ಬ್ರೇಕಿಂಗ್ ನ್ಯೂಸ್
17-10-24 07:56 pm Mangalore Correspondent ಕರಾವಳಿ
ಮಂಗಳೂರು, ಅ.17: ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದುಕೊಂಡ ಪರಿಣಾಮ ಇಂದು ಹಿಂದೂ ಮುಖಂಡನ ಮೇಲೆ ಠಾಣೆಯಲ್ಲೇ ಹಲ್ಲೆಯಾಗಿದೆ. ಈ ರೀತಿ ಪರಿಸ್ಥಿತಿ ನಿರ್ಮಾಣವಾದರೆ ಹಿಂದೂ ಯುವಕರು ಯಾವ ರೀತಿ ಬದುಕೋದು? ದಕ್ಷಿಣ ಕನ್ನಡ ಸಹಿತ ಕರ್ನಾಟಕದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಅನ್ನೋದು ಮತ್ತೆ ಸಾಬೀತಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರತಿಕ್ರಿಯಿಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಬಜರಂಗದಳ ಮುಖಂಡನಿಗೆ ಹಲ್ಲೆಗೈದ ಪ್ರಕರಣದ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಅವರು, ಅತೀ ಸೂಕ್ಷ್ಮ ಪ್ರದೇಶ ಎನಿಸಿಕೊಂಡ ಉಳ್ಳಾಲದಲ್ಲಿ ಸಣ್ಣ ಅಪಘಾತ ನಡೆದಿತ್ತು. ಅಪಘಾತ ವಿಚಾರದಲ್ಲಿ ಮಂಜೇಶ್ವರದ ಮುಸ್ಲಿಂ ಯುವಕರು ಉಳ್ಳಾಲದ ಶರತ್ ಎಂಬವರ ಮೇಲೆ ಹಲ್ಲೆ ಮಾಡಿದ್ರು. ಈ ವೇಳೆ ಮಂಜೇಶ್ವರ ಹಾಗೂ ಉಳ್ಳಾಲ ಭಾಗದ ಮುಸ್ಲಿಂ ಯುವಕರು ಉಳ್ಳಾಲ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಉಳ್ಳಾಲ, ಮಂಜೇಶ್ವರದ ಸಾಕಷ್ಟು ಮುಸ್ಲಿಂ ಯುವಕರು ಠಾಣೆಗೆ ಮುತ್ತಿಗೆ ಹಾಕುವ ರೀತಿ ಬಂದಿದ್ರು.
ಇನ್ಸ್ಪೆಕ್ಟರ್ ಅವರಿಗೆ ಘಟನೆಯನ್ನ ಶಾಂತವಾಗಿ ನಿಭಾಯಿಸಲು ಹೇಳಿದ್ದೆ. ಆದರೆ ಮಂಜೇಶ್ವರದ ಎಂಎಲ್ಎ ಕಡೆಯಿಂದಲೂ ಪೊಲೀಸರಿಗೆ ಒತ್ತಡ ಬಂದಿದೆ. ಯಾರೇ ಫೋನ್ ಮಾಡಿದ್ರು ಉಳ್ಳಾಲದಲ್ಲಿ ಅಶಾಂತಿ ಆಗದಂತೆ ನೋಡಿಕೊಳ್ಳಿ ಎಂದಿದ್ದೆ. ಇದಾದ ಬಳಿಕ ಬಜರಂಗದಳ ಸಂಚಾಲಕ ಅರ್ಜುನ್ ಮಾಡೂರು ಮತ್ತು ಶರತ್ ಠಾಣೆಗೆ ಹೋಗಿದ್ದು ಮಾತುಕತೆ ನಡೆಸಿದ್ದಾರೆ. ಒಳ್ಳೆಯ ರೀತಿ ಮಾತುಕತೆಯಾಗಿ ಎರಡು ತಂಡಗಳು ಸಂಧಾನಕ್ಕೆ ಮುಂದಾಗಿದ್ದರು.
ಆದರೆ ಈ ಸಂದರ್ಭ ಸ್ಥಳದಲ್ಲಿದ್ದ ಕಿಡಿಗೇಡಿ ಮುಸ್ಲಿಂ ಯುವಕರು ಹಿಂದೂ ಮುಖಂಡನ ಮೇಲೆ ಹಲ್ಲೆ ಮಾಡಿದ್ದಾರೆ. ಪೊಲೀಸರು ಹೊರಗಡೆಯವರನ್ನ ಠಾಣೆಯಿಂದ ಹೊರಗೆ ಕಳಿಸುವ ಕೆಲಸ ಮಾಡಬೇಕಿತ್ತು. ಯಾರದ್ದೋ ಒತ್ತಡಕ್ಕೆ ಬಿದ್ದು ಅವರನ್ನ ಠಾಣೆಯ ಒಳಗಡೆ ಇರಿಸಿಕೊಂಡಿದ್ದರು. ಒತ್ತಡ, ಪ್ರಭಾವದ ಮೇಲೆ ಮತಾಂಧರರಿಗೆ, ಡ್ರಗ್ಸ್ ದಂಧೆಕೋರರಿಗೆ ಪೊಲೀಸರು ಬೆಂಬಲ ಕೊಡೋದು ಮಾಡಿದ್ದಾರೆ. ಆರಕ್ಷಕ ಠಾಣೆ ಒಳಗಡೆಯೇ ಬಜರಂಗದಳ ಸಂಚಾಲಕ ಅರ್ಜುನ್ ಮಾಡೂರು ಮೇಲೆ ಕೈಮಾಡುವ ಮೂಲಕ ನಮಗೆ ರಕ್ಷಣೆ ಇಲ್ಲ ಅನ್ನೋದು ಸಾಬೀತಾಗಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕನಿಕರಿಗೆ ಭದ್ರತೆ ಇಲ್ಲ. ಇದಕ್ಕೆಲ್ಲ ರಾಜ್ಯ ಸರ್ಕಾರ ಸಮಾಜದ್ರೋಹಿಗಳ ವಿರುದ್ಧದ ಪ್ರಕರಣಗಳನ್ನ ವಾಪಸ್ ಪಡೆದಿದ್ದೇ ಕಾರಣ. ಇದರಿಂದ ಪ್ರೇರಣೆಗೊಂಡ ಪರಿಣಾಮ ಈ ರೀತಿ ಕೈ ಮಾಡಿದ್ದಾರೆ. ನಾವು ಏನು ಮಾಡಿದ್ರೂ ನಡೆಯುತ್ತೆ ಅನ್ನೋ ರೀತಿ ಮಾಡುತ್ತಿದ್ದಾರೆ. ಈಗ ಆತನ ಮೇಲೆ ಕೇಸ್ ಆಗಿದೆ, ಆದರೆ ಪೊಲೀಸ್ ಇಲಾಖೆಯ ಮೇಲೆ ಅಪನಂಬಿಕೆ ಮೂಡಿದೆ. ಯಾವ ರೀತಿ ಉಳ್ಳಾಲ ಪರಿಸರದಲ್ಲಿ ಬದುಕೋದು ಎನ್ನುವ ಸ್ಥಿತಿಯಾಗಿದೆ. ಪೋಲೀಸರ ಎದುರಲ್ಲೇ ಹೊಡೆಯುವ ಪರಿಸ್ಥಿತಿಯಾದರೆ ಜನಸಾಮಾನ್ಯರು ಯಾವ ರೀತಿ ಬದುಕೋದು ಎಂದು ಸತೀಶ್ ಕುಂಪಲ ಪ್ರಶ್ನಿಸಿದ್ದಾರೆ.
ಹಲ್ಲೆಗೀಡಾದ ಅರ್ಜುನ್ ಮಾಡೂರು ನಿಟ್ಟೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಶಾಂತಿ ವಾತಾವರಣ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯೇ ಕಾರಣವಾಗುತ್ತಿದೆ. ಈ ರೀತಿ ನಡೆದುಕೊಂಡ್ರೆ ಹಿಂದೂ ಹುಡುಗರು ಯಾವ ರೀತಿ ಬದುಕೋದು. ಎಲ್ಲಾ ಸಮಯದಲ್ಲಿ ಮೂಗು ತೂರಿಸುವ ಯು.ಟಿ ಖಾದರ್ ಈ ಪ್ರಕರಣದ ಬಗ್ಗೆ ಧ್ವನಿ ಎತ್ತಿಲ್ಲ ಯಾಕೆ? ಖಾದರ್ ಅವರು ಸಾಮರಸ್ಯ, ಸಮನ್ವಯ ತರುವ ಕೆಲಸ ಮಾಡುತ್ತೇನೆ ಎನ್ನುತ್ತಾರೆ. ಇದೇನಾ ಯುಟಿ ಖಾದರ್ ಅವರ ಸಮನ್ವಯತೆ..?ಅವರ ಈ ರೀತಿಯ ನಡವಳಿಕೆಯನ್ನ ಖಂಡಿಸುತ್ತೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Assult on hindu leader inside police station, BJP satish Kumpala slams incident at ullal in Mangalore. Ullal police have arrested a native of Kasargod district in connection with the alleged assault on a Sangh Parivar leader who had been to the police station on Wednesday night for talks after a fracas between the drivers of two cars following a mishap at Thokkottu flyover.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
15-08-25 09:22 pm
Mangalore Correspondent
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm