ಬ್ರೇಕಿಂಗ್ ನ್ಯೂಸ್
09-10-24 10:52 pm Mangalore Correspondent ಕರಾವಳಿ
ಮಂಗಳೂರು, ಅ.9: ಮಂಗಳೂರು – ಬೆಂಗಳೂರು ಸಂಚರಿಸುವ ಹೆದ್ದಾರಿಯ ಶಿರಾಡಿ ಘಾಟ್, ಕಲ್ಲಡ್ಕ ಹೇಗೂ ದುರವಸ್ಥೆ ಆಗಿಹೋಗಿದೆ. ಯಾವುದೇ ರಸ್ತೆ ಮಾಡುವುದಿದ್ದರೂ, ತಾತ್ಕಾಲಿಕ ವ್ಯವಸ್ಥೆ ಮಾಡಿದ ಮೇಲಷ್ಟೇ ಕಾಮಗಾರಿ ಮಾಡಿ ಎಂದರೆ, ಅಧಿಕಾರಸ್ಥರ ಕಿವಿ ತಲುಪುತ್ತಿಲ್ಲ. ಈಗ ಅಳಿದುಳಿದ ಹೆದ್ದಾರಿಯ ಸ್ಥಿತಿಯೂ ಶೋಚನೀಯ ಎನ್ನುವಂತಾಗಿದೆ. ಮಂಗಳೂರು ನಗರದ ಪಡೀಲ್, ಅಡ್ಯಾರಿನಲ್ಲಿ ಬಿದ್ದಿರುವ ಗುಂಡಿಗಳು ಯಾರದ್ದೋ ಬಲಿಗಾಗಿ ಕಾದಿರುವಂತೆ ಭಾಸವಾಗುತ್ತಿವೆ.
ಪಡೀಲ್ ಹೆದ್ದಾರಿಯ ರೈಲ್ವೇ ಸೇತುವೆ ಎದುರಲ್ಲೇ ದೊಡ್ಡ ದೊಡ್ಡ ಗುಂಡಿಗಳು ಬಾಯ್ದೆರೆದು ನಿಂತಿವೆ. ಹೆದ್ದಾರಿ ನಡುವಲ್ಲಿ ಮತ್ತು ಬದಿಯಲ್ಲಿ ಉದ್ದಕ್ಕೂ ಗುಂಡಿಗಳು ಬಿದ್ದರೂ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿದ್ದೆಯಲ್ಲಿದ್ದಾರೆ. ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆ ಮುಂಭಾಗ, ಜೆಸಿಬಿ ಶೋರೂಮ್ ಶಾಪ್ ಎದುರಿನ ಭಾಗದಲ್ಲಿ ಹೊಂಡಗಳು ಉಂಟಾಗಿವೆ. ಮಳೆಯಿಂದಾಗಿ ಇದರಲ್ಲಿ ನೀರು ನಿಲ್ಲುವ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳು ಇದರ ಆಳ ಅರಿವಿಲ್ಲದೆ ಗುಂಡಿಗೆ ಬಿದ್ದರೆ, ಮತ್ತೆ ಏಳಲಾಗದೆ ದೊಡ್ಡ ವಾಹನಗಳ ಅಡಿಗೆ ಸಿಲುಕುವ ಸಾಧ್ಯತೆಯಿದೆ.
ಈ ನಡುವೆ, ಮತ್ತೆ ಮಳೆಯ ಮುನ್ಸೂಚನೆ ಇರುವುದರಿಂದ ಹೆದ್ದಾರಿಯ ಗುಂಡಿಗಳನ್ನು ಹೆದ್ದಾರಿ ಪ್ರಾಧಿಕಾರಗಳು, ಜನಪ್ರತಿನಿಧಿಗಳು ನೋಡಿಯೂ ನೋಡದಂತೆ ಚಲಿಸುವುದು ತರವಲ್ಲ. ಈ ರೀತಿಯ ಗುಂಡಿಗಳೇ ಮರಣ ಗುಂಡಿಗಳಂತಾಗಿದ್ದನ್ನು ಹಲವು ಬಾರಿ ಕಂಡಿದ್ದೇವೆ. ಪಡೀಲಿನ ಉದ್ದಕ್ಕೂ ಹೆದ್ದಾರಿ ಬದಿಯಲ್ಲೂ ನೀರು ನಿಂತು ಆಳ ಗುಂಡಿಗಳೆದ್ದಿದ್ದು ಅವನ್ನು ಸ್ಥಳೀಯರು ಮಣ್ಣು, ಕಲ್ಲು ತುಂಬಿ ಒಮ್ಮೆಗೆ ತುಂಬಿಸಿದರೂ, ಮತ್ತೆ ಅವು ಬಾಯ್ದೆರೆದು ನಿಲ್ಲುತ್ತವೆ. ತುಂಬೆಯಲ್ಲಿ 15 ವರ್ಷಗಳಿಂದ ಈ ಹೆದ್ದಾರಿಯ ಕಾರಣಕ್ಕೆ ಪ್ರಯಾಣಿಕರಿಂದ ಶುಲ್ಕ ವಸೂಲಿ ಮಾಡುತ್ತಿದ್ದರೂ, ಈ ರಸ್ತೆಯನ್ನು ದುರಸ್ತಿ ಪಡಿಸುವ ಕಾಳಜಿ ಆಳುವವರಿಗಿಲ್ಲ.
ಪಣಂಬೂರು, ಕುಳಾಯಿ ಭಾಗದಲ್ಲಿ ಇದೇ ರೀತಿ ಹೆದ್ದಾರಿ ಗುಂಡಿ ಬಿದ್ದಿದ್ದರೂ, ಕೆಲವನ್ನು ಮುಚ್ಚಲಾಗಿದೆ. ಇನ್ನೂ ಅನೇಕ ಗುಂಡಿಗಳು ಅಲ್ಲಲ್ಲಿ ಎದ್ದು ಕುಳಿತಿದ್ದು, ಪ್ರಯಾಣಿಕರನ್ನು ಹೈರಾಣು ಮಾಡಿವೆ.
Mangalore Deadly potholes at Padil near JCB showroom. Highway authorities show negligence even after huge traffic. Two wheelers and cards face huge problems.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
27-07-25 03:26 pm
Bangalore Correspondent
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm