ಬ್ರೇಕಿಂಗ್ ನ್ಯೂಸ್
25-12-24 10:55 pm Mangalore Correspondent ಕರಾವಳಿ
ಮಂಗಳೂರು, ಡಿ.25: ಇಸ್ರೇಲ್ ಮೂಲದ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಡಿಜೆ ಪ್ಲೇಯರ್ ಸಜಂಕಾ ಮಂಗಳೂರಿಗೆ ಬರಲಿದ್ದು, ಹೊಸ ವರ್ಷದ ಪ್ರಯುಕ್ತ ಡಿ.27ರಂದು ಬೋಳಾರದ ಸಿಟಿ ಬೀಚ್ ನಲ್ಲಿ ಡಿಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆದರೆ ಈ ಕಾರ್ಯಕ್ರಮಕ್ಕೆ ವಿಎಚ್ ಪಿ, ಬಜರಂಗದಳ ವಿರೋಧ ವ್ಯಕ್ತಪಡಿಸಿದ್ದು ಇಸ್ರೇಲಿ ವ್ಯಕ್ತಿಯ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಪೊಲೀಸರಿಗೆ ದೂರು ನೀಡಿದೆ.
ಸಜಂಕಾ (ಮೂಲ ಹೆಸರು ಅವಿಶೈ ಗ್ರಿನ್ ಬಾಮ್) ಭಾರತದಲ್ಲಿ ಈ ಬಾರಿ ಹಲವು ಕಡೆ ನ್ಯೂ ಇಯರ್ ಪಾರ್ಟಿಗಳಲ್ಲಿ ಭಾಗವಹಿಸಲಿದ್ದಾರೆ. ಯುವ ಗಾಯಕ ಮತ್ತು ಡಿಜೆ ಪಾರ್ಟಿ ಮ್ಯುಜೀಶಿಯನ್ ಆಗಿರುವ ಸಜಂಕಾ ವಿಭಿನ್ನ ಶೈಲಿಯ ಮ್ಯೂಸಿಕ್ ನೀಡುವುದರಲ್ಲಿ ಫೇಮಸ್ ಆಗಿದ್ದಾರೆ. ಭಾರತೀಯ ಶೈಲಿಯ ಪ್ರಸಿದ್ಧ ಹಾಡುಗಳಿಗೂ ಪಾಪ್ ಮಾದರಿಯಲ್ಲಿ ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಇದರ ವಿಡಿಯೋ ಜಾಲತಾಣದಲ್ಲಿದ್ದು ಯುವಕರನ್ನು ಆಕರ್ಷಿಸಿದೆ.
ಇದೇ ಕಾರಣಕ್ಕೆ ಮಂಗಳೂರಿನ ಟಾಪ್ ಹೌಸ್ ರೆಸ್ಟೋರೆಂಟ್ ಮಾಲೀಕರು ಸಜಂಕಾ ಅವರನ್ನು ಮೊದಲ ಬಾರಿಗೆ ಇಲ್ಲಿಗೆ ಕರೆಸುತ್ತಿದ್ದು, ಸಿಟಿ ಬೀಚ್ ನಲ್ಲಿ ಭಾರೀ ವೆಚ್ಚದಲ್ಲಿ ಡಿಜೆ ಪಾರ್ಟಿ ಆಯೋಜಿಸಿದ್ದಾರೆ. ಇದಕ್ಕಾಗಿ ದುಬಾರಿ ಟಿಕೆಟ್ ಅನ್ನೂ ನೀಡುತ್ತಿದ್ದು, ಜಾಲತಾಣದಲ್ಲಿ ಬುಕ್ಕಿಂಗ್ ಆರಂಭಗೊಂಡಿದೆ. ಇದೇ ವೇಳೆ, ಸಜಂಕಾ ಡಿಜೆ ಪಾರ್ಟಿಗೆ ಬಜರಂಗದಳ ಯುವಕರು ವಿರೋಧ ವ್ಯಕ್ತಪಡಿಸಿದ್ದು, ಆತ ಭಾರತೀಯ ದೇವರುಗಳ ಬಗ್ಗೆ, ದೇವರ ಹಾಡುಗಳ ಬಗ್ಗೆ ವಿಚಿತ್ರವಾಗಿ ವಿಡಂಬಿಸಿದ್ದಾನೆ. ಆ ಮೂಲಕ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾನೆ. ಇಂಥ ವ್ಯಕ್ತಿಯ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಬಜರಂಗದಳ ಪ್ರಮುಖರು ಮಂಗಳೂರು ಸೆಂಟ್ರಲ್ ಎಸಿಪಿಗೆ ದೂರು ನೀಡಿ ಒತ್ತಾಯಿಸಿದ್ದಾರೆ.
Israel-based DJ artist Sajanka is in Mangalore for a New Year party. Bajrang Dal members and leaders have issued a letter to the police requesting the cancellation of the program, which is scheduled to be held at Beach House in Bolar on December 27th.
04-05-25 02:27 pm
Bangalore Correspondent
Suhas Shetty Murder, Parameshwar: ಸುಹಾಸ್ ಶೆಟ್...
04-05-25 01:18 pm
Karkala Mla Sunil Kumar, Parameshwar: ಆ್ಯಂಟಿ...
03-05-25 09:38 pm
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm