ಬ್ರೇಕಿಂಗ್ ನ್ಯೂಸ್
31-07-20 07:36 am Mangalore Correspondant ಕರಾವಳಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ 198 ಮಂದಿಗೆ ಕೋವಿಡ್ ದೃಢಪಟ್ಟಿದೆ. ಇದೇವೇಳೆ ಬುಧವಾರ ಮತ್ತು ಗುರುವಾರ ಮೃತಪಟ್ಟ ಎಂಟು ಮಂದಿಯಲ್ಲಿ ಕೋವಿಡ್ ದೃಢಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಕೋವಿಡ್ ದೃಢಪಟ್ಟ 27 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ, 80 ಮಂದಿಗೆ ಇನ್‌ಫ್ಲೂಯೆನ್ಜ್ ಲೈಕ್ ಇಲ್‌ನೆಸ್, 14 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ, ನಾಲ್ವರಿಗೆ ಅಂತಾರಾಷ್ಟ್ರೀಯ ಪ್ರಯಾಣದಿಂದ ಸೋಂಕು ತಗಲಿದೆ. 73 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ.
ಕೋವಿಡ್ ಮುಕ್ತರಾಗಿ 105 ಮಂದಿ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈವರೆಗೆ 5,509 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 2,561 ಮಂದಿ ಗುಣಮುಖರಾಗಿದ್ದಾರೆ. 2,800 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಮೃತಪಟ್ಟ ಎಂಟು ಮಂದಿಯ ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿ ಗುರುವಾರ ಸ್ವೀಕೃತವಾಗಿದ್ದು, ಎಲ್ಲರಿಗೂ ಕೋವಿಡ್ ಇರುವುದು ದೃಢಪಟ್ಟಿದೆ. ಎಲ್ಲ ಮರಣಗಳ ಕಾರಣ ನಿರ್ಧರಿಸಲು ಜಿಲ್ಲಾ ಮಟ್ಟದ ತಜ್ಞರ ಸಮಿತಿಯಿಂದ ವರದಿ ಸ್ವೀಕೃತವಾಗಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
ಮೃತ ವ್ಯಕ್ತಿಗಳಲ್ಲಿ ಕೋವಿಡ್ ಸೋಂಕು ಪತ್ತೆ
– ಪುತ್ತೂರಿನ 36ರ ಮಹಿಳೆ ಜು. 26ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಬುಧವಾರ ಮೃತಪಟ್ಟಿದ್ದಾರೆ. ಅವರು ರೀಫ್ರಾಕ್ಟರಿ ಹೈಪೋಕ್ಸೇಮಿಯಾ, ಸೆಪ್ಟಿಕ್ ಶಾಕ್, ರೇನಲ್ ಫೈಲ್ಯೂರ್‌ನಿಂದ ಬಳಲುತ್ತಿದ್ದರು.
-ಮಂಗಳೂರಿನ 60ರ ಮಹಿಳೆ ಗುರುವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ಮೃತಪಟ್ಟಿದ್ದಾರೆ. ಅವರು ರೀಫ್ರಾಕ್ಟರಿ ಹೈಪೋಕ್ಸೇಮಿಯಾ, ರೆಸ್ಪಿರೇಟರಿ ಫೈಲ್ಯೂರ್‌ನಿಂದ ಬಳಲುತ್ತಿದ್ದರು.
– ದಾವಣಗೆರೆ ಮೂಲದ 60ರ ಮಹಿಳೆ ಜು. 23ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಮೃತಪಟ್ಟಿದ್ದಾರೆ. ಅವರು ಅಕ್ಯೂಟ್ ರೆಸ್ಪಿರೇಟರಿ ಇನ್‌ಫೆಕ್ಷನ್, ಡಯಾಬಿಟಿಸ್, ಹೈಪರ್‌ಟೆನ್ಷನ್‌ನಿಂದ ಬಳಲುತ್ತಿದ್ದರು.
– ಮಂಗಳೂರಿನ 57ರ ವ್ಯಕ್ತಿ ಜು. 26ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ 29ರಂದು ಮೃತಪಟ್ಟಿದ್ದಾರೆ. ಅವರು ಅಸ್ತಮಾ, ಅಧಿಕ ರಕ್ತದೊತ್ತಡ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದರು.
– ಮೈಸೂರಿನ 75ರ ವೃದ್ಧ ಜು. 26ರಂದು ವೆನಾÉಕ್ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಮೃತಪಟ್ಟಿದ್ದಾರೆ. ಅವರು ಅಸ್ತಮಾ, ಅಧಿಕ ರಕ್ತದೊತ್ತಡ, ನ್ಯುಮೋನಿಯಾದಿಂದ ಬಳಲುತ್ತಿದ್ದರು.
– ಪುತ್ತೂರಿನ 64ರ ವ್ಯಕ್ತಿ ಜು. 22ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಮೃತಪಟ್ಟಿದ್ದಾರೆ. ಅವರು ರೀಫ್ರಾಕ್ಟರಿ ಹೈಪೋಕ್ಸೇಮಿಯಾದಿಂದ ಬಳಲುತ್ತಿದ್ದರು.
– ಮಂಗಳೂರಿನ 52 ವರ್ಷದ ವ್ಯಕ್ತಿ ಜು. 28ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಮೃತಪಟ್ಟಿದ್ದಾರೆ. ಅವರು ಅಕ್ಯುಟ್ ಕೊರೊನರಿ ಈವೆಂಟ್ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದರು.
– ಮಂಗಳೂರಿನ 87ರ ವೃದ್ಧೆ ಜು. 18ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಮೃತಪಟ್ಟಿದ್ದಾರೆ. ಅವರು ರೀಫ್ರಾಕ್ಟರಿ ಹೈಪೋಕ್ಸೇಮಿಯಾ, ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.
26-12-25 01:35 pm
HK News Desk
ಸದ್ಯಕ್ಕಿಲ್ಲ ಸಿಎಂ ಬದಲಾವಣೆ ! ರಾಜ್ಯದಿಂದ ಕೇಂದ್ರ ನ...
25-12-25 08:00 pm
Chitradurga Seabird Bus accident: ಚಿತ್ರದುರ್ಗ...
25-12-25 06:26 pm
SeaBird Bus Fire Accident, Chitradurga: ಕಂಟೈನ...
25-12-25 12:12 pm
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
26-12-25 03:04 pm
HK News Desk
ಹೆತ್ತವರು ಮನೆಯಲ್ಲಿ ಆತ್ಮಹತ್ಯೆ ; ಬೆಳೆದು ನಿಂತ ಪುತ...
26-12-25 02:50 pm
ಜಗತ್ತಿನ ಅತಿ ದೊಡ್ಡ ಮುಸ್ಲಿಂ ದೇಶದಲ್ಲಿ 4500 ವರ್ಷ...
24-12-25 11:13 pm
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
25-12-25 10:54 pm
Mangalore Correspondent
ಡಿ.27ರಂದು 9ನೇ ವರ್ಷದ ಮಂಗಳೂರು ಕಂಬಳ ; ನವ ವರ್ಷ- ನ...
24-12-25 10:30 pm
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
26-12-25 03:31 pm
HK News Desk
ಶಂಕಿತ ಬಾಂಗ್ಲಾ ವ್ಯಕ್ತಿಗೆ ಪಾಸ್ಪೋರ್ಟ್ ; ಸಹೋದ್ಯೋಗ...
23-12-25 01:41 pm
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm