ಬ್ರೇಕಿಂಗ್ ನ್ಯೂಸ್
05-10-24 04:42 pm Mangalore Correspondent ಕರಾವಳಿ
ಮಂಗಳೂರು, ಅ.5: ಮಧ್ಯ ಪ್ರಾಚ್ಯದಲ್ಲಿ ಇಸ್ರೇಲ್- ಇರಾನ್ ನಡುವೆ ಸಂಘರ್ಷ ಏರ್ಪಟ್ಟಿದೆ. ಹಮಾಸ್ ಉಗ್ರರ ಮೇಲಿನ ಇಸ್ರೇಲ್ ಪ್ರತೀಕಾರ ಈಗ ಇರಾನ್, ಲೆಬನಾನಿನತ್ತ ತಿರುಗಿದೆ. ಇದೇ ವೇಳೆ, ಭಾರತದಲ್ಲಿ ಕೆಲವು ಮುಸ್ಲಿಮರು ಇಸ್ರೇಲ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಮೊನ್ನೆ ಈದ್ ಮೆರವಣಿಗೆಯ ಸಂದರ್ಭದಲ್ಲಿ ಕೆಲವರು ಪ್ಯಾಲೆಸ್ತೀನ್ ಪರವಾಗಿ ಬಾವುಟ ಹಾರಿಸಿ ತಮ್ಮ ಮಮಕಾರವನ್ನೂ ತೋರಿಸಿದ್ದರು. ಇಂಥದ್ದೇ ಸಂದರ್ಭದಲ್ಲಿ ಮಂಗಳೂರಿನಲ್ಲೊಂದು ಇಸ್ರೇಲ್ ಟ್ರಾವೆಲ್ಸ್ ಹೆಸರಿನ ಬಸ್ಸಿನ ಬೋರ್ಡ್ ಜಾಲತಾಣದಲ್ಲಿ ಮುಸ್ಲಿಮರ ದ್ವೇಷಕ್ಕೆ ಗುರಿಯಾಗಿತ್ತು.
ಮೂಡುಬಿದ್ರೆ – ಕಿನ್ನಿಗೋಳಿ- ಕಟೀಲು- ಮೂಲ್ಕಿ ನಡುವೆ ಸಂಚರಿಸುತ್ತಿದ್ದ ಖಾಸಗಿ ಬಸ್ಸಿಗೆ ಇತ್ತೀಚೆಗಷ್ಟೇ ಇಸ್ರೇಲ್ ಟ್ರಾವೆಲ್ಸ್ ಎಂದು ಹೆಸರು ಇಡಲಾಗಿತ್ತು. ಕಟೀಲು ಮೂಲದ ಲೆಸ್ಟರ್ ಕಟೀಲು ಎಂಬವರು ಇದರ ಮಾಲೀಕ. ಇವರು ಕಳೆದ 12 ವರ್ಷಗಳಿಂದ ಇಸ್ರೇಲಿನಲ್ಲಿ ಉದ್ಯೋಗ ನಿಮಿತ್ತ ಕುಟುಂಬದೊಂದಿಗೆ ನೆಲೆಸಿದ್ದಾರೆ. ಇತ್ತೀಚೆಗೆ ಇವರು ಮಂಗಳೂರಿನಲ್ಲಿ ಹಳೆ ಬಸ್ ಖರೀದಿಸಿ ಮೂಲ್ಕಿ –ಮೂಡುಬಿದ್ರೆ ರೂಟಿನಲ್ಲಿ ಇಳಿಸಿದ್ದರು. ತನ್ನ ಇಸ್ರೇಲ್ ಪ್ರೇಮ ತೋರಿಸುವುದಕ್ಕಾಗಿ ಇಸ್ರೇಲ್ ಟ್ರಾವೆಲ್ಸ್ ಹೆಸರಿನಲ್ಲಿಯೇ ಬಸ್ ಆರಂಭಿಸಿದ್ದರು. ಕಟೀಲಿನಲ್ಲಿರುವ ಲೆಸ್ಟರ್ ಕುಟುಂಬದವರು ಬಸ್ಸನ್ನು ನೋಡಿಕೊಳ್ಳುತ್ತಿದ್ದಾರೆ.
