ಬ್ರೇಕಿಂಗ್ ನ್ಯೂಸ್
04-10-24 09:40 pm Udupi Correspondent ಕರಾವಳಿ
ಉಡುಪಿ, ಅ.4: ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಕಲುಷಿತ ನೀರಿನಿಂದಾಗಿ ವಾಂತಿಭೇದಿ ಕಾಣಿಸಿಕೊಂಡ ಪ್ರಕರಣದ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ಸಾವಿರಾರು ಜನರಿಗೆ ವಾಂತಿಭೇದಿ ಆಗಿಲ್ಲ. ಪ್ರತಿ ಮನೆಗೆ ಭೇಟಿ ನೀಡಿದ್ದೇವೆ. ಪ್ರತಿ ದಿನ 25-30 ಕೇಸು ಪತ್ತೆಯಾಗಿದೆ. ಒಟ್ಟು 143 ಪ್ರಕರಣ ಪತ್ತೆಯಾಗಿದೆ. ಕಾಲರಾ ಅಲ್ಲ, ಆಮಶಂಕೆ ಇರುವಂತೆ ತೋರುತ್ತಿದೆ ಎಂದು ಆರೋಗ್ಯ ಇಲಾಖೆ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ನಾಗರತ್ನ ಹೇಳಿದ್ದಾರೆ,
ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವೆಡೆ ಏಕಕಾಲದಲ್ಲಿ ವಾಂತಿಭೇದಿ ಮಾದರಿಯಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಿದ್ದರಿಂದ ಕಲುಷಿತ ನೀರು ಕಾರಣ ಎಂದು ಸುದ್ದಿಯಾಗಿತ್ತು. ಕಾಲರಾ ರೋಗ ಕಾಣಿಸಿಕೊಂಡಿರಬಹುದು ಎಂದು ಆರೋಗ್ಯ ಇಲಾಖೆಯವರು ತಪಾಸಣೆಗೆ ಮುಂದಾಗಿದ್ದರು. ವಾಂತಿ- ಭೇದಿ ಬಗ್ಗೆ ಪ್ರಯೋಗಾಲಯ ವರದಿ ಪಡೆಯಲಾಗಿದ್ದು, ಕಾಲರಾ ಇಲ್ಲ. ಅಲ್ಲಿ ಪತ್ತೆಯಾಗಿರುವುದು ಆಮಶಂಕೆ ಪ್ರಕರಣ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ಸಾವಿರಾರು ಜನರಿಗೆ ವಾಂತಿ ಭೇದಿ ಆಗಿಲ್ಲ. ಪ್ರತೀ ಮನೆಗೆ ಭೇಟಿ ಬಳಿಕ 143 ಪ್ರಕರಣ ಕಂಡುಬಂದಿದೆ. ಪ್ರತಿ ದಿನ 25ರಿಂದ 30 ಕೇಸು ಪತ್ತೆಯಾಗಿತ್ತು. ಸೆಪ್ಟೆಂಬರ್ 27ರಿಂದ ಹಲವರಲ್ಲಿ ವಾಂತಿಭೇದಿ ಕಂಡುಬಂದಿತ್ತು. ಜಿಲ್ಲೆಯಲ್ಲಿ ಕಾಲರಾ ಭೀತಿ ಇದ್ದುದರಿಂದ ನಾವು ತಕ್ಷಣ ಅಲರ್ಟ್ ಆಗಿದ್ದೆವು. ಕಾಲರ ಇರಬಹುದೆಂದು ಭಾವಿಸಿ, ಸರ್ವೇಕ್ಷಣೆ ಮಾಡಲಾಗಿತ್ತು. ಅದೃಷ್ಟವಶಾತ್ ಯಾರಲ್ಲೂ ಕಾಲರಾ ಪತ್ತೆಯಾಗಿಲ್ಲ.
ಸಾಮಾನ್ಯ ಕಲುಶಿತ ನೀರಿನಿಂದಾಗಿ ವಾಂತಿ ಭೇದಿ ಉಂಟಾಗಿತ್ತು. ಮಲ ಪರೀಕ್ಷೆ ನಡೆಸಿದಾಗ ಇಬ್ಬರಲ್ಲಿ ಆಮಶಂಕೆ ಪತ್ತೆಯಾಗಿದೆ. ಎಲ್ಲಾ ರೋಗಿಗಳು ಗುಣಮುಖರಾಗಿದ್ದಾರೆ. ಸಂತ್ರಸ್ತ ಪ್ರದೇಶದ ನೀರಿನ ಪರೀಕ್ಷೆ ನಡೆಸಿದ್ದೇವೆ. ಕುಡಿಯುವ ನೀರನ್ನು ಕ್ಲೋರಿನೇಷನ್ ಮಾಡಿದ್ದೇವೆ. ಎಲ್ಲಾ ಓವರ್ ಹೆಡ್ ಟ್ಯಾಂಕುಗಳನ್ನು ಸ್ವಚ್ಛಗೊಳಿಸಿದ್ದೇವೆ. ವಿಪರೀತ ಮಳೆ, ನೆರೆಯಿಂದ ನೀರು ಕಲುಷಿತ ಆಗಿರಬಹುದು. ನೀರಿನಲ್ಲಿ ಕ್ಲೋರಿನ್ ಪ್ರಮಾಣ ಹೆಚ್ಚಾಗಿದೆ ಅನ್ನೋದು ಸುಳ್ಳು. ವೈಜ್ಞಾನಿಕವಾಗಿ ಕ್ಲೋರಿನೇಶನ್ ಮಾಡಿದ್ದೇವೆ. ಕುಡಿಯಲು ನೀರು ಯೋಗ್ಯ ಎಂದು ವರದಿ ಬಂದ ಮೇಲೆ ಸರಬರಾಜು ಮಾಡಿದ್ದೇವೆ. ಅಗತ್ಯ ಬಿದ್ದರೆ ಸೂಪರ್ ಕ್ಲೋರಿನೇಷನ್ ಮಾಡುತ್ತೇವೆ ಎಂದಿದ್ದಾರೆ.
ಕ್ಲೋರಿನ್ ನಿಂದ ಈ ರೀತಿಯ ಕಾಯಿಲೆ ಬರುತ್ತೆ ಅನ್ನೋದು ತಪ್ಪು ತಿಳುವಳಿಕೆ. ಒಳರೋಗಿಗಳಾಗಿ ದಾಖಲಾದವರ ಸಂಖ್ಯೆ ನಿಯಂತ್ರಣದಲ್ಲಿದೆ. ಕಾಲರಾ ಇರಬಹುದು ಎಂಬ ಕಾರಣಕ್ಕೆ ಆತಂಕವಾಗಿತ್ತು. ಬೇರೆ ಬೇರೆ ಮೂಲಗಳಿಂದ ಕಾಲಾರಾ ಬಂದರೆ ನಿಯಂತ್ರಣ ಕಷ್ಟವಾಗುತ್ತದೆ. ಇದು ಕಾಲರಾ ಅಲ್ಲ, ಹಾಗಾಗಿ ಸಮಸ್ಯೆ ಇಲ್ಲ ಎಂದು ನಾಗರತ್ನ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
More than one thousand residents at Uppunda in Udupi district fell ill after drinking contaminated water from a local overhead water tank, Health Department officials said on Friday.
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 02:11 pm
HK News Staffer
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
28-08-26 04:17 pm
HK News Staffer
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am