ಬ್ರೇಕಿಂಗ್ ನ್ಯೂಸ್
16-09-24 09:09 pm Mangalore Correspondent ಕರಾವಳಿ
ಮಂಗಳೂರು, ಸೆ.16: ತಾಪಮಾನ ಹೆಚ್ಚಳದಿಂದಾಗಿ ಭೂಮಿಯ ಮೇಲೆ ತೀವ್ರ ತೆರನಾದ ಪರಿಣಾಮಗಳಾಗುತ್ತಿದ್ದು, ಒಂದೆಡೆ ವಾತಾವರಣದಲ್ಲಿ ಉಷ್ಣತೆ ಹೆಚ್ಚಳ ಮತ್ತು ಅತಿಯಾದ ಮಳೆಯಿಂದ ವಿಕೋಪಗಳು ಉಂಟಾಗಲಿವೆ. ಇದರಿಂದಾಗಿ ಮುಂದಿನ 20 ವರ್ಷಗಳಲ್ಲಿ ಜಗತ್ತಿನ ಒಟ್ಟು ಜನಸಂಖ್ಯೆಯ 70 ಶೇಕಡಾ ಜನರು ಪೀಡಿತರಾಗಲಿದ್ದಾರೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ತಾಪಮಾನ ಹೆಚ್ಚಳದ ಬಗ್ಗೆ ಗಂಭೀರ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ, ಜಗತ್ತಿನ 70 ಶೇಕಡಾ ಜನರು ತೀವ್ರ ಪೀಡನೆಗೆ ಒಳಗಾಗಲಿದ್ದಾರೆ. ಗಂಭೀರ ಕ್ರಮಗಳನ್ನು ತೆಗೆದುಕೊಂಡರೆ ಇದರಲ್ಲಿ 20 ಶೇಕಡಾ ಪರಿಣಾಮ ಇಳಿಕೆಯಾಗಲಿದೆ ಎಂದು ಸೆಂಟರ್ ಫಾರ್ ಇಂಟರ್ ನ್ಯಾಶನಲ್ ಕ್ಲೈಮೇಟ್ ರಿಸರ್ಚ್ ಸಂಸ್ಥೆಯ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಅತಿಯಾದ ಇಂಗಾಲದ ಹೊಸ ಸೂಸುವಿಕೆಯಿಂದಾಗಿ ಈಗಾಗಲೇ ಭೂಮಿಯ ಸಮತೋಲನ ತಪ್ಪಿದೆ. ಅತಿ ವೃಷ್ಟಿ, ಬರದಂತಹ ಸನ್ನಿವೇಶಗಳು ಎದುರಾಗಿವೆ. ಭೀಕರ ಮಳೆಯಿಂದಾಗಿ ಬಸವಳಿದರೆ, ಅತಿಯಾದ ಬಿಸಿಲಿನಿಂದಾಗಿ ಜನರು ತತ್ತರಿಸುವ ಸ್ಥಿತಿ ಬಂದಿದೆ. ಈ ರೀತಿಯ ತೊಂದರೆಗಳು ಮುಂದಿನ 20 ವರ್ಷಗಳಲ್ಲಿ ಭೀಕರ ರೂಪ ತಾಳಲಿವೆ. ವಿಶ್ವ ರಾಷ್ಟ್ರಗಳು ಈ ಬಗ್ಗೆ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಏಶ್ಯಾ ರಾಷ್ಟ್ರಗಳಲ್ಲಿ ವಾಯು ಮಾಲಿನ್ಯ ಹೆಚ್ಚಿದ್ದು, ಇದರಿಂದ ಮನುಷ್ಯನ ಮೇಲೆ ನೇರ ಪರಿಣಾಮ ಬೀರಲಿದೆ. ಇದಲ್ಲದೆ, ಜಾಗತಿಕ ತಾಪಮಾನಕ್ಕೂ ದೊಡ್ಡ ಕೊಡುಗೆ ನೀಡುತ್ತಿದೆ. ಮಾಲಿನ್ಯಕಾರಿ ಅನಿಲ ಬಿಡುಗಡೆಯನ್ನು ಅಗತ್ಯವಾಗಿ ಸ್ವಚ್ಛ ಮಾಡಬೇಕಿದೆ ಎಂದು ನೇಚರ್ ಜಿಯೋ ಸೈನ್ಸ್ ನಲ್ಲಿ ಪ್ರಕಟವಾದ ವರದಿಯಲ್ಲಿ ವಿಜ್ಞಾನಿಗಳು ಬೊಟ್ಟು ಮಾಡಿದ್ದಾರೆ. ಜಾಗತಿಕ ತಾಪಮಾನಕ್ಕೆ ಕೊಡುಗೆ ನೀಡಬಲ್ಲ ವಾಯುಮಾಲಿನ್ಯದ ಬಗ್ಗೆ ಅಗತ್ಯವಾಗಿ ಮುನ್ನೆಚ್ಚರಿಕೆ ವಹಿಸಬೇಕೆಂದು ವಿಜ್ಞಾನಿಗಳು ಒತ್ತಾಯ ಮಾಡಿದ್ದಾರೆ.
Nearly three-quarters of the global population could face rapid and intense changes in extreme weather patterns within the next two decades unless greenhouse gas emissions are significantly reduced, according to a new study published in Nature Geoscience.
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 02:11 pm
HK News Staffer
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
28-08-26 06:22 pm
HK News Staffer
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm