ಬ್ರೇಕಿಂಗ್ ನ್ಯೂಸ್
18-09-25 02:42 pm Mangalore Correspondent ಕರಾವಳಿ
ಮಂಗಳೂರು, ಸೆ.18 : ನಗರದ ಸ್ಟೇಟ್ ಬ್ಯಾಂಕ್ ವೃತ್ತದ ಬಳಿ ವ್ಯಕ್ತಿಯೊಬ್ಬ ಟ್ರಾಫಿಕ್ ಪೊಲೀಸರ ಜೊತೆಗೆ ದುರ್ವರ್ತನೆ ತೋರಿದ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಪ್ರಕರಣ ದಾಖಲಿಸುವಂತೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸೂಚನೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಘಟನಾ ಸ್ಥಳದ ಸಿಸಿಟಿವಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಟ್ರಾಫಿಕ್ ಪೊಲೀಸ್ ಪೇದೆಯೊಬ್ಬರು ರಸ್ತೆ ದಾಟುತ್ತಿದ್ದ ಮಹಿಳೆಯರಿಗೆ ನೆರವಾಗಲು ವಾಹನಗಳನ್ನು ಕೈಹಿಡಿದು ನಿಲ್ಲಿಸುತ್ತ ಅವರನ್ನು ದಾಟಿಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಸ್ಕೂಟರಿನಲ್ಲಿ ನೇರವಾಗಿ ನುಗ್ಗಿ ಬಂದಿದ್ದು, ಇದಕ್ಕೆ ರಸ್ತೆ ಮಧ್ಯದಲ್ಲಿದ್ದ ಟ್ರಾಫಿಕ್ ಪೊಲೀಸ್ ಸ್ಕೂಟರ್ ಸವಾರನ ಬೆನ್ನಿಗೆ ಸವರುವ ರೀತಿ ಏಯ್ ಅಂತ ಹೊಡೆದಿದ್ದರು.

ಆದರೆ ಇದನ್ನೇ ನೆಪವಾಗಿಸಿಕೊಂಡ ಆ ವ್ಯಕ್ತಿ ಸ್ಕೂಟರನ್ನು ನಿಲ್ಲಿಸಿ ಟ್ರಾಫಿಕ್ ಪೇದೆಯ ಜೊತೆಗೆ ವಾಗ್ವಾದ ನಡೆಸಿದ್ದಾನೆ. ನನ್ನ ಮೇಲೆ ನೀನು ಹೇಗೆ ಕೈ ಮಾಡಿದ್ದೀಯಾ. ನಿನಗೆ ಅಂಥ ಅಧಿಕಾರ ಕೊಟ್ಟವರು ಯಾರು, ನೀನು ನನಗೆ ಹೊಡೆದಿದ್ದು ಯಾಕೆ, ಈಗಲೇ ಕ್ಷಮೆ ಕೇಳಬೇಕು ಎಂದು ಜೋರು ಧ್ವನಿಯಲ್ಲಿ ಬೈದಾಡುತ್ತಾ ಸೀನ್ ಕ್ರಿಯೇಟ್ ಮಾಡಿದ್ದಾನೆ. ಇದನ್ನು ಅಲ್ಲಿದ್ದ ಮತ್ತೊಬ್ಬ ವ್ಯಕ್ತಿ ಮೊಬೈಲಿನಲ್ಲಿ ಚಿತ್ರೀಕರಿಸಿದ್ದು ಜಾಲತಾಣದಲ್ಲಿ ಹಾಕಿದ್ದರು. ಇದರ ವಿಡಿಯೋ ಪೊಲೀಸ್ ಕಮಿಷನರ್ ಇರುವ ಗ್ರೂಪಿನಲ್ಲಿ ಷೇರ್ ಮಾಡಲಾಗಿತ್ತು.
ವಿಡಿಯೋ ಆಧರಿಸಿ ಪೊಲೀಸ್ ಕಮಿಷನರ್ ಸ್ಥಳದ ಸಿಸಿಟಿವಿಯನ್ನು ತೆಗೆದು ಪರಿಶೀಲನೆಗೆ ಒಳಪಡಿಸಿದ್ದಾರೆ. ಟ್ರಾಫಿಕ್ ಪೇದೆ ತನ್ನ ಕರ್ತವ್ಯ ಮಾಡುತ್ತಿರುವುದು ವಿಡಿಯೋದಲ್ಲಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಸಾರ್ವಜನಿಕ ಜಾಗದಲ್ಲಿ ಪೊಲೀಸರನ್ನು ನಿಂದಿಸಿದ ಬಗ್ಗೆ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ.
ಅಲ್ಲದೆ, ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದು ಮಂಗಳೂರಿನಲ್ಲಿ ಕೆಲವು ಬುದ್ಧಿವಂತರು ತಾವೆಲ್ಲ ಹೀರೋಗಳು, ಪೊಲೀಸರು ಅವರನ್ನು ಪ್ರಶ್ನೆ ಮಾಡುವಂತಿಲ್ಲ ಎಂದುಕೊಂಡಿದ್ದಾರೆ. ಪೊಲೀಸರಿಗೆ ಕಾನೂನು ಈ ಅಧಿಕಾರವನ್ನು ಕೊಟ್ಟಿದೆ. ಯಾವುದೇ ಸಂದರ್ಭ ತನ್ನ ಉಪಸ್ಥಿತಿಯಲ್ಲಿ ಅಪರಾಧ ನಡೆದಾಗ, ಕಾನೂನು ಉಲ್ಲಂಘನೆಯಾದ ಸಂದರ್ಭದಲ್ಲಿ ಪೊಲೀಸರಿಗೆ ಬಲಪ್ರಯೋಗ ಮಾಡಲು ಅಧಿಕಾರ ಇದೆ. ಹೀಗಿರುವಾಗ ರಸ್ತೆಯಲ್ಲಿ ಟ್ರಾಫಿಕ್ ಕರ್ತವ್ಯ ಮಾಡುವ ಪೊಲೀಸರನ್ನು ಪ್ರಶ್ನಿಸುವ, ನಿಂದಿಸುವ ಅಧಿಕಾರ ಯಾರಿಗೂ ಇಲ್ಲ. ಅಲ್ಲಿದ್ದ ಪೊಲೀಸರೇ ಇಂಥ ಘಟನೆ ಆದಕೂಡಲೇ ಕೇಸು ದಾಖಲಿಸಿದರೆ ಇದೆಲ್ಲ ಮರುಕಳಿಸುವುದಿಲ್ಲ. ಪೊಲೀಸರು ಯಾವತ್ತೂ ತಾವು ಅಸಹಾಯಕ ಎಂದುಕೊಳ್ಳಬಾರದು ಎಂದು ಕಿವಿಮಾತು ಹೇಳಿದ್ದಾರೆ.
A video showing a man misbehaving with a traffic police constable near the State Bank Circle in Mangaluru has gone viral, prompting swift action from City Police Commissioner Sudhir Reddy, who has directed that an FIR be registered against the individual for obstructing a public servant and using abusive language in public.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am