ಬ್ರೇಕಿಂಗ್ ನ್ಯೂಸ್
11-10-25 10:24 pm Mangalore Correspondent ಕರಾವಳಿ
ಬೆಳ್ತಂಗಡಿ, ಅ.11 : ಧರ್ಮಸ್ಥಳ ಸ್ನಾನಘಟ್ಟದ ಬಳಿ ನೂರಾರು ಪೋಸ್ಟ್ ಮಾರ್ಟಂ ಮಾಡಿದ್ದೀನಿ ಎಂದಿರುವ ಎಫ್ಎಸ್ಎಲ್ ತಜ್ಞ ಡಾ. ಮಹಾಬಲ ಶೆಟ್ಟಿ ಅವರಿಗೆ ಝೆಡ್ ಪ್ಲಸ್ ಸೆಕ್ಯುರಿಟಿ ಕೊಡಲಿ. ಚಿನ್ನಯ್ಯಗೆ ಕೊಟ್ಟಿದ್ದೀರಿ, ನನಗೆ ಯಾಕೆ ಕೊಟ್ಟಿಲ್ಲ. ನನಗೂ ಮಟ್ಟಣ್ಣನವರ್ ನಿಂದ ಜೀವ ಭಯ ಇದೆ ಎಂದು ಹೇಳಿದ್ದಾರಂತೆ. ನಾನು ಕೂಡ ಪೊಲೀಸರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಮಹಾಬಲ ಶೆಟ್ಟಿ ಹಿಂದೆ ಮುಂದೆ ಎಲ್ಲ ಬ್ಲಾಕ್ ಕ್ಯಾಟ್ ಕಮಾಂಡೋ ಕೊಡಿಸಿ ಎಂದು ಸೌಜನ್ಯಾ ಪರ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ವ್ಯಂಗ್ಯ ಮಾಡಿದ್ದಾರೆ.
ಮಹಾಬಲ ಶೆಟ್ಟಿಯವರು ಮೂರು ಸಾವಿರ ಪೋಸ್ಟ್ ಮಾರ್ಟಂ ಮಾಡಿದ್ದಾರಂತೆ. 32 ಸಾವಿರ ಬೋನ್ ಸರ್ಟಿಫಿಕೇಟ್ ಕೊಟ್ಟಿದ್ದಾರಂತೆ. ದಿನಕ್ಕೊಂದು ಇಂತ ಸರ್ಟಿಫಿಕೇಟ್ ಕೊಟ್ಟರೂ 82 ವರ್ಷ ಬೇಕಾಗುತ್ತದೆ. ಕೇಳಿಸಿಕೊಳ್ತಾರೆ ಅಂತ ವಟ್ರಾಸಿ ಹೇಳಿಬಿಡೋದಾ. ಸಂತೋಷ್ ರಾವ್ ಆರೋಪಿ ಅಂತ ಪ್ರಮಾಣ ಮಾಡ್ತಾರಂತೆ. ಇವರೊಬ್ಬ ವೈದ್ಯಕೀಯ ಎಕ್ಸ್ ಪರ್ಟ್ ಮಾತ್ರ. ವೈಜ್ಞಾನಿಕವಾಗಿ ಏನು ದಾಖಲೆ ಸಿಗುತ್ತೋ ಅದನ್ನು ಪರಿಶೀಲಿಸಿ ರಿಪೋರ್ಟ್ ಕೊಡೋದು ಕೆಲಸ. ಪ್ರಮಾಣ ಮಾಡಲಿಕ್ಕೇನಿದೆ ಇವರಿಗೆ. ಇವರು ಯಾರ ಪರವಾಗಿದ್ದಾರೆ ಅಂತ ಅವರ ಹೇಳಿಕೆಯಲ್ಲೇ ತಿಳಿಯುತ್ತದೆ.
ನಾನು ಕೇಳ್ತಿರೋದು, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಧರ್ಮಸ್ಥಳದಿಂದ ಬರೀ ಏಳು ಕಿಮೀ ಅಂತರದಲ್ಲಿ ಇರುವಾಗ ಯಾಕೆ 76 ಕಿಮೀ ದೂರದ ಖಾಸಗಿ ಆಸ್ಪತ್ರೆ ಒಯ್ಯಬೇಕಿತ್ತು ಅಂತ. ಇವರು ಇಷ್ಟೆಲ್ಲ ಪೋಸ್ಟ್ ಮಾರ್ಟಂ ಮಾಡಿದ್ದರೆ ಅದರ ಬಿಲ್ ಕೊಟ್ಟಿದ್ದು ಯಾರು ಅಂತ ಕೇಳಿದ್ದೇನೆ. ಅರೆ, ಈ ಪ್ರಶ್ನೆ ಕೇಳಬಾರದಾ.. ಇದನ್ನು ಕೇಳಿದ್ರೆ ನಾನು ಜೀವ ತೆಗೆಯುತ್ತೇನೆ, ಬೆದರಿಕೆ ಹಾಕ್ತೀನಿ ಅಂತಿದಾರೆ. ಪೋಸ್ಟ್ ಮಾರ್ಟಂ ಯಾಕೆ ಪ್ರತಿ ಬಾರಿಯೂ ಅಷ್ಟು ದೂರಕ್ಕೆ ಒಯ್ದು ಮಾಡುತ್ತಿದ್ದರು. ಇವರನ್ನೇ ಯಾಕೆ ಕರೀತಿದ್ರು ಅಂತ ಕೇಳುತ್ತೇನೆ. ಯಾಕೆ ಇವರನ್ನು ಪ್ರಶ್ನೆ ಮಾಡಬಾರದು ಎಂದು ಗಿರೀಶ್ ಮಟ್ಟಣ್ಣನವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡೋದು ಯಾಕೆ ಮಹಾಬಲ ಶೆಟ್ಟಿ. ಯಾರನ್ನೋ ಪ್ರಶ್ನೆ ಮಾಡಿದ್ರೆ ಇವರು ಯಾಕೆ ಉತ್ತರಿಸಬೇಕು ಎಂದು ಮಟ್ಟಣ್ಣನವರ್ ಪ್ರಶ್ನಿಸಿದರು. ಮಹೇಶ್ ಶೆಟ್ಟಿ ತಿಮರೋಡಿ ತಲೆಮರೆಸಿಕೊಳ್ಳಲು ಯಾರನ್ನೂ ರೇಪ್ ಮಾಡಿ ಹೋಗಿಲ್ಲ. ರೇಪ್ ಮಾಡಿದವರೇ ಓಡಿ ಹೋಗಿಲ್ಲ. ಅಕ್ರಮ ಶಸ್ತ್ರಾಸ್ತ್ರ ಕೇಸಲ್ಲಿ ಜಾಮೀನು ಏನೋ ಸಿಕ್ಕಿಲ್ಲ ಅಷ್ಟೇ. ನಿಜಕ್ಕಾದ್ರೆ ಅದರ ಬಗ್ಗೆ ಕೇಸನ್ನೇ ಮಾಡಬೇಕಿರಲಿಲ್ಲ. ಇವರು ಕೇಸ್ ಮಾಡಿದ್ದಾರೆ ಅಷ್ಟೇ ಎಂದು ಹೇಳಿದರು. ನಾವು ಎಲ್ಲದಕ್ಕೂ ದಾಖಲೆ ತೆಗೆದಿದ್ದೇವೆ, ಅವನ್ನು ಎಲ್ಲಿ ತಲುಪಿಸಬೇಕೋ ಅಲ್ಲಿಗೆ ತಲುಪಿಸಿದ್ದೇವೆ ಎಂದರು.
In Belthangady, activist Girish Mattannavar, known for his outspoken stance in the Soujanya case, took a jibe at forensic expert Dr. Mahabala Shetty, who recently claimed to have conducted hundreds of post-mortems near Dharmasthala.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am