ಇಸ್ರೇಲ್ ಹೆಸರಿನ ಬಸ್ಸನ್ನು ನೋಡಿದ ಪ್ಯಾಲೆಸ್ತೀನ್ ಪ್ರಿಯರಿಗೆ ದ್ವೇಷ ಹುಟ್ಟಿಕೊಂಡಿತ್ತು. ಪ್ಯಾಲೆಸ್ತೀನ್ ವಿರುದ್ಧ ಯುದ್ಧ ಸಾರಿರುವ ಇಸ್ರೇಲ್ ಒಂದು ಭಯೋತ್ಪಾದಕ ರಾಷ್ಟ್ರವಾಗಿದ್ದು, ಅದರ ಹೆಸರನ್ನು ಮಂಗಳೂರಿನಲ್ಲಿ ಬಸ್ಸಿಗಿಟ್ಟಿದ್ದು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ಜಾಲತಾಣದಲ್ಲಿ ಬಸ್ಸಿನ ಫೋಟೋ ಹಾಕಿ, ಟ್ರೋಲ್ ಮಾಡಿದ್ದಲ್ಲದೆ, ಈ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಬೇಕೆಂದು ಆಗ್ರಹ ಶುರು ಮಾಡಿದ್ದರು. ಪೊಲೀಸರಿಗೂ ಇದರಿಂದ ಇರಿಸು ಮುರಿಸು ಆಗಿತ್ತು. ಇದರ ಬಿಸಿ ಬಸ್ಸಿನ ಮಾಲೀಕರಿಗೂ ತಟ್ಟಿತ್ತು. ಬಸ್ಸಿನ ಹೆಸರು ಬದಲಿಸದಿದ್ದರೆ ಸೀಜ್ ಮಾಡಿಸುತ್ತೇವೆ ಎಂದು ಟ್ರಾಫಿಕ್ ಪೊಲೀಸರು ಪರೋಕ್ಷ ಬೆದರಿಕೆ ಹಾಕಿದ್ದರು. ಕೆಲವರ ಫೋನ್ ಕಿರಿಕಿರಿ, ಬೈಗುಳದಿಂದ ಬೇಸತ್ತ ಬಸ್ಸಿನ ಮಾಲೀಕರು ಈಗ ಬಸ್ಸಿನ ಹೆಸರನ್ನು ಬದಲು ಮಾಡಿದ್ದಾರೆ.
ಇದೀಗ ಬಸ್ಸಿನ ಹೆಸರನ್ನು ಇಸ್ರೇಲ್ ಟ್ರಾವೆಲ್ಸ್ ಬದಲು ಜೆರುಸಲೇಂ ಟ್ರಾವೆಲ್ಸ್ ಎಂದು ಬದಲಿಸಿದ್ದಾರೆ. ಈ ಬಗ್ಗೆ ಇಸ್ರೇಲಿನಲ್ಲಿರುವ ಲೆಸ್ಟರ್ ಕಟೀಲು ಹೆಡ್ ಲೈನ್ ಕರ್ನಾಟಕದ ಜೊತೆಗೆ ಮಾತನಾಡಿದ್ದು, ಇಸ್ರೇಲ್ ಟ್ರಾವೆಲ್ಸ್ ಹೆಸರು ಹಾಕಿದ್ದರಲ್ಲಿ ತೊಂದರೆ ಏನು ಅನ್ನೋದು ನನಗೆ ಅರ್ಥವಾಗುತ್ತಿಲ್ಲ. ನಾನು 12 ವರ್ಷಗಳಿಂದ ಇಸ್ರೇಲಿನಲ್ಲಿದ್ದು ಅಲ್ಲಿನ ವ್ಯವಸ್ಥೆ ಕಂಡು ಅಭಿಮಾನ ಹೊಂದಿದ್ದೇನೆ. ಅಲ್ಲದೆ, ನಮ್ಮ ಪವಿತ್ರ ಭೂಮಿ ಜೆರುಸಲೇಂ ಇರುವ ದೇಶ ಇಸ್ರೇಲ್. ಹೀಗಾಗಿ ಇಸ್ರೇಲ್ ಹೆಸರನ್ನು ನನ್ನ ಬಸ್ಸಿಗೆ ಇಟ್ಟಿದ್ದೆ. ಆದರೆ ಕೆಲವರು ತೀವ್ರ ಕಿರಿ ಕಿರಿ ಮಾಡಿದ್ದರಿಂದ ನನಗೆ ಬೇಸರವಾಗಿದ್ದು, ಬಸ್ಸಿನ ಹೆಸರನ್ನು ಬದಲಿಸಿದ್ದೇನೆ ಎಂದು ಹೇಳಿದ್ದಾರೆ.
Bus named after Israel sparks controversy in Mangalore, bus name changed to Jerasulem travels. Owner of the bus Lester Kateel Speaking to Headline Karnataka said what is wrong in naming the bus as Israel as it's a holy land for christians he added.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm