ಬ್ರೇಕಿಂಗ್ ನ್ಯೂಸ್
24-12-20 03:55 pm Mangalore Correspondent ಕರಾವಳಿ
ಮಂಗಳೂರು, ಡಿ.24: ಮಾಜಿ ಸಚಿವ ಯು.ಟಿ.ಖಾದರ್ ಕೊಲೆಸಂಚು, ಕೊಲೆಯತ್ನದ ಸುದ್ದಿ ಠುಸ್ ಆಗಿದೆ. ಘಟನೆ ಬಗ್ಗೆ ಶಂಕಿತ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆತ ಯಾವುದೇ ಸಂಚಿನ ಭಾಗವಾಗಿರಲಿಲ್ಲ ಎಂಬ ಅಂಶ ತಿಳಿದುಬರುತ್ತಲೇ ಪೊಲೀಸರೇ ಬೇಸ್ತು ಬಿದ್ದಿದ್ದಾರೆ.
ನಿನ್ನೆ ಸಂಜೆ ಯು.ಟಿ.ಖಾದರ್ ದೇರಳಕಟ್ಟೆಯಿಂದ ಮಂಗಳೂರಿಗೆ ಬರುತ್ತಿದ್ದಾಗ, ಬೈಕಿನಲ್ಲಿ ಬರುತ್ತಿದ್ದ ಯುವಕನೊಬ್ಬ ಹಿಂಬಾಲಿಸಿಕೊಂಡು ಬಂದಿದ್ದಾನೆ ಎಂಬ ಸುದ್ದಿ ಊಹಾಪೋಹಕ್ಕೆ ಕಾರಣವಾಗಿತ್ತು. ಯು.ಟಿ.ಖಾದರ್ ತುರ್ತಾಗಿ ಬೆಂಗಳೂರಿಗೆ ಪ್ರಯಾಣಿಸಲು ದೇರಳಕಟ್ಟೆಯಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಕಾರಿನ ಜೊತೆ ಎಸ್ಕಾರ್ಟ್ ನೀಡುತ್ತಿದ್ದ ಪೊಲೀಸರ ವಾಹನವೂ ಇತ್ತು. ಈ ವೇಳೆ, ಬೈಕಿನಲ್ಲಿ ಯುವಕ ಹಿಂಬಾಲಿಸಿಕೊಂಡು ಬರುತ್ತಿದ್ದುದನ್ನು ಗಮನಿಸಿದ ಪೊಲೀಸರು ಸಂಶಯಗೊಂಡು ನಂತೂರು ಸರ್ಕಲ್ ನಲ್ಲಿ ಆತನನ್ನು ವಶಕ್ಕೆ ಪಡೆಯಲು ಯತ್ನಿಸಿದ್ದಾರೆ. ಆದರೆ, ಆತ ಪೊಲೀಸರನ್ನು ಕಂಡು ಅಲ್ಲಿಯೇ ಯುಟರ್ನ್ ಪಡೆದು ಪರಾರಿಯಾಗಿದ್ದ.
ಪೊಲೀಸರು ಬಳಿಕ ಬೈಕ್ ನಂಬರ್ ನೋಟ್ ಮಾಡಿ, ಟ್ರಾಫಿಕ್ ಪೊಲೀಸರಿಗೆ ವಿಷಯ ತಿಳಿಸಿದ್ದರು. ಕಂಕನಾಡಿ ನಗರ ಠಾಣೆಯ ಪೊಲೀಸರು ರಾತ್ರೋರಾತ್ರಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ, ವಿಚಾರಣೆಯಲ್ಲಿ ಯುವಕ ಅಮಾಯಕ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ, ಹೆಲ್ಮೆಟ್ ಜೊತೆಗೆ ಯುವಕ ಕಿವಿಗೆ ಇಯರ್ ಫೋನ್ ಹಾಕ್ಕೊಂಡು ಬಂದಿದ್ದ. ಯಾವುದೋ ಕೆಲಸಕ್ಕಾಗಿ ದೇರಳಕಟ್ಟೆಗೆ ತೆರಳಿದ್ದ ಆತ ತನ್ನ ಎಸ್ಡೀ ಬೈಕಿನಲ್ಲಿ ರೊಯ್ಯನೆ ಬರುತ್ತಿದ್ದ. ಈ ವೇಳೆ, ಪೊಲೀಸರ ಸೂಚನೆಯಾಗಲೀ, ಖಾದರ್ ಜೊತೆಗೆ ಎಸ್ಕಾರ್ಟ್ ವಾಹನ ಬರುತ್ತಿದ್ದುದನ್ನು ಗಮನಿಸಿರಲಿಲ್ಲ. ಕ್ರಿಮಿನಲ್ ಹಿನ್ನೆಲೆಯೂ ಇಲ್ಲದ ಯುವಕನನ್ನು ವಿಚಾರಣೆ ನಡೆಸಿ, ಪೊಲೀಸರು ಮರಳಿ ಕಳಿಸಿಕೊಟ್ಟಿದ್ದರು.
ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯರ ಮಗ !
ಇತ್ತ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸುತ್ತಲೇ ಯು.ಟಿ.ಖಾದರ್ ಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಫೋನ್ ಹೋಗಿತ್ತು. ಆತ ನಮ್ಮದೇ ಹುಡುಗ. ಬೋಳೂರಿನ ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯೆಯೊಬ್ಬರ ಮಗ ಎಂದು ಹೇಳಿದ್ದಾರೆ. ಬಳಿಕ ಸ್ವತಃ ಆತನ ತಾಯಿ ಯು.ಟಿ.ಖಾದರ್ ಗೇ ಫೋನ್ ಮಾಡಿ, ಹುಡುಗ ಏನೋ ಮಕ್ಕಳಾಟಿಕೆ ಮಾಡಿದ್ದಾನೆ ಎಂದುಸುರಿದ್ದಾರೆ. ಅಲ್ಲೀ ವರೆಗೂ ಘಟನೆಯ ಮೈಲೇಜ್ ಪಡೆಯಲು ಹೋಗಿದ್ದ ಖಾದರ್ ಸಾಹೇಬ್ರಿಗೂ ಅಷ್ಟರಲ್ಲಿ ಬಾಯಿ ಕಟ್ಟಿಹೋಗಿತ್ತು.
ಬೇಸ್ತು ಬಿದ್ದ ಕಾಂಗ್ರೆಸ್ ನಾಯಕರು
ಇದಕ್ಕಿಂತಲೂ ವಿಪರ್ಯಾಸ ಅಂದರೆ, ಕಾಂಗ್ರೆಸ್ ನಾಯಕರು ದಿಢೀರ್ ಪ್ರತಿಭಟನೆಗೆ ನಿರ್ಧರಿಸಿದ್ದು. ಮಾಜಿ ಸಚಿವರ ಕೊಲೆಯತ್ನ ನಡೆದಿದೆ ಎನ್ನುವ ಸುದ್ದಿಯನ್ನು ಪರಾಮರ್ಶಿಸದೆ ಕಾಂಗ್ರೆಸ್ ಜಿಲ್ಲಾ ಘಟಕ ಪ್ರತಿಭಟನೆಗೆ ಕರೆ ನೀಡಿತ್ತು. ಡಿ.24ರ ಬೆಳಗ್ಗೆ ಹತ್ತು ಗಂಟೆಗೆ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಮಾಧ್ಯಮಗಳಿಗೆ ಸಂದೇಶವೂ ಹೋಗಿತ್ತು. ರಾತ್ರೋರಾತ್ರಿ ಇವೆಲ್ಲ ಬೆಳವಣಿಗೆ ನಡೆದಿದ್ದು, ಯುವಕ ಕಾಂಗ್ರೆಸ್ ಕಾರ್ಯಕರ್ತರದ್ದೇ ಮಗ ಎನ್ನುವ ವಿಚಾರ ತಿಳಿದ ಪಕ್ಷದ ನಾಯಕರಿಗೆ ಮುಖ ಮುಚ್ಚಿಕೊಳ್ಳುವ ಸ್ಥಿತಿ. ಪ್ರತಿಭಟನೆಯನ್ನು ಅಷ್ಟೇ ತುರ್ತಾಗಿ ರದ್ದುಪಡಿಸಿದ್ದಾಗಿ ಬೆಳಗ್ಗೆ ಮರು ಮೆಸೇಜ್ ಹಾಕಿದ್ದರು. ಕೆಲವು ಪ್ರಮುಖ ದಿನ ಪತ್ರಿಕೆಗಳು, ಟಿವಿ ವಾಹಿನಿಗಳಂತೂ ದುಷ್ಕರ್ಮಿಗಳಿಂದ ಕೊಲೆಯತ್ನ ಎಂದೇ ಸುದ್ದಿ ಪ್ರಸಾರ ಮಾಡಿದ್ದವು. ಇದರಿಂದ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ಇರಿಸುಮುರಿಸಿಗೊಳಗಾಗಿದ್ದಾರೆ.
ಕಲ್ಲಡ್ಕ ಭಟ್ಟರದ್ದೂ ಇದೇ ರೀತಿ ಆಗಿತ್ತು !
ಎರಡು ವರ್ಷಗಳ ಹಿಂದೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಯಾರೋ ಕೊಲೆಗೆ ಪ್ರಯತ್ನಿಸಿದ್ದಾರೆಂದು ಸುದ್ದಿ ಬಂದಿತ್ತು. ಪೊಲೀಸರು ಎಸ್ಕಾರ್ಟ್ ನೀಡಿ, ಅವರನ್ನು ನಿಗೂಢ ಸುರಕ್ಷಿತ ಸ್ಥಳಕ್ಕೆ ಒಯ್ದಿದ್ದಾರೆಂದೂ ಟಿವಿಗಳಲ್ಲಿ ಸುದ್ದಿ ಪ್ರಸಾರ ಆಗಿತ್ತು. ಯಾರಿಂದ ಕೊಲೆಪ್ರಯತ್ನ ಆಗಿತ್ತು, ಯಾರಾದ್ರೂ ಕರೆ ಮಾಡಿ ಬೆದರಿಕೆ ಒಡ್ಡಿದ್ದಾರೆಯೇ ಎನ್ನುವ ಬಗ್ಗೆ ಯಾರಿಂದಲೂ ಖಾತರಿ ಇರಲಿಲ್ಲ. ಗುಪ್ತಚರ ಏಜೆನ್ಸಿಗಳ ವರದಿ ಹಿನ್ನೆಲೆಯಲ್ಲಿ ಪೊಲೀಸರು ಎಲರ್ಟ್ ಆಗಿದ್ದರು, ಪೊಲೀಸರೇ ಕಲ್ಲಡ್ಕ ಭಟ್ಟರನ್ನು ಕಲ್ಲಡ್ಕದ ಸುರಕ್ಷಿತ ಸ್ಥಳದಿಂದ ಬೇರೆಡೆಗೆ ಒಯ್ದಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಕೊನೆಗೂ ಯಾವುದೇ ಅಧಿಕೃತರು ಗುಪ್ತಚರ ಬೆದರಿಕೆಯನ್ನು ಖಾತರಿ ಪಡಿಸಿರಲಿಲ್ಲ !
Headline Karnataka has a detailed story about Unidentified Men on bike follow U T Khader's Car in Mangalore. Was this a publicity stunt or a game plan of Congress to gain hype is explained in the article.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm