಿ. ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇರಳದಲ್ಲಿ ಜನಪ್ರಿಯವಾಗಿರುವ ನಮ್ಮ ಸಂಸ್ಥೆಯು ಕೆಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಶಾಖೆ ಆರಂಭಿಸಿತ್ತು. ಮಂಗಳೂರಿನ ನೂತನ ಶಾಖೆಯಲ್ಲಿ ವಜ್ರ ಹಾಗೂ ಚಿನ್ನಾಭರಣಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಅಲ್ಲದೆ, ಬಿಂದು ಜುವೆಲ್ಲರಿಯಿಂದ 'ಅಕ್ಷಯ ನಿಧಿ' ಮತ್ತು 'ಸ್ವರ್ಣ ಬಿಂದು' ಮಾಸಿಕ ಉಳಿತಾಯ ಯೋಜನೆಯನ್ನು ಮಂಗಳೂರಿನಲ್ಲಿಯೂ ಪರಿಚಯಿಸಲಾಗಿದೆ. ಯೋಜನೆ ಮೂಲಕ ಗ್ರಾಹಕರು ಬೋನಸ್ ಮತ್ತು ಇತರ ಲಾಭಗಳನ್ನು ಸಹ ಪಡೆಯಬಹುದು ಎಂದು ಅಭಿಲಾಷ್ ಕೆ.ವಿ. ಹೇಳಿದರು. ಇದೇ ಸಂದರ್ಭ ಬಿಂದು ಜ್ಯುವೆಲ್ಲರಿ ಹಿರಿಯ ವ್ಯವಸ್ಥಾಪಕ ಸುನಿಲ್ ರಾಜ್ ಶೆಟ್ಟಿ, ಪ್ರಮುಖರಾದ ಸಂತೋಷ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
Bindu Jewellery, a renowned brand with over four decades of legacy in Kerala’s gold industry, inaugurated its new showroom in Mangaluru. The ceremony was inaugurated by Swami Yugeshananda of Ramakrishna Ashram, in the presence of MLA Vedavyas Kamath, U.T. Iftikhar Fareed, Canara Chamber President P.B. Ahmad Mudassar, and partner Shobhana.
16-03-26 05:52 pm
HK News Staffer
ಐಎಎಸ್ ಅಧಿಕಾರಿಯೆಂದು ಪೋಸು ಕೊಟ್ಟು ಜನಸಾಮಾನ್ಯರಿಗೆ,...
16-03-26 03:36 pm
Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪ...
15-03-26 04:27 pm
ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆ ; ತನ...
14-03-26 10:14 pm
ಮಲೆನಾಡಿಗೆ ಇಂಡಿಗೋ ಆಘಾತ ; ವಿಮಾನ ದುರಂತ ಹಿನ್ನೆಲೆ,...
13-03-26 12:09 pm
16-03-26 11:05 pm
Mangaluru Staffee
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
ಇರಾನ್ ದಾಳಿ ಬಗ್ಗೆ ಎಐ ವಿಡಿಯೋ ಆಧರಿತ ಸುಳ್ಳು ಸುದ್ದ...
16-03-26 02:44 pm
ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂ...
16-03-26 12:38 pm
ಒಡಿಶಾದ ಕಟಕ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ; I...
16-03-26 12:34 pm
16-03-26 09:48 pm
Mangaluru Staffer
Moodbidri Inspector Sandesh, Police: ಮೂಡುಬಿದ್...
16-03-26 07:20 pm
Gas Tanker Accident: ಕಟಪಾಡಿ ಹೆದ್ದಾರಿಯಲ್ಲಿ ಗ್ಯ...
16-03-26 02:46 pm
Besant Evening College, Blood Donation: ಬೆಸೆಂ...
15-03-26 09:10 pm
Udupi Accident: ತಾಯಿ-ಮಗ ತೆರಳುತ್ತಿದ್ದ ಸ್ಕೂಟರ್...
14-03-26 09:26 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am