ಬ್ರೇಕಿಂಗ್ ನ್ಯೂಸ್
09-09-24 05:17 pm Mangalore Correspondent ಕರಾವಳಿ
Photo credits : Manju Studio XL
ಮಂಗಳೂರು, ಸೆ.9: ಸ್ವಾತಂತ್ರ್ಯ ಕಾಲದಲ್ಲಿ ಜನರನ್ನು ಮತ ಭೇದ ಬದಿಗಿಟ್ಟು ಒಂದುಗೂಡಿಸಲು ಬಾಲಗಂಗಾಧರ ತಿಲಕರು ಮುಂಬೈನಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತಂದಿದ್ದರು. ಮುಂಬೈನಲ್ಲಿ ಆರಂಭಗೊಂಡ ಈ ರೀತಿಯ ಗಣೇಶೋತ್ಸವವನ್ನು ಕರಾವಳಿಯಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ 1948ರಲ್ಲಿ ಆಚರಣೆಗೆ ತರಲಾಗಿತ್ತು. ಮೊದಲಿಗೆ ಮುಲ್ಕಿ ಮರ್ತಪ್ಪ ಪ್ರಭು ನೇತೃತ್ವದಲ್ಲಿ ಬಜಿಲಕೇರಿಯ ಜೈ ಬಜರಂಗ ಬಲಿ ವ್ಯಾಯಾಮ ಶಾಲೆಯಲ್ಲಿ ಆರಂಭಗೊಂಡಿದ್ದರೂ, ಆನಂತರ ಅದೇ ಗಣೇಶೋತ್ಸವ ಸಂಘನಿಕೇತನ ಕಾರ್ಯಾಲಯದಲ್ಲಿ ನಡೆದುಬಂದಿತ್ತು.
ಆರೆಸ್ಸೆಸ್ ಪ್ರಣೀತ ಕೇಶವ ಸ್ಮೃತಿಸಂವರ್ಧನ ಸಮಿತಿಯ ಆಶ್ರಯದಲ್ಲಿ ನಡೆದುಬಂದ ಗಣೇಶೋತ್ಸವ ಈ ಬಾರಿ 77ನೇ ವರ್ಷ ಪೂರೈಸಿದೆ. ಇದರೊಂದಿಗೆ ಅತಿ ಪುರಾತನ ಮತ್ತು ಮಂಗಳೂರಿನ ಆರೆಸ್ಸೆಸ್ ಕಾರ್ಯಕರ್ತರ ಪಾಲಿನ ಹೆಮ್ಮೆಯ ಗಣೇಶೋತ್ಸವ ಎಂದೂ ಹೆಸರಾಗಿದೆ. ಸಾಮಾಜಿಕ ಕಾರ್ಯಕರ್ತ, ಆರೆಸ್ಸೆಸ್ ಸ್ವಯಂಸೇವಕ ಫ್ರಾಂಕ್ಲಿನ್ ಮೊಂತೇರೊ ತಮ್ಮ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯಡಿ ಕಳೆದ ಹತ್ತು ವರ್ಷಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಬಂದಿದ್ದಾರೆ. ಸಂಘನಿಕೇತನದ ಮಹಾಗಣಪತಿಯ ಉತ್ಸವಕ್ಕೆ ಕ್ರೈಸ್ತ ಮುಖಂಡರನ್ನು ಕರೆಸಿ, ಬಾಲಗಂಗಾಧರ ತಿಲಕರ ಆಶಯದಂತೆ ನಿಜ ಅರ್ಥದಲ್ಲಿ ಸೌಹಾರ್ದ ಸಾರುವ ಸಂಕೇತವಾಗಿ ತೋರಿಸಿದ್ದಾರೆ.
ಸೋಮವಾರ ಬೆಳಗ್ಗೆ ಕರ್ನಾಟಕ ಬ್ಯಾಂಕಿನ ಎಜಿಎಂ ಜೇನ್ ಮರಿಯಾ ಸಲ್ದಾನ, ಕರ್ನಾಟಕ ಬ್ಯಾಂಕ್ ನಿವೃ-ತ್ತ ಪ್ರಧಾನ ವ್ಯವಸ್ಥಾಪಕಿ ಲೀನಾ ಮೊಂತೇರೊ, ಕ್ರೆಡೈ ಅಧ್ಯಕ್ಷ ವಿನೋದ್ ಪಿಂಟೋ, ಅರ್ಬರ್ಟ್ ಡಿಸೋಜ, ನವೀನ್ ಕಾರ್ಡೋಜ, ನವೀನ್ ಫೆರ್ನಾಂಡಿಸ್, ಉಪನ್ಯಾಸಕ ಡಾ.ಜೆಫ್ರಿ ರೋಡ್ರಿಗಸ್, ರೋಟರಿ ಲ್ಯಾನಿ ಪಿಂಟೋ, ವಕೀಲಾ ಝೀಟಾ ಮೊರಾಸ್, ಸಾಮಾಜಿಕ ಕಾರ್ಯಕರ್ತೆ ಜೂಲಿಯಟ್ ಡಿಕುನ್ನಾ, ಉದ್ಯಮಿ ಪ್ರಶಾಂತ್ ಸನಿಲ್ ಅವರ ನಿಯೋಗ ಫ್ರಾಂಕ್ಲಿನ್ ಮೊಂತೇರೊ ನೇತೃತ್ವದಲ್ಲಿ ಸಂಘನಿಕೇತನಕ್ಕೆ ಆಗಮಿಸಿತ್ತು. ಕಾರ್ಯಾಲಯದಲ್ಲಿ 77ನೇ ವರ್ಷದ ಪ್ರಯುಕ್ತ ಪೂಜಿಸುತ್ತಿರುವ ಗಣೇಶನ ಮೂರ್ತಿಗೆ ಫಲವಸ್ತು, ಹೂವುಗಳನ್ನು ಸಮರ್ಪಿಸಿದ ನಿಯೋಗ ಸದಸ್ಯರಿಗೆ ಅರ್ಚಕರು ಪ್ರಸಾದ ನೀಡಿದರು. ಅಲ್ಲದೆ, ನಿಯೋಗದ ಪ್ರಮುಖರನ್ನು ಶಾಲು ಹಾಕಿ ಸನ್ಮಾನಿಸಿದರು.
ಪ್ರತಿ ವರ್ಷ ಗಣೇಶೋತ್ಸವ ಸಂದರ್ಭದಲ್ಲಿ ಹಿಂದುಗಳ ತೆನೆಹಬ್ಬಕ್ಕೆ ಉಚಿತವಾಗಿ ತೆನೆಗಳನ್ನು ನೀಡುವ ಜಪ್ಪಿನಮೊಗರಿನ ಗ್ರೆಗರಿ ಡಿಸೋಜ ಅವರನ್ನೂ ಸನ್ಮಾನಿಸಲಾಯಿತು. ಕೃಷಿಕರೂ ಆಗಿರುವ ಗ್ರೆಗರಿ ಡಿಸೋಜ ದೋಣಿಯನ್ನು ಹೊಂದಿದ್ದು, ನೇತ್ರಾವತಿ ನದಿಯಲ್ಲಿ ಗಣಪತಿ ವಿಸರ್ಜನೆಗೆ ಉಚಿತವಾಗಿ ದೋಣಿಯನ್ನು ಒದಗಿಸುವ ಕೈಂಕರ್ಯವನ್ನೂ ಮಾಡುತ್ತಿದ್ದಾರೆ. ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಪ್ರವೀಣ್ ಕುಮಾರ್, ಸತೀಶ್ ಪ್ರಭು, ಗಜಾನನ ಪೈ, ಜಿ. ಸುರೇಶ್ ಕಾಮತ್, ಯು.ನಂದನ್ ಮಲ್ಯ ಮತ್ತಿತರರು ಇದ್ದರು. ಇದೇ ವೇಳೆ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಫ್ರಾಂಕ್ಲಿನ್ ಮೊಂತೇರೊ, ತಿಲಕರ ಆಶಯದಂತೆ ಧಾರ್ಮಿಕ ಸೌಹಾರ್ದವನ್ನು ಸಾರಿದ್ದೇವೆ. ಹತ್ತು ವರ್ಷಗಳಿಂದ ಕ್ರೈಸ್ತರ ವೇದಿಕೆಯಿಂದ ಸಮಾಜದ ಪ್ರಮುಖರು ಗಣೇಶೋತ್ಸವಕ್ಕೆ ಬರುತ್ತಿದ್ದು, ನಿಜ ಅರ್ಥದಲ್ಲಿ ನಾವೆಲ್ಲ ಒಂದೇ ತಾಯಿ ಮಕ್ಕಳು ಎನ್ನುವ ಸಂಕೇತ ತೋರಿದ್ದೇವೆ ಎಂದು ಹೇಳಿದರು.
ಗಣಪತಿ ಕೂರಿಸಲು ಅಕ್ಬರಾಲಿ ಮೇಜು
ಇದೇ ವೇಳೆ, 77 ವರ್ಷಗಳ ಗಣೇಶೋತ್ಸವದ ಇತಿಹಾಸ ನೆನಪಿಸಿದ ಸತೀಶ್ ಪ್ರಭು ಅವರು, ನಾವು ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ನಿರಂತರ ಗಣೇಶೋತ್ಸವ ನಡೆಸಿಕೊಂಡು ಬಂದಿದ್ದೇವೆ. 1948ರಲ್ಲಿ ಬಾಲಗಂಗಾಧರ ತಿಲಕರಿಂದ ಪ್ರೇರಣೆ ಪಡೆದು ಬಜಿಲಕೇರಿಯ ಜೈ