ಬ್ರೇಕಿಂಗ್ ನ್ಯೂಸ್
31-10-24 02:22 pm Udupi Correspondent ಕರಾವಳಿ
ಉಡುಪಿ, ಅ.31: ಸ್ಕೂಟಿ ಸವಾರಿ ಮಾಡುತ್ತಿದ್ದ ಯುವತಿ ಮೇಲೆ ಮಣ್ಣು ತುಂಬಿದ ಟಿಪ್ಪರ್ ಲಾರಿ ಮಗುಚಿ ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದ್ದು ಆಟೋ ಚಾಲಕರೊಬ್ಬರ ಸಕಾಲಿಕ ಪ್ರಯತ್ನದಿಂದ ಯುವತಿಯ ಪ್ರಾಣ ಉಳಿದಿದೆ. ಸ್ಕೂಟಿಯೊಂದಿಗೆ ಮಣ್ಣಿನಡಿಗೆ ಬಿದ್ದು ಒದ್ದಾಡುತ್ತಿದ್ದ ಮಹಿಳೆಯನ್ನು ಆಟೋ ಚಾಲಕ ಅಶೋಕ್ ಪೂಜಾರಿ ರಕ್ಷಣೆ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಗೂರು ಉಪ್ರಳ್ಳಿ ಎಂಬಲ್ಲಿ ಘಟನೆ ನಡೆದಿದೆ. ಒಳರಸ್ತೆಯ ತಿರುವಿನಲ್ಲಿ ಮಣ್ಣು ತುಂಬಿದ ಟಿಪ್ಪರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಒಂದು ಬದಿಗೆ ಮಗುಚಿ ಬಿದ್ದಿತ್ತು. ಇದೇ ವೇಳೆ ಲಾರಿಯ ಪಕ್ಕದಲ್ಲೇ ಯುವತಿ ಚಲಾಯಿಸುತ್ತಿದ್ದ ಸ್ಕೂಟಿ, ಟಿಪ್ಪರ್ ವಾಹನದಡಿಗೆ ಮಗುಚಿ ಬಿದ್ದಿದೆ. ಮಣ್ಣಿನ ಅಡಿಯಲ್ಲಿ ಸ್ಕೂಟಿ ಸವಾರೆ, ಸ್ಥಳೀಯ ನಿವಾಸಿ ಆರತಿ ಶೆಟ್ಟಿ ಸಿಲುಕಿದ್ದರೆ, ಲಾರಿ ಚಾಲಕನೂ ಹೊರಬರಲು ಸಾಧ್ಯವಾಗದೆ ಕ್ಯಾಬಿನ್ ಒಳಗಡೆ ಸಿಲುಕಿದ್ದರು.
ಈ ಸಂದರ್ಭ ಅದೇ ದಾರಿಯಲ್ಲಿ ಆಟೋ ಚಲಾಯಿಸುತ್ತ ಬಂದಿದ್ದ ಸಮಾಜಸೇವಕ ಕೋಡಿ ಅಶೋಕ್ ಪೂಜಾರಿ, ಏನು ಮಾಡಬೇಕೆಂದು ತೋಚದೇ ಮಣ್ಣಿನಲ್ಲಿ ಸಂಪೂರ್ಣ ಮುಚ್ಚಿ ಹೋಗಿದ್ದ ಮಹಿಳೆಯ ಮೇಲಿದ್ದ ಮಣ್ಣನ್ನು ತೆಗೆದು ರಕ್ಷಣೆ ಮಾಡಿದ್ದಾರೆ. ಆನಂತರ, ಸ್ಥಳೀಯರ ಸಹಕಾರದಿಂದ ಮಹಿಳೆಯನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಲಾರಿ ಚಾಲಕನನ್ನೂ ರಕ್ಷಣೆ ಮಾಡಿದ್ದಾರೆ. ಅಶೋಕ್ ಅವರ ಸಕಾಲಿಕ ನೆರವು ಯುವತಿಯ ಪ್ರಾಣ ಉಳಿಸಿದ್ದು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
Udupi accident, Girl rescued by auto driver after truck topples.
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 02:11 pm
HK News Staffer
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am