ಬ್ರೇಕಿಂಗ್ ನ್ಯೂಸ್
12-09-25 07:43 pm Mangalore Correspondent ಕರಾವಳಿ
ಮಂಗಳೂರು, ಸೆ.12 : ಧರ್ಮಸ್ಥಳ ಗ್ರಾಮದ ವಸತಿ ಗೃಹಗಳಲ್ಲಿ 2006ರಿಂದ 2010ರ ಅವಧಿಯಲ್ಲಿ ಸಂಭವಿಸಿದ ನಾಲ್ಕು ಅಸಹಜ ಸಾವು ಪ್ರಕರಣಗಳ ತನಿಖೆ ನಡೆಸುವಂತೆ ಒತ್ತಾಯಿಸಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.
2006ರಿಂದ 2010ರ ಅವಧಿಯಲ್ಲಿ ಸಂಭವಿಸಿದ ನಾಲ್ಕು ಅಸಹಜ ಸಾವು ಪ್ರಕರಣಗಳ ಆರ್ಟಿಐ ಮಾಹಿತಿ ಆಧರಿಸಿ, ಅವುಗಳನ್ನು ಕೊಲೆಯಾಗಿರಬಹುದೆಂದು ಶಂಕಿಸಿ ಹೆಚ್ಚಿನ ತನಿಖೆಗೆ ದೂರಿನಲ್ಲಿ ಒತ್ತಾಯಿಸಿದ್ದಾರೆ. ಇದರ ಜೊತೆಗೆ ಮಾಹಿತಿ ಹಕ್ಕಿನಲ್ಲಿ ಗ್ರಾಪಂ ಕಚೇರಿಯಿಂದ ಪಡೆದ ದಾಖಲೆಗಳನ್ನು ನೀಡಿದ್ದಾರೆ.
ಗಾಯತ್ರಿ, ಶರಾವತಿ ಮತ್ತು ವೈಶಾಲಿ ವಸತಿ ಗೃಹಗಳಲ್ಲಿ ನಡೆದ ನಾಲ್ಕು ಅಸಹಜ ಸಾವುಗಳ ಬಗ್ಗೆ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. ಇವುಗಳನ್ನು ಅಪರಿಚಿತ ಶವಗಳೆಂದು ಘೋಷಿಸಿ ಗ್ರಾಮ ಪಂಚಾಯಿತಿ ಮೂಲಕ ತರಾತುರಿಯಲ್ಲಿ ದಫನ ಮಾಡಲಾಗಿದೆ. ಈ ಬಗ್ಗೆ ಕೇವಲ ಅಸಹಜ ಮರಣ ಪ್ರಕರಣ ದಾಖಲಿಸಲಾಗಿದ್ದು, ಕೊಲೆ ಅಥವಾ ಆತ್ಮಹತ್ಯೆಯ ಸಂಶಯವಿದ್ದರೂ ಈ ಬಗ್ಗೆ ಎಫ್.ಐ.ಆರ್ ದಾಖಲಿಸದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಕಾನೂನು ಪ್ರಕಾರ ವಸತಿ ಗೃಹಗಳಲ್ಲಿ ಕೊಠಡಿ ಪಡೆದವರ ಹೆಸರು ವಿಳಾಸ ನೀಡಬೇಕಾಗುತ್ತದೆ. ಹಾಗಿದ್ದ ಮೇಲೆ ಇವರನ್ನು ಅಪರಿಚಿತ ಎಂದು ಹೇಳಲು ಹೇಗೆ ಸಾಧ್ಯ. ಇದು ಉದ್ದೇಶಪೂರ್ವಕ ಮಾಹಿತಿ ಮುಚ್ಚಿಟ್ಟಿರುವ ರೀತಿ ಕಾಣುತ್ತದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ದೂರಿನಲ್ಲಿ ಆರೋಪಿಸಿದ್ದಾರೆ.
In a startling development, activist Mahesh Shetty Timarodi, who has been actively supporting Sowjanya’s cause, has filed a formal complaint with the Special Investigation Team (SIT) in Beltangady, urging a deeper probe into four unnatural deaths that allegedly occurred in hostels in Dharmasthala between 2006 and 2010.
17-03-26 12:09 pm
HK News Staffer
ಮಂಜೇಶ್ವರ ಮತಕ್ಷೇತ್ರ ; ಎಕೆಎಂ ಅಶ್ರಫ್ ವಿರುದ್ಧ ಮತ್...
16-03-26 05:52 pm
ಐಎಎಸ್ ಅಧಿಕಾರಿಯೆಂದು ಪೋಸು ಕೊಟ್ಟು ಜನಸಾಮಾನ್ಯರಿಗೆ,...
16-03-26 03:36 pm
Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪ...
15-03-26 04:27 pm
ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆ ; ತನ...
14-03-26 10:14 pm
16-03-26 11:05 pm
Mangaluru Staffee
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
ಇರಾನ್ ದಾಳಿ ಬಗ್ಗೆ ಎಐ ವಿಡಿಯೋ ಆಧರಿತ ಸುಳ್ಳು ಸುದ್ದ...
16-03-26 02:44 pm
ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂ...
16-03-26 12:38 pm
ಒಡಿಶಾದ ಕಟಕ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ; I...
16-03-26 12:34 pm
17-03-26 01:55 pm
HK News Staffer
ಮಂಗಳೂರು ಜೈಲಿನಲ್ಲಿ ಕೈದಿಗಳ ದಾಂಧಲೆ ; ಜೈಲು ಅಧೀಕ್ಷ...
17-03-26 01:40 pm
Mangalore, Bendorewell Humps: ಹಂಪ್ಸ್ ಏನೋ ಹಾಕಿ...
16-03-26 09:48 pm
Moodbidri Inspector Sandesh, Police: ಮೂಡುಬಿದ್...
16-03-26 07:20 pm
Gas Tanker Accident: ಕಟಪಾಡಿ ಹೆದ್ದಾರಿಯಲ್ಲಿ ಗ್ಯ...
16-03-26 02:46 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am