ಬ್ರೇಕಿಂಗ್ ನ್ಯೂಸ್
26-12-20 04:20 pm Mangalore Correspondent ಕರಾವಳಿ
ಮಂಗಳೂರು, ಡಿ.26: ತನ್ನನ್ನು ಯುವಕನೊಬ್ಬ ಹಿಂಬಾಲಿಸಿಕೊಂಡು ಬಂದಿದ್ದ ಪ್ರಕರಣದಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಸ್ಪಷ್ಟನೆ ನೀಡಿದ್ದಾರೆ. ಆತನಲ್ಲಿ ದುರುದ್ದೇಶ ಇರುತ್ತಿದ್ದರೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದರು. ಸುಮ್ಮನೆ ಬಿಟ್ಟು ಕಳುಹಿಸುವ ಪ್ರಮೇಯ ಬರುತ್ತಿರಲಿಲ್ಲ ಎಂದು ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ವೇಳೆ ಪತ್ರಕರ್ತರು ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಾದರ್, ಬೆಂಗಾವಲು ವಾಹನದ ಸಿಬಂದಿಗಳು ತಮ್ಮ ಕೆಲಸ ಮಾಡಿದ್ದಾರೆ. ಪೊಲೀಸರು ನಮ್ಮ ಗಮನಕ್ಕೇ ತರುವ ಮುನ್ನವೇ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ರೆಡ್ ಹ್ಯಾಂಡ್ ಆಗಿ ಬಂಧಿಸಲು ಮುಂದಾಗಿದ್ದರು. ಬಳಿಕ ವಶಕ್ಕೆ ಪಡೆದು ವಿಚಾರಿಸಿದಾಗ, ಆತನಲ್ಲಿ ದುರುದ್ದೇಶ ಇರಲಿಲ್ಲ ಎನ್ನುವುದನ್ನು ತಿಳಿದು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಇಲ್ಲಿ ಆತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಅನ್ನುವುದು ಮುಖ್ಯವಲ್ಲ. ಆತನಲ್ಲಿ ದುರುದ್ದೇಶ ಇರುತ್ತಿದ್ದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದರು, ಸುಮ್ಮನೆ ಬಿಡುತ್ತಿರಲಿಲ್ಲ ಎಂದು ಖಾದರ್ ಹೇಳಿದರು.
ನೈಟ್ ಕರ್ಫ್ಯೂ ವಿಧಿಸಿ ಹಿಂಪಡೆದ ವಿಚಾರದಲ್ಲಿ ರಾಜ್ಯ ಸರಕಾರವನ್ನು ಟೀಕಿಸಿದ ಯು.ಟಿ.ಖಾದರ್, ಬ್ರಿಟನ್ ವೈರಸ್ ವಿಚಾರದಲ್ಲಿ ರಾಜ್ಯ ಸರಕಾರ ಎಡವಟ್ಟು ಮಾಡಿಕೊಂಡಿದೆ. ಸರಕಾರಕ್ಕೆ ಸಲಹೆ ಕೊಡಲು ತಜ್ಞರ ಕಮಿಟಿ ಇರುತ್ತದೆ. ಹಾಗಿದ್ದರೂ, ತಜ್ಞರ ಸಲಹೆ ಪಡೆಯದೇ ಇಂಥ ನಿರ್ಧಾರ ತೆಗೆದುಕೊಂಡು ಜನರ ಮುಂದೆ ನಗೆಪಾಟಲಿಗೆ ಒಳಗಾಗಿದ್ದಾರೆ. ಸರಕಾರದ ಸಚಿವರು, ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಜನರ ಮೇಲೆ ಪರಿಣಾಮ ಬೀರುತ್ತಿದೆ. ಕೊರೊನಾ ರೂಪಾಂತರ ವಿದೇಶದಲ್ಲಿ ಮಾತ್ರ ನಡೆಯುತ್ತದೆ ಎನ್ನಲಾಗದು. ಭಾರತದಲ್ಲೂ ಇಂತಹ ಬದಲಾವಣೆ ಅಲ್ಲಗಳೆಯುವಂತಿಲ್ಲ. ವಿದೇಶದ ಪ್ರಯಾಣಿಕರಿಗೆ ಕ್ವಾರಂಟೈನ್, ಆರ್ ಟಿಪಿಸಿಆರ್ ಟೆಸ್ಟಿಂಗ್ ಬಗ್ಗೆ ಹೇಳುತ್ತಿದೆ. ಆದರೆ ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ನಡೆಯುತ್ತಿಲ್ಲ ಎಂದು ಹೇಳಿದರು.
ಶಾಲೆಗಳ ಆರಂಭದ ಬಗ್ಗೆಯೂ ಸರಕಾರದಲ್ಲಿ ಗೊಂದಲ ಇದೆ. ಸರಕಾರ ಈ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಬೇಕು. ಆಫ್ ಲೈನ್, ಆನ್ ಲೈನ್ ಎರಡು ಆಯ್ಕೆಯ ಅವಕಾಶ ನೀಡುವುದು ಸರಿಯಲ್ಲ. ಆಫ್ ಲೈನ್ ಶುರುವಾದ ಬಳಿಕ ಆನ್ ಲೈನ್ ಸೂಕ್ತವೇ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: ‘ಖಾದರ್ ಕೊಲೆಯತ್ನ’ ಠುಸ್ ; ಕಾರ್ಯಕರ್ತನೇ ಹಿಂಬಾಲಿಸಿದ್ದು! ಪ್ರತಿಭಟನೆ ರದ್ದು! ಕಾಂಗ್ರೆಸ್ ನಾಯಕರು ಬೇಸ್ತು !!
U T Khader car followed by Unidentified Men on Bike has got a full stop after it came to picture that the Men following the car was a congress members son. Khader himself briefs the incident to the media persons.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm