ಬ್ರೇಕಿಂಗ್ ನ್ಯೂಸ್
15-10-25 05:36 pm Mangalore Correspondent ಕರಾವಳಿ
ಮಂಗಳೂರು, ಅ.14 : ನಗರದ ಪಂಪ್ವೆಲ್ ಸರ್ಕಲ್ನಿಂದ ಕಂಕನಾಡಿ ಬೈಪಾಸ್ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದರಿಂದ ಅಕ್ಟೋಬರ್ 13 ರಿಂದ ಎಪ್ರಿಲ್ 15ರ ವರೆಗೆ (7 ತಿಂಗಳು) ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾಯಿಸಿ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿದೆ.
ಪಂಪ್ವೆಲ್ ವೃತ್ತದಿಂದ ಕಂಕನಾಡಿ ಬೈಪಾಸ್ ವರೆಗೆ ರಸ್ತೆಯ ಪ್ರಥಮ ಹಾಗೂ ದ್ವಿತೀಯ ಹಂತದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುವ ಸಮಯದಲ್ಲಿ ದ್ವಿಮುಖ ರಸ್ತೆಯ ಒಂದು ರಸ್ತೆಯನ್ನು ಕರಾವಳಿ ಜಂಕ್ಷನ್ನಿಂದ ಪಂಪ್ವೆಲ್ ವರೆಗೆ ವಾಹನಗಳು ಸಂಚರಿಸಲು ತಾತ್ಕಾಲಿಕವಾಗಿ ಏಕಮಖ ರಸ್ತೆಯನ್ನಾಗಿ ಘೋಷಿಸಿದೆ. ಅದೇ ರೀತಿ ಪಂಪ್ವೆಲ್ ಕಡೆಯಿಂದ - ಕಂಕನಾಡಿ ಓಲ್ಡ್ ರಸ್ತೆ - ಕಂಕನಾಡಿ ಜಂಕ್ಷನ್ ರಸ್ತೆಯನ್ನು ತಾತ್ಕಾಲಿಕವಾಗಿ ಏಕಮುಖ ರಸ್ತೆಯನ್ನಾಗಿ ಘೋಷಿಸಿದೆ. ಏಕಮುಖ ರಸ್ತೆಯ ಎರಡೂ ಬದಿಗಳಲ್ಲಿ ಎಲ್ಲಾ ತರಹದ ವಾಹನಗಳ ನಿಲುಗಡೆ ಮಾಡುವುದನ್ನು ನಿಷೇಧಿಸಲಾಗಿದೆ.
ಪಡೀಲ್ ಹಾಗೂ ತೊಕ್ಕೊಟ್ಟು ಕಡೆಯಿಂದ ಪಂಪ್ವೆಲ್ ವೃತ್ತಕ್ಕೆ ಬಂದು ಕರಾವಳಿ ವೃತ್ತಕ್ಕೆ ಹೋಗುವ ಎಲ್ಲಾ ವಾಹನಗಳು ಕಂಕನಾಡಿ ಓಲ್ಡ್ ರಸ್ತೆ ಮೂಲಕ ಕಂಕನಾಡಿ ಜಂಕ್ಷನ್ಗೆ ಬಂದು ಬಲಕ್ಕೆ ತಿರುಗಿ ಕರಾವಳಿ ವೃತ್ತದ ಕಡೆಗೆ ಸಂಚರಿಸಬೇಕು. ಫಳ್ನೀರ್ ರಸ್ತೆಯಿಂದ ಹಾಗೂ ವೆಲೆನ್ಸಿಯಾ ರಸ್ತೆಯಿಂದ ಪಂಪ್ವೆಲ್ ಕಡೆಗೆ ಹೋಗುವ ಎಲ್ಲಾ ವಾಹನಗಳು ಕಂಕನಾಡಿ ಜಂಕ್ಷನ್ನಿಂದ ನೇರವಾಗಿ ಕರಾವಳಿ ಜಂಕ್ಷನ್ಗೆ ಬಂದು ಬಲಕ್ಕೆ ತಿರುಗಿ ಪಂಪ್ವೆಲ್ ವೃತ್ತದ ಕಡೆಗೆ ಸಂಚರಿಸಬೇಕು ಎಂದು ನಗರ ಪೋಲಿಸ್ ಆಯುಕ್ತರು ಆದೇಶಿಸಿದ್ದಾರೆ.
ರಸ್ತೆ ಬಂದ್ ಬಗ್ಗೆ ಜಾಲತಾಣದಲ್ಲಿ ಟೀಕೆ
ಪಂಪ್ವೆಲ್ - ಕಂಕನಾಡಿ ಮಧ್ಯದ 300 ಮೀಟರ್ ಉದ್ದದ ರಸ್ತೆಯನ್ನು ಕಾಂಕ್ರೀಟ್ ಮಾಡಲು ಸುದೀರ್ಘ ಏಳು ತಿಂಗಳ ಕಾಲ ರಸ್ತೆ ಬಂದ್ ಮಾಡುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಈಗಾಗಲೇ ಮೋರ್ಗನ್ಸ್ ಗೇಟ್ ಬಳಿಯ ಜಪ್ಪು ಮಹಾಕಾಳಿ ಪಡ್ಪು ರೈಲ್ವೇ ಅಂಡರ್ ಪಾಸ್ ಕಾಮಗಾರಿ ಮುಗಿಯದೆ ಪ್ರಯಾಣಿಕರು ಸಂಕಷ್ಟ ಪಡುತ್ತಿದ್ದಾರೆ. ತಲಪಾಡಿ, ತೊಕ್ಕೊಟ್ಟು, ಉಳ್ಳಾಲದಿಂದ ಮಂಗಳೂರು ಬಂದರು ಕಡೆಗೆ ಹೋಗಲು ಜಪ್ಪು ರೈಲ್ವೇ ಅಂಡರ್ ಪಾಸ್ ಹತ್ತಿರದ ಸಂಪರ್ಕ. ಆದರೆ ಆ ರಸ್ತೆಯನ್ನು ಕಳೆದೆರಡು ವರ್ಷದಿಂದ ಕಾಮಗಾರಿ ಸಲುವಾಗಿ ಮುಚ್ಚಲಾಗಿದೆ. ಇದರಿಂದಾಗಿ ಮೀನಿನ ಟೆಂಪೋ, ಈಚರ್ ಮಾದರಿಯ ವಾಹನಗಳು, ಪ್ರಯಾಣಿಕರು ಪಂಪ್ವೆಲ್ ಮೂಲಕ ಸುತ್ತು ಬಳಸಿ ಹೋಗಬೇಕು. ಇದರ ನಡುವೆ ಪಂಪ್ವೆಲ್ ಕಂಕನಾಡಿ ರಸ್ತೆಯನ್ನೂ ಬಂದ್ ಮಾಡಿದರೆ ಹೇಗೆ ಎಂದು ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ. ಸಣ್ಣ ರಸ್ತೆಯ ಕಾಮಗಾರಿ ನಡೆಸಲು ದೀರ್ಘ ಏಳು ತಿಂಗಳು ಅಗತ್ಯ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
Road development work between Pumpwell Circle and Kankanady Bypass in Mangaluru has led to traffic diversions from October 13 to April 15. The stretch will remain partially closed as authorities convert sections into one-way routes for construction. Parking on both sides has also been prohibited.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am