ಬ್ರೇಕಿಂಗ್ ನ್ಯೂಸ್
11-11-24 05:36 pm Mangalore Correspondent ಕರಾವಳಿ
ಮಂಗಳೂರು, ನ.11: ನಗರದ ಲೇಡಿಗೋಶನ್ ಹೆರಿಗೆ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹೊರಕ್ಕೆ ಹಾರಿ ಬಾಣಂತಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಾರ್ಕಳ ತಾಲೂಕಿನ ಮುನಿಯಾಲು ನಿವಾಸಿ ರಂಜಿತಾ (28) ಮೃತ ಮಹಿಳೆ.
ಒಂದು ವರ್ಷದ ಹಿಂದೆ ಮುನಿಯಾಲಿನ ಪ್ರಕಾಶ್ ಆಚಾರ್ಯ ಮತ್ತು ರಂಜಿತಾ ಮದುವೆಯಾಗಿತ್ತು. ಆರು ತಿಂಗಳ ಗರ್ಭಿಣಿಯಾಗಿದ್ದ ರಂಜಿತಾಗೆ ಅತಿ ರಕ್ತದೊತ್ತಡ ಇದ್ದುದರಿಂದ ಅ.24ರಂದು ಮಂಗಳೂರಿನ ಆಸ್ಪತ್ರೆಗೆ ತರಲಾಗಿತ್ತು. ಮಹಿಳೆಯ ಆರೋಗ್ಯಕ್ಕೆ ತೊಂದರೆ ಎದುರಾಗಿದ್ದರಿಂದ ಅ.29ರಂದು ಮಗುವನ್ನು ಸಿಸೇರಿಯನ್ ಮೂಲಕ ತೆಗೆಸಲಾಗಿತ್ತು. ನಾಲ್ಕು ದಿನಗಳ ಕಾಲ ಎನ್ಐಸಿಯುನಲ್ಲಿದ್ದ ಮಗು ಬಳಿಕ ಮೃತಪಟ್ಟಿತ್ತು.
ಕೆಲವು ಮಹಿಳೆಯರಿಗೆ ಬಾಣಂತಿ ಸಂದರ್ಭದಲ್ಲಿ ಮಾನಸಿಕ ಖಿನ್ನತೆ ಆವರಿಸುತ್ತದೆ. ಅದೇ ರೀತಿಯ ಖಿನ್ನತೆ ರಂಜಿತಾಗೂ ಇತ್ತು ಎನ್ನಲಾಗುತ್ತಿದೆ. ಮಗು ಮೃತಪಟ್ಟ ವಿಷಯ ತಿಳಿದೋ ಏನೋ ಮಾನಸಿಕವಾಗಿ ಕುಗ್ಗಿದ ರೀತಿ ಇದ್ದರು. ಇಂದು ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಕ್ಕೆ ಪ್ರಕ್ರಿಯೆ ನಡೆದಿತ್ತು. ಪತಿ ಪ್ರಕಾಶ್ ಆಚಾರ್ಯ ಕಾರು ತೆಗೆದುಕೊಂಡು ಆಸ್ಪತ್ರೆ ಕಡೆಗೆ ಬರುತ್ತಿದ್ದರೆ, ಮಹಿಳೆಯ ತಮ್ಮ ಮತ್ತು ತಾಯಿ ಆಸ್ಪತ್ರೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಮಹಿಳೆ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹೊರಕ್ಕೆ ಹಾರಿದ್ದು ದುರಂತ ಸಾವು ತಂದುಕೊಂಡಿದ್ದಾರೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A woman who recently gave birth and lost her newborn to illness ended her life by jumping from the fourth floor of Lady Goschen Hospital on Monday, November 11. The deceased has been identified as Ranjita (28), a resident of Karkala.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm