ಬ್ರೇಕಿಂಗ್ ನ್ಯೂಸ್
13-10-25 04:33 pm Mangalore Correspondent ಕರಾವಳಿ
ಮಂಗಳೂರು, ಅ.13 : ಜಗತ್ತಿನ ಅಗ್ರಗಣ್ಯ ದೇಶಭಕ್ತ ಸಂಘಟನೆ ಆರೆಸ್ಸೆಸ್ ಬಗ್ಗೆ ತಿಳಿಯದ ಪ್ರಿಯಾಂಕ ಖರ್ಗೆ ಒಬ್ಬ ಕೂಪ ಮಂಡೂಕ, ಅಜ್ಞಾನ ತುಂಬಿಕೊಂಡಿರುವ ವ್ಯಕ್ತಿ. ಆರೆಸ್ಸೆಸ್ ಬಗ್ಗೆ ತನ್ನ ಅಪ್ಪನಿಂದಲೇ ಕೇಳಿ ತಿಳಿದುಕೊಳ್ಳಲಿ, ಮೊದಲ ಪ್ರಧಾನಿ ನೆಹರು ಅವರೇ ಆರೆಸ್ಸೆಸ್ ಸೇವೆಯನ್ನು ಪರಿಗಣಿಸಿ ಗಣರಾಜ್ಯ ಪರೇಡ್ ನಲ್ಲಿ ಅವಕಾಶ ಕೊಟ್ಟಿದ್ದರು. ಆರಸ್ಸೆಸ್ ಬಗ್ಗೆ ತಿಳಿದುಕೊಳ್ಳಲು ಶಾಖೆಗೆ ಬರಲಿ ಎಂದು ವಿಪಕ್ಷ ಮುಖ್ಯ ಸಚೇತಕ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಆರೆಸ್ಸೆಸ್ ನೂರು ವರ್ಷ ಪೂರೈಸಿದ್ದಕ್ಕೆ ಪಥಸಂಚಲನದಲ್ಲಿ ಗಣವೇಷ ಧರಿಸಿ ದಂಡ ಹಿಡಿದು ಹೋಗುತ್ತಿರುವುದನ್ನು ಆಕ್ಷೇಪಿಸಿದ್ದಾರೆ. ದಂಡ ಹಿಡಿದಿರುವುದು ಸ್ವಯಂ ರಕ್ಷಣೆಯ ಸಂದೇಶಕ್ಕಾಗಿ ಹೊರತು ಭಯ ಮೂಡಿಸುವುದಕ್ಕಲ್ಲ. ಆರೆಸ್ಸೆಸ್ ಸಮಾಜದಲ್ಲಿ ಭಯೋತ್ಪಾದನೆ ಮೂಡಿಸಿದ ನಿದರ್ಶನ ಇಲ್ಲ.
ದೇಶ- ವಿದೇಶದ ಯಾವುದೇ ಮೂಲೆಯಲ್ಲಿ ದುರಂತಗಳಾದಾಗ ಅಲ್ಲಿ ಜನರ ಸೇವೆಯಲ್ಲಿ ತೊಡಗುವುದು ಆರೆಸ್ಸೆಸ್ ಸ್ವಯಂಸೇವಕರು. ಪ್ರತಿ ನಿತ್ಯ ಆರೆಸ್ಸೆಸ್ ಮತ್ತು ಪರಿವಾರದ ಸಂಘಟನೆಗಳು ದೇಶಾದ್ಯಂತ ಸೇವಾ ಚಟುವಟಿಕೆ ನಡೆಸುತ್ತಾರೆ. ಪರಿಸರ, ಸಂಸ್ಕೃತಿ, ನೀರು, ಆಸ್ಪತ್ರೆ, ಸ್ವಚ್ಚತೆಯಿಂದ ಹಿಡಿದು ಸಮಾಜದ ಎಲ್ಲ ಕ್ಷೇತ್ರಗಳಲ್ಲಿಯೂ ಕೊಡುಗೆ ನೀಡುತ್ತಾರೆ. ದೇಶಾದ್ಯಂತ ಲಕ್ಷಾಂತರ ಸ್ವಯಂಸೇವಕರು ಸ್ವಾರ್ಥ ಬದಿಗಿಟ್ಟು ಸೇವಾಕಾಂಕ್ಷಿಗಳಾಗಿದ್ದಾರೆ. ಆದರೆ ಪ್ರಿಯಾಂಕ ಖರ್ಗೆ ಇದ್ಯಾವುದರ ಅರಿವಿಲ್ಲದೆ, ಲವಲೇಶದ ಗೌರವ ಇಟ್ಟುಕೊಳ್ಳದೆ ಅಹಂಕಾರದ ಮಾತುಗಳನ್ನಾಡಿದ್ದಾರೆ.
ದೇಶಕ್ಕೆ ಇಬ್ಬರು ಪ್ರಧಾನ ಮಂತ್ರಿಗಳನ್ನು ಕೊಟ್ಟ ಸಂಘಟನೆ ಆರೆಸ್ಸೆಸ್. ವ್ಯಕ್ತಿಯಿಂದ ಸಮಾಜ, ಸಮಾಜದಿಂದ ರಾಷ್ಟ್ರ ನಿರ್ಮಾಣ ಎಂಬ ತತ್ವದ ಮೂಲಕ ರಾಷ್ಟ್ರಪ್ರೇಮಿ ವ್ಯಕ್ತಿಗಳನ್ನು ನಿರ್ಮಿಸುವುದು ಆರೆಸ್ಸೆಸ್. ವಾಜಪೇಯಿ, ನರೇಂದ್ರ ಮೋದಿ, ಎಲ್.ಕೆ ಆಡ್ವಾಣಿ ಆರೆಸ್ಸೆಸ್ ಕೊಡುಗೆ. ವಾಜಪೇಯಿ ವ್ಯಕ್ತಿತ್ವವನ್ನು ಕಾಂಗ್ರೆಸ್ ನಾಯಕರೇ ಗುಣಗಾನ ಮಾಡಿದ್ದಾರೆ. ಆರೆಸ್ಸೆಸ್ ಬ್ಯಾನ್ ಗೆ ಹೇಳುವ ಇವರು, ಎಸ್ಡಿಪಿಐ ಬ್ಯಾನ್ ಗೆ ಮುಂದಾಗುತ್ತಾ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜೈ ಎಂದವರಿಗೆ ಯಾವ ಶಿಕ್ಷೆ ಕೊಟ್ಟಿದ್ದೀರಿ. ಸಾರ್ವಜನಿಕ ಸ್ಥಳದಲ್ಲಿ ಪಥಸಂಚಲನ ಮಾಡುವಾಗ ಪೊಲೀಸರ ಅನುಮತಿ ಪಡೆದೇ ಮಾಡಲಾಗುತ್ತದೆ. ದೇಶ ಸೇವೆಯ ಕೆಲಸಕ್ಕೆ ಯಾವ ದೊಣ್ಣೆ ನಾಯಕನ ಪರ್ಮಿಶನ್ನೂ ಬೇಕಾಗಿಲ್ಲ ಎಂದರು.
ಅಷ್ಟಕ್ಕೂ ಧೈರ್ಯ ಇದ್ದರೆ ನಿಷೇಧ ಮಾಡಲಿ. ಕಾಂಗ್ರೆಸ್ ನಾಯಕರ ಮಕ್ಕಳೇ ಆರೆಸ್ಸೆಸ್ ಶಾಖೆಗೆ ಬರುತ್ತಾರೆ, ದೇಣಿಗೆ ಕೊಡುತ್ತಾರೆ. ರಾಜ್ಯದಲ್ಲಿ ಸಾವಿರಾರು ನಿತ್ಯ ಶಾಖೆಗಳಾಗುತ್ತವೆ, ಸಂಘದ ಬಗ್ಗೆ ತಿಳಿದುಕೊಳ್ಳುವ ಆಸ್ಥೆಯಿದ್ದರೆ ಶಾಖೆಗೆ ಬನ್ನಿ ಎಂದು ರವಿಕುಮಾರ್ ಹೇಳಿದರು. ಬಿಕೆ ಹರಿಪ್ರಸಾದ್ ಆರೆಸ್ಸೆಸ್ ಬಗ್ಗೆ ಎಷ್ಟು ಹೇಳಿಕೆ ಕೊಟ್ಟರೂ ಸಚಿವರಾಗುವುದಿಲ್ಲ ಎಂದೂ ಟಾಂಗ್ ಇಟ್ಟರು. ಸುದ್ದಿಗೋಷ್ಟಿಯಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಪ್ರತಾಪಸಿಂಹ ನಾಯಕ್, ಪ್ರೇಮಾನಂದ ಪ್ರಭು, ಸಂಜೀವ ಮಠಂದೂರು ಇದ್ದರು.
BJP MLC and Opposition Chief Whip N. Ravikumar launched a sharp attack on Minister Priyank Kharge, calling him “ignorant” and a “frog in the well” for allegedly not understanding the Rashtriya Swayamsevak Sangh (RSS). Speaking at a press conference in Mangaluru, Ravikumar said the RSS is one of the world’s foremost patriotic organizations engaged in social service across multiple sectors, including environment, healthcare, and education.
16-03-26 05:52 pm
HK News Staffer
ಐಎಎಸ್ ಅಧಿಕಾರಿಯೆಂದು ಪೋಸು ಕೊಟ್ಟು ಜನಸಾಮಾನ್ಯರಿಗೆ,...
16-03-26 03:36 pm
Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪ...
15-03-26 04:27 pm
ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆ ; ತನ...
14-03-26 10:14 pm
ಮಲೆನಾಡಿಗೆ ಇಂಡಿಗೋ ಆಘಾತ ; ವಿಮಾನ ದುರಂತ ಹಿನ್ನೆಲೆ,...
13-03-26 12:09 pm
16-03-26 11:05 pm
Mangaluru Staffee
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
ಇರಾನ್ ದಾಳಿ ಬಗ್ಗೆ ಎಐ ವಿಡಿಯೋ ಆಧರಿತ ಸುಳ್ಳು ಸುದ್ದ...
16-03-26 02:44 pm
ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂ...
16-03-26 12:38 pm
ಒಡಿಶಾದ ಕಟಕ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ; I...
16-03-26 12:34 pm
16-03-26 09:48 pm
Mangaluru Staffer
Moodbidri Inspector Sandesh, Police: ಮೂಡುಬಿದ್...
16-03-26 07:20 pm
Gas Tanker Accident: ಕಟಪಾಡಿ ಹೆದ್ದಾರಿಯಲ್ಲಿ ಗ್ಯ...
16-03-26 02:46 pm
Besant Evening College, Blood Donation: ಬೆಸೆಂ...
15-03-26 09:10 pm
Udupi Accident: ತಾಯಿ-ಮಗ ತೆರಳುತ್ತಿದ್ದ ಸ್ಕೂಟರ್...
14-03-26 09:26 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am