ಬ್ರೇಕಿಂಗ್ ನ್ಯೂಸ್
05-10-24 11:37 am Mangalore Correspondent ಕರಾವಳಿ
ಉಳ್ಳಾಲ, ಅ.5: ಮನೆಯಿಂದ ನಾಪತ್ತೆಯಾಗಿದ್ದ ಅವಿವಾಹಿತ ವ್ಯಕ್ತಿಯೋರ್ವರು ಪಕ್ಕದ ಪಾಳು ಬಿದ್ದ ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕೊಲ್ಯ ಕುಜುಮಗದ್ದೆಯಲ್ಲಿ ನಡೆದಿದೆ.
ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕೊಲ್ಯ ಕುಜುಮಗದ್ದೆ ನಿವಾಸಿ ಪ್ರಸಾದ್ (44) ಮೃತ ದುರ್ದೈವಿ. ಮೂಲತ: ಜಪ್ಪು, ಗೋರ್ದಡ್ಡು ನಿವಾಸಿಯಾದ ಪ್ರಸಾದ್ ಕಳೆದ ಕೆಲವು ವರುಷಗಳಿಂದ ಕುಟುಂಬ ಸಮೇತ ಕುಜುಮಗದ್ದೆಯಲ್ಲಿ ನೆಲೆಸಿದ್ದರು. ಪೈಂಟರ್ ವೃತ್ತಿ ಮಾಡುತ್ತಿದ್ದ ಪ್ರಸಾದ್ ಅವರು ಅವಿವಾಹಿತರಾಗಿದ್ದು ಕೆಲ ದಿನಗಳಿಂದ ಖಿನ್ನತೆಗೊಳಗಾಗಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ.
ನಿನ್ನೆ ಮಧ್ಯಾಹ್ನ ಮನೆಯಲ್ಲಿ ಮೊಬೈಲ್ ಫೋನ್ ಬಿಟ್ಟು ಹೋದ ಪ್ರಸಾದ್ ಅವರು ಮತ್ತೆ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಪ್ರಸಾದ್ ನಾಪತ್ತೆಯಾದ ಬಗ್ಗೆ ಅವರ ಸಹೋದರ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ದೂರು ದಾಖಲಿಸಿದ್ದರು. ಮನೆಮಂದಿ ನೆರೆಹೊರೆಯವರು ಹುಡುಕಾಡಿದ್ದು ಇಂದು ಬೆಳಗ್ಗೆ ಮನೆ ಹತ್ತಿರದ ಪಾಳು ಬಿದ್ದ ಬಾವಿಯ ಬಳಿ ಪ್ರಸಾದ್ ಅವರ ಪಾದರಕ್ಷೆ ದೊರೆತಿದ್ದು ಪ್ರಸಾದ್ ಬಾವಿಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೃತದೇಹವನ್ನ ಮೇಲಕ್ಕೆತ್ತಿದ್ದಾರೆ. ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಂಕಿಸಲಾಗಿದ್ದು ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ. ಮನೆಗೆ ಹಿರಿ ಮಗನಾದ ಮೃತ ಪ್ರಸಾದ್ ತಾಯಿ, ತಂದೆ, ಇಬ್ಬರು ಸಹೋದರರು,ಓರ್ವ ಸಹೋದರಿಯನ್ನ ಅಗಲಿದ್ದಾರೆ.
Missing person body found inside well at kolya near someshwara in Mangalore. The deceased has been identified as Prasad (44). Ullal police are now investigating the case.
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 02:11 pm
HK News Staffer
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
28-08-26 04:17 pm
HK News Staffer
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am