ಬ್ರೇಕಿಂಗ್ ನ್ಯೂಸ್
18-09-25 06:11 pm Mangalore Correspondent ಕರಾವಳಿ
ಮಂಗಳೂರು, ಸೆ.18 : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜಾತಿ ಗಣತಿ ಮಾಡುತ್ತಿರುವುದನ್ನು ಸ್ವಾಗತಿಸುತ್ತೇನೆ. ಆದರೆ ತರಾತುರಿಯಲ್ಲಿ ಈ ಮಹತ್ತರ ಕೆಲಸವನ್ನು ಮಾಡಿ ಅವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ಆಗುವಂತಾಗಬಾರದು. ಬಂಟ ನಾಡವರು ಒಂದೇ ಆಗಿದ್ದು, ಸಮಾಜವನ್ನು ಪ್ರತ್ಯೇಕಿಸುವ ಕೆಲಸ ಮಾಡಬೇಡಿ. 118 ವರ್ಷಗಳ ಹಿಂದೆಯೇ ನಾವು ಬಂಟರು ಮತ್ತು ನಾಡವರು ಒಟ್ಟಿಗಿದ್ದೇವೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಂಟರು ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿದ್ದಾರೆ. ನಾಡವರು ಕುಂದಾಪುರ, ಸಾಗರ, ಶಿವಮೊಗ್ಗ ಭಾಗದಲ್ಲಿ ಇದ್ದಾರೆ. ನಾವು ಪರಸ್ಪರ ಸಂಬಂಧಿಕರಾಗಿದ್ದು, ಜೊತೆಗೇ ಇದ್ದೇವೆ. ನೂರು ವರ್ಷಗಳ ಹಿಂದೆಯೇ ನಾವು ಒಟ್ಟಿಗಿದ್ದೇವೆ. ನಮ್ಮನ್ನು ಬಂಟ ನಾಡವ ಎಂದೇ ಗುರುತಿಸಬೇಕು ಎಂದು ಸರಕಾರಕ್ಕೂ ಮನವಿ ಮಾಡಿದ್ದೇವೆ. ಆದರೆ ಈಗ ಜಾತಿ- ಶೈಕ್ಷಣಿಕ ಸಮೀಕ್ಷೆಯಲ್ಲಿ ಬಂಟರು ಎಂದು ಮಾತ್ರ ಗುರುತಿಸಿದ್ದಾರೆ. ನಾಡವರು ಏನೆಂದು ಗುರುತಿಸಬೇಕು ಎಂಬ ಬಗ್ಗೆ ಉಲ್ಲೇಖ ಇಲ್ಲ. ಇದರಿಂದ ಸಮಾಜದಲ್ಲಿ ಗೊಂದಲ ಉಂಟಾಗಿದೆ.

ನಿನ್ನೆ ಸ್ಪೀಕರ್ ಯುಟಿ ಖಾದರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುವ ವರೆಗೂ ನಮಗೆ ಯಾವ ರೀತಿಯ ಸಮೀಕ್ಷೆಯೆಂದು ಮಾಹಿತಿ ಇರಲಿಲ್ಲ. ಆಕ್ಷೇಪ ಸಲ್ಲಿಸುವುದಕ್ಕೂ ಸಮಯ ಇರಲಿಲ್ಲ. ಖಾದರ್ ಅವರಲ್ಲಿ ಈ ಕಾಲಂ ಸರಿಪಡಿಸಬೇಕೆಂದು ಕೇಳಿಕೊಂಡಿದ್ದು ಏಪ್ ನಲ್ಲಿ ಸರಿ ಮಾಡಿಸುವುದಾಗಿ ಅವರು ಒಪ್ಪಿದ್ದಾರೆ. ಸಮೀಕ್ಷೆಯ ವೇಳೆ ಮೊಬೈಲ್ ಏಪ್ ನಲ್ಲಿರುವ 8ನೇ ಕಾಲಂನಲ್ಲಿ ಧರ್ಮ ಎಂದಿರುವ ಜಾಗದಲ್ಲಿ ಹಿಂದೂ ಎಂದು ನಮೂದಿಸಿ, 9ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ (ಕೋಡ್ ಸಂಖ್ಯೆ ಎ-0227) ಬಂಟ್ ಎಂದು ನಮೂದಿಸಬೇಕು. 11ನೇ ಕಾಲಂನಲ್ಲಿ ಸಮಾನಾರ್ಥಕ ಪದ ಎಂದಿರುವಲ್ಲಿ ನಾಡವ ಎಂದು ನಮೂದಿಸಬೇಕು ಎಂದು ಸಮಾಜ ಬಾಂಧವರಲ್ಲಿ ವಿನಂತಿಸುತ್ತಿದ್ದೇನೆ ಎಂದು ಅಜಿತ್ ರೈ ಹೇಳಿದ್ದಾರೆ.
ಇದೇ ರೀತಿ ನಾಡವ ಎಂದು ಕರೆಸಿಕೊಳ್ಳುವವರು 9ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ (ಕೋಡ್ ಸಂಖ್ಯೆ ಎ-1026) ನಾಡವ ಎಂದು ನಮೂದಿಸಿ, ಸಮಾನಾರ್ಥ ಪದ ಇರುವ (ಎ-0227) ಜಾಗದಲ್ಲಿ ಬಂಟ್ ಎಂದು ನಮೂದಿಸಬೇಕಾಗಿದೆ. ಇಲ್ಲದಿದ್ದರೆ ಸಮಾಜದಲ್ಲಿ ಜನರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ. ನಮ್ಮ ಸಮಾಜದವರು ದೇಶ- ವಿದೇಶದಲ್ಲಿ ಹರಡಿದ್ದು, ಸುಮಾರು 20 ಲಕ್ಷಕ್ಕೂ ಹೆಚ್ಚು ಇದ್ದಾರೆ. ಆದರೂ 40 ಶೇಕಡಾ ಜನ ಬಡತನದಲ್ಲಿಯೇ ಇದ್ದಾರೆ. ಕಾಂತರಾಜು ಆಯೋಗದಲ್ಲಿ ನಮ್ಮ ಸಂಖ್ಯೆಯನ್ನು 3.15 ಲಕ್ಷವೆಂದು ತಪ್ಪಾಗಿ ತೋರಿಸಿದ್ದಾರೆ. ಆ ಮಾಹಿತಿಯನ್ನು ಸ್ವೀಕರಿಸದೆ ಸರಿಯಾದ ಸಮೀಕ್ಷೆಯನ್ನು ಮಾಡಬೇಕಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಕೇಳಿಕೊಳ್ಳುತ್ತೇನೆ ಎಂದರು.
ಬಾಂಧವ್ಯ ಹೆಸರಲ್ಲಿ ಸಮೀಕ್ಷೆ
ಬಂಟ ಸಮಾಜದ ಸದಸ್ಯರನ್ನು ಗುರುತಿಸಲು ಮತ್ತು ನಮ್ಮ ಮೂರು ಜಿಲ್ಲೆಗಳಲ್ಲದೆ ದೇಶ- ವಿದೇಶದಲ್ಲಿ ಒಟ್ಟು ಎಷ್ಟು ಜನರಿದ್ದಾರೆ, ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿಯಲು ನಾವು ಬಂಟರ ಸಂಘದ ವತಿಯಿಂದ ಸಮೀಕ್ಷೆ ಮಾಡುತ್ತಿದ್ದೇವೆ. ಮೊಬೈಲ್ ಏಪ್ ಮೂಲಕ ಬಾಂಧವ್ಯ ಎನ್ನುವ ಹೆಸರಲ್ಲಿ ಸಮೀಕ್ಷೆ ನಡೆಸಲಾಗುತ್ತಿದ್ದು, ವಿಶ್ವ ಬಂಟರ ಮಾಹಿತಿ ಕೋಶವನ್ನು ತಯಾರಿಸಲು ಮುಂದಡಿ ಇಟ್ಟಿದ್ದೇವೆ. ಇದರಲ್ಲಿ ನಮ್ಮ ಸಮಾಜದ ಸರ್ವ ಜನರು ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಅಜಿತ್ ಕುಮಾರ್ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಕೋಶಾಧಿಕಾರಿ ಸಿಎಂ ರಾಮಮೋಹನ ರೈ, ಜತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೆದಡಿ ಉಪಸ್ಥಿತರಿದ್ದರು.
Ajith Kumar Rai, President of the Bunt Nadavara Matru Sangha, has urged the Karnataka State Commission for Backward Classes to avoid creating confusion and division within communities during the ongoing caste and socio-educational survey.
16-03-26 05:52 pm
HK News Staffer
ಐಎಎಸ್ ಅಧಿಕಾರಿಯೆಂದು ಪೋಸು ಕೊಟ್ಟು ಜನಸಾಮಾನ್ಯರಿಗೆ,...
16-03-26 03:36 pm
Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪ...
15-03-26 04:27 pm
ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆ ; ತನ...
14-03-26 10:14 pm
ಮಲೆನಾಡಿಗೆ ಇಂಡಿಗೋ ಆಘಾತ ; ವಿಮಾನ ದುರಂತ ಹಿನ್ನೆಲೆ,...
13-03-26 12:09 pm
16-03-26 11:05 pm
Mangaluru Staffee
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
ಇರಾನ್ ದಾಳಿ ಬಗ್ಗೆ ಎಐ ವಿಡಿಯೋ ಆಧರಿತ ಸುಳ್ಳು ಸುದ್ದ...
16-03-26 02:44 pm
ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂ...
16-03-26 12:38 pm
ಒಡಿಶಾದ ಕಟಕ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ; I...
16-03-26 12:34 pm
16-03-26 09:48 pm
Mangaluru Staffer
Moodbidri Inspector Sandesh, Police: ಮೂಡುಬಿದ್...
16-03-26 07:20 pm
Gas Tanker Accident: ಕಟಪಾಡಿ ಹೆದ್ದಾರಿಯಲ್ಲಿ ಗ್ಯ...
16-03-26 02:46 pm
Besant Evening College, Blood Donation: ಬೆಸೆಂ...
15-03-26 09:10 pm
Udupi Accident: ತಾಯಿ-ಮಗ ತೆರಳುತ್ತಿದ್ದ ಸ್ಕೂಟರ್...
14-03-26 09:26 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am