ಬ್ರೇಕಿಂಗ್ ನ್ಯೂಸ್
03-10-24 05:50 pm Mangalore Correspondent ಕರಾವಳಿ
ಮಂಗಳೂರು, ಅ.3: ಮಂಗಳೂರು ದಸರಾ ಎಂದೇ ಖ್ಯಾತಿ ಎತ್ತಿರುವ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಹತ್ತು ದಿನಗಳ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕಿದೆ. ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರು ಶಾರದಾ ಪ್ರತಿಷ್ಠೆ ಬಳಿಕ ಉತ್ಸವಕ್ಕೆ ಚಾಲನೆ ನೀಡಿದ್ದಾರೆ.
ದೇವಸ್ಥಾನದ ಬಲಭಾಗದಲ್ಲಿರುವ ಬೃಹತ್ ಸಭಾಂಗಣದಲ್ಲಿ ನವದುರ್ಗೆಯರು, ಶಾರದೆ ಮತ್ತು ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ ಆಗಿದ್ದು ಸಾವಿರಾರು ಜನರು ಸಾಕ್ಷಿಯಾಗಿದ್ದಾರೆ. ಇಂದಿನಿಂದ ಮೊದಲ್ಗೊಂಡು ನಿರಂತರವಾಗಿ ಹತ್ತು ದಿನಗಳ ಕಾಲ ಶಾರದೆ, ನವದುರ್ಗೆಯರ ಪೂಜೆ ನಡೆಯಲಿದ್ದು, ಅಭೂತಪೂರ್ವ ಅಲಂಕಾರದಲ್ಲಿ ನವದುರ್ಗೆಯರು ಶೋಭಿಸಲಿದ್ದಾರೆ.
ಇದೇ ವೇಳೆ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಜನಾರ್ದನ ಪೂಜಾರಿ, ಮಂಗಳೂರು ದಸರಾ ಸಾಕಾರ ಆಗಿರೋದು ನನ್ನಿಂದ ಅಲ್ಲ. ಅದು ದೇವರಿಂದ ಆಗಿರೋದು. ದೇವರ ಶಕ್ತಿ ಇರೋದಕ್ಕಾಗಿ ಜನರು ಬರುತ್ತಿದ್ದಾರೆ. ನಾವು ನೀವು ಏನೂ ಅಲ್ಲ ಎಂದು ಹೇಳಿದರು. ದಸರಾ ಸಂದರ್ಭದಲ್ಲಿ ಹತ್ತು ದಿನವೂ ಖ್ಯಾತ ಕಲಾವಿದರಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಅ.4ರಂದು ಬಹುಭಾಷಾ ಕವಿಗೋಷ್ಟಿ ಆಯೋಜಿಸಲಾಗಿದ್ದು ಹತ್ತು ಭಾಷೆಗಳಲ್ಲಿ ಕವನ ವಾಚನ ನಡೆಯಲಿದೆ. ಇದಲ್ಲದೆ, ಈ ಬಾರಿ ವಿಶೇಷ ಎನ್ನುವಂತೆ ಅ.6ರಂದು ಬೆಳಗ್ಗೆ 6 ಗಂಟೆಗೆ ವಾಕಥಾನ್ ಏರ್ಪಡಿಸಲಾಗಿದೆ.
ಅ.13ರಂದು 9 ಕಿಮೀ ಉದ್ದಕ್ಕೆ ಮಂಗಳೂರು ನಗರದುದ್ದಕ್ಕೂ ನವದುರ್ಗೆಯರ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಮೈಸೂರು ದಸರಾ ಉತ್ಸವ ನೆನಪಿಸುವಂತೆ ವಿಶಿಷ್ಟ ಕಳೆ ಬರಲಿದೆ. ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ವಿದೇಶಿ ಪ್ರಜೆಗಳೂ ಉತ್ಸವ ನೋಡುವುದಕ್ಕೆ ಬರುವುದು ವಿಶೇಷ.
Former union minister B Janardhana Poojary inaugurated the 10-day grand Dasara celebration at Kudroli Gokarnatheshwara Temple on Thursday, October 3. Dasara Mahotsava will be held from October 3 to October 14, featuring various cultural and spiritual programs.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 10:41 pm
Mangalore Correspondent
Mangalore, Dharmasthala Case, SIT, whistle bl...
26-07-25 10:05 pm
ಧರ್ಮಸ್ಥಳ ಎಸ್ಐಟಿ ತಂಡದಿಂದ ಮತ್ತೊಬ್ಬರು ಹೊರಕ್ಕೆ ;...
26-07-25 08:20 pm
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm