ಬ್ರೇಕಿಂಗ್ ನ್ಯೂಸ್
09-10-24 03:18 pm Mangalore Correspondent ಕರಾವಳಿ
ಮಂಗಳೂರು, ಅ.9: ಪಾವೂರು ಉಳಿಯ ದ್ವೀಪದ ಮರಳುಗಾರಿಕೆ ವಿರುದ್ಧ ಹೋರಾಟದ ದನಿ ಎಬ್ಬಿಸಿದ್ದ ಕೆಥೋಲಿಕ್ ಸಭಾ ಅಧ್ಯಕ್ಷ ಅಲ್ವಿನ್ ಜೆರೋಮ್ ಡಿಸೋಜ ಅವರಿಗೆ ಹಲ್ಲೆಗೈದು ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಫರಂಗಿಪೇಟೆ ನಿವಾಸಿ ಮೊಹಮ್ಮದ್ ಅತಾವುಲ್ಲಾ (40) ಹಾಗೂ ಪಾಂಡೇಶ್ವರ ಠಾಣೆ ವ್ಯಾಪ್ತಿಯ ಮಾರ್ನಮಿಕಟ್ಟೆ ನಿವಾಸಿ ತೌಸೀರ್ ಅಲಿಯಾಸ್ ಪತ್ತೊಂಜಿ ತೌಸಿರ್ (31) ಬಂಧಿತರು. ನೇತ್ರಾವತಿ ನದಿಯಲ್ಲಿ ಪಾವೂರು ಉಳಿಯ ದ್ವೀಪದ ಸುತ್ತ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಕೆಥೋಲಿಕ್ ಸಭಾ ನೇತೃತ್ವದಲ್ಲಿ ಸೆಪ್ಟೆಂಬರ್ 29ರಂದು ಪ್ರತಿಭಟನೆ ನಡೆದಿತ್ತು.


ಈ ಬಗ್ಗೆ ಪತ್ರಕರ್ತೆಯೊಬ್ಬರು ವರದಿ ಮಾಡುವುದಕ್ಕಾಗಿ ಅ.5ರಂದು ಅಲ್ವಿನ್ ಡಿಸೋಜ ಜೊತೆಗೆ ಪಾವೂರು ಉಳಿಯ ದ್ವೀಪದ ಸ್ಥಳಕ್ಕೆ ಬಂದಿದ್ದಾಗ, ಅಡ್ಯಾರ್ ಸೇತುವೆ ಬಳಿ ಅಡ್ಡಹಾಕಿದ್ದ ಮರಳು ದಂಧೆ ನಡೆಸುತ್ತಿದ್ದವರ ಪರವಾದ ಗುಂಪು ಆಲ್ವಿನ್ ಡಿಸೋಜ ಮೇಲೆ ಹಲ್ಲೆ ನಡೆಸಿತ್ತು. ಹಲ್ಲೆಗೀಡಾದ ಅಲ್ವಿನ್ ಡಿಸೋಜ ಆಸ್ಪತ್ರೆಗೆ ದಾಖಲಾಗಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ಆರೋಪಿ ಅತಾವುಲ್ಲಾ, ಅಲ್ವಿನ್ ಡಿಸೋಜರಿಗೆ ಅವಾಚ್ಯವಾಗಿ ಬೈದು ಹಲ್ಲೆಗೆ ಪ್ರಚೋದನೆ ನೀಡಿದ್ದ. ಆರೋಪಿ ತೌಸಿರ್ ಬೈದು ಹಲ್ಲೆ ಮಾಡಿದ್ದ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸದಿದ್ದರೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಕೆಥೋಲಿಕ್ ಸಭಾದಿಂದ ಎಚ್ಚರಿಕೆ ನೀಡಲಾಗಿತ್ತು.
Attack on President of Catholic Sabha Alwyn DSouza in Mangalore, two arrested by police. Alwyn was allegedly attacked by sand miners near Harekala bridge on Saturday, October 5. A police communique said Mr. D’Souza was attacked at about 3 p.m. on Saturday when he with one Vijaylaxmi Shibrur and videographers were visiting a place near Harekala bridge.
27-05-26 01:41 pm
HK News Staffer
ರಾಜ್ಯ ರಾಜಕೀಯದಲ್ಲಿ ಭಾರೀ ಕ್ಲೈಮ್ಯಾಕ್ಸ್ ; ಸಿಎಂ ಸಿ...
26-05-26 11:03 pm
ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ...
26-05-26 08:51 pm
ಬರೆದಿಟ್ಕೊಳ್ಳಿ , ಮುಂದೇನೂ ನಮ್ದೇ ಸರ್ಕಾರ ಇರ್ತದೆ ;...
25-05-26 09:38 pm
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
26-05-26 12:54 pm
HK News Staffer
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
ಎಐಎಡಿಎಂಕೆ ಪಕ್ಷದ ಮೂವರು ಶಾಸಕರು ಸ್ಥಾನಕ್ಕೆ ರಾಜಿನಾ...
25-05-26 08:18 pm
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
27-05-26 12:29 pm
HK News Desk
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್...
25-05-26 09:57 pm
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
27-05-26 01:30 pm
HK News Staffer
ಪ್ರಿಯಕರನ ಕಿರುಕುಳ ; ಮುಂಬೈನಲ್ಲಿ ರೇಡಿಯೋ ಜಾಕಿಯಾಗಿ...
27-05-26 12:42 pm
ಇಸ್ರೇಲ್ನಿಂದ ರಜೆ ಮೇಲೆ ಊರಿಗೆ ಬಂದವನ ದುರಂತ ಅಂತ್ಯ...
26-05-26 02:43 pm
ಪಿಯುಸಿ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣ ;...
26-05-26 11:56 am
Tablet Arif Murder: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರ...
25-05-26 11:00 pm