ಬ್ರೇಕಿಂಗ್ ನ್ಯೂಸ್
15-10-25 12:12 pm Udupi Correspondent ಕರಾವಳಿ
ಕುಂದಾಪುರ, ಅ.15 : ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಬೀಚ್‌ನಲ್ಲಿ ಮಂಗಳವಾರ ಸಂಜೆ ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ಸಮುದ್ರಪಾಲಾಗಿದ್ದು, ಒಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಿರಿ ಮಂಜೇಶ್ವರ ಗ್ರಾಮದ ಹೊಸಹಿತ್ಲು ಮಕ್ಕಿತ್ತಾರು ನಿವಾಸಿ ಉದಯ ದೇವಾಡಿಗ ಎಂಬವರ ಪುತ್ರ ಆಶಿಕ್ ದೇವಾಡಿಗ(15), ಹೊಸಹಿತ್ಲು ಮಕ್ಕಿತ್ತಾರು ಗಿಂಡಿಮನೆ ಮಾರುತಿ ಪೂಜಾರಿಯವರ ಪುತ್ರ ಸೂರಜ್ ಪೂಜಾರಿ(16), ಹೊಸಹಿತ್ಲು ಮಕ್ಕಿತಾರು ನಿವಾಸಿ ಸುಧಾಕರ ದೇವಾಡಿಗ ಎಂಬವರ ಪುತ್ರ ಸಾಕೇತ್ ದೇವಾಡಿಗ (18) ಮೃತಪಟ್ಟವರು. ಅವರೊಂದಿಗೆ ಈಜಲು ತೆರಳಿದ್ದ ಕೌಶಿಕ್ ದೇವಾಡಿಗ(18) ಸ್ಥಳೀಯರ ಸಹಾಯದಿಂದ ಈಜಿ ದಡ ಸೇರಿದ್ದಾನೆ. ಈತ ಮೃತಪಟ್ಟ ಆಶಿಶ್ ದೇವಾಡಿಗನ ಸಹೋದರ.
ನಾಲ್ವರು ಬಾಲಕರು ಮಂಗಳವಾರ ಮಧ್ಯಾಹ್ನದ ಬಳಿಕ ಮನೆಯ ಬಳಿ ಆಟವಾಡಿ, ಸಂಜೆ 5.30ರ ಸುಮಾರಿಗೆ ಹೊಸಹಿತ್ಲು ಬೀಚ್ ಬಳಿ ಕಡಲಿನಲ್ಲಿ ಈಜಲು ತೆರಳಿದ್ದರು. ಮೂವರ ಮೃತದೇಹ ಪತ್ತೆಯಾಗಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಶಿಶ್ ಹಾಗೂ ಸೂರಜ್ ಕಿರಿಮಂಜೇಶ್ವರ ಸರಕಾರಿ ಪ್ರೌಢಶಾಲೆಯಲ್ಲಿ 9 ಹಾಗೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸಾಕೇತ್ ದೇವಾಡಿಗ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಮಲ್ಪೆ ಬೀಚ್ ನಲ್ಲಿ ಮಾಗಡಿ ಮೂಲದ ಪ್ರವಾಸಿಗ ಸಾವು
ಮಲ್ಪೆ ಕಡಲ ಕಿನಾರೆಗೆ ಬಂದಿದ್ದ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಾರಸಂದ್ರ ನಿವಾಸಿ ವೆಂಕಟಾಚಲ (40) ಎಂಬವರು ಸಮುದ್ರ ನೀರಿನಲ್ಲಿ ಈಜಾಡುತ್ತಿದ್ದ ವೇಳೆ ಅಲೆಗಳ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
ಅ.13ರಂದು ಇವರು ತನ್ನಿಬ್ಬರು ಗೆಳೆಯರೊಂದಿಗೆ ರಾಮನಗರದಿಂದ ಪ್ರವಾಸಕ್ಕೆಂದು ಹೊರಟಿದ್ದು, ಬೆಳಗ್ಗೆ ಮರವಂತೆ ಬೀಚ್ ನಲ್ಲಿದ್ದು ಸಂಜೆ ವೇಳೆಗೆ ಮಲ್ಪೆ ಬೀಚಿಗೆ ಬಂದಿದ್ದರು. ಮೂವರು ಸಮುದ್ರದಲ್ಲಿ ಈಜಾಡುತ್ತಿದ್ದು, ಈ ಪೈಕಿ ವೆಂಕಟಾಚಲ ಮುಂದೆ ಅಲೆಗಳೊಂದಿಗೆ ಕೊಚ್ಚಿ ಹೋಗಿದ್ದಾರೆ. ತಕ್ಷಣವೇ ಜೀವರಕ್ಷರ ತಂಡದವರು ಅವರನ್ನು ಹಿಡಿದು ದಡ ಸೇರಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸತ್ರೆಗೆ ದಾಖಲಿಸಿದರೂ, ಅಷ್ಟರಲ್ಲಿ ಮೃತಪಟ್ಟಿದ್ದಾರೆ.
A tragic incident occurred at Hosahitlu beach in Byndoor, where three students drowned while swimming on Tuesday evening. The victims were identified as Ashik Devadiga (15), Suraj Poojary (16), and Saketh Devadiga (18), while another youth, Kaushik Devadiga, survived with the help of locals. The deceased were students of local schools and colleges.
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
09-07-26 11:09 pm
HK News Desk
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈ...
08-07-26 11:04 pm
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
09-07-26 09:11 pm
HK News Staffer
ಹೆಂಗಸರ ವಿಷ್ಯ ಬೇಡವೋ ಶಿಷ್ಯಾ..! ಚಾಡಿ ಹೇಳಿ ಸಾವಿಗೆ...
09-07-26 07:52 pm
ಬೆಳಗಾವಿ ಸಂತೆಯಲ್ಲಿ ಎತ್ತು ಖರೀದಿಸಿ ಕೇರಳಕ್ಕೆ ಸಾಗಿ...
09-07-26 07:49 pm
ಬೆಂಗಳೂರಿನ ಎಂಎನ್ ಸಿ ಕಂಪನಿಯಲ್ಲಿ ಉದ್ಯೋಗ ನೆಪ ಹೇಳಿ...
09-07-26 05:34 pm
ಯಲ್ಲಾಪುರ ಅರಬೈಲ್ ಘಾಟ್ನಲ್ಲಿ ಲಾರಿ-ಕ್ರೂಸರ್ ಮುಖಾಮ...
09-07-26 11:38 am