ಬ್ರೇಕಿಂಗ್ ನ್ಯೂಸ್
20-09-24 10:03 pm Mangalore Correspondent ಕರಾವಳಿ
ಮಂಗಳೂರು, ಸೆ.20: ನಗರದ ಕುಂಟಿಕಾನ ಫ್ಲೈ ಓವರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಒಂದಕ್ಕೆ ಲಾರಿ ಡಿಕ್ಕಿಯಾಗಿದ್ದು ಪದವಿ ಕಲಿಯುತ್ತಿದ್ದ ಬಂಟ್ವಾಳ ಮೂಲದ ವಿದ್ಯಾರ್ಥಿಯೊಬ್ಬ ಲಾರಿಯಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ಮೆಲ್ಕಾರ್ ನಿವಾಸಿ ಮೊಹಮ್ಮದ್ ಜಾಸಿಂ (18) ಮೃತ ವಿದ್ಯಾರ್ಥಿ. ಕೊಟ್ಟಾರದ ಯೆನಪೋಯ ಕಾಲೇಜಿನಲ್ಲಿ ಬಿಬಿಎ ಕಲಿಯುತ್ತಿದ್ದ ಈತ ತನ್ನ ಗೆಳೆಯ, ದ್ವಿತೀಯ ವರ್ಷದ ಬಿಬಿಎ ಕಲಿಯುತ್ತಿದ್ದ ಮೆಲ್ಕಾರ್ ನಿವಾಸಿ ಸಾಹಿರ್ ಸುಲೇಮಾನ್ (20) ಜೊತೆಗೆ ಪಲ್ಸರ್ ಬೈಕಿನಲ್ಲಿ ಹಿಂಬದಿ ಸವಾರನಾಗಿ ತೆರಳುತ್ತಿದ್ದ. ಕೊಟ್ಟಾರದಿಂದ ಹೆದ್ದಾರಿಯಲ್ಲಿ ಕೆಪಿಟಿಯತ್ತ ತೆರಳುತ್ತಿದ್ದಾಗ ಎಜೆ ಆಸ್ಪತ್ರೆ ಮುಂಭಾಗದ ಮೇಲ್ಸೇತುವೆಯಲ್ಲಿ ಹಿಂದಿನಿಂದ ಬರುತ್ತಿದ್ದ ಲಾರಿ ಡಿಕ್ಕಿಯಾಗಿದೆ. ಹಿಂಬದಿ ಸವಾರನಾಗಿದ್ದ ಮೊಹಮ್ಮದ್ ಜಾಸಿಮ್ ರಸ್ತೆಗೆ ಎಸೆಯಲ್ಪಟ್ಟಿದ್ದು ಆತನ ಮೇಲಿನಿಂದಲೇ ಲಾರಿ ಹರಿದಿದೆ ಎನ್ನಲಾಗಿದೆ.
ಬೈಕ್ ಸವಾರಿ ಮಾಡುತ್ತಿದ್ದ ಸಾಹಿರ್ ಕಾಲಿಗೆ ಗಂಭೀರ ಗಾಯವಾಗಿದೆ. ಆತನನ್ನು ಎಜೆ ಆಸ್ಪತ್ರೆಗೆ ಸೇರಿಸಲಾಗಿದೆ. ಲಾರಿ ಚಾಲಕ ಕೇರಳದ ಕೊಟ್ಟಾಯಂ ನಿವಾಸಿ ಅಜೇಶ್ ಬಿ. ನಾಯರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಂಡೇಶ್ವರ ಸಂಚಾರಿ ಠಾಣೆಯಲ್ಲಿ ಕೇಸು ದಾಖಲಾಗಿದೆ.
Mangalore Bike lorry accident on Kuntikana flyover, 18 year old student killed on spot. The deceased is identified as Mohamed Jasim (18), a fresident of Melkar on B C Road. The incident, which took place at 4:10 pm, involved a Pulsar bike (KA 19 HM 6972) ridden by Sahir Sulaiman (20), also a resident of Melkar, B C Road
26-07-25 02:00 pm
HK News Desk
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
Rameshwaram Cafe Pongal Worm: ರಾಮೇಶ್ವರ ಕೆಫೆಯ...
24-07-25 10:52 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
26-07-25 08:20 pm
Mangalore Correspondent
Mangalore Rajashree Jayaraj Poojary Death: ಬಹ...
26-07-25 04:38 pm
India’s Largest Job Fair ‘Alva’s Pragati 2025...
26-07-25 11:37 am
Congress, Mangalore: ಸಿದ್ದರಾಮಯ್ಯ ಆಡಳಿತದಲ್ಲೇ ದ...
26-07-25 10:44 am
Dharmasthala Case, SIT Meeting, Anucheth, Jit...
25-07-25 08:25 pm
26-07-25 09:35 pm
HK News Desk
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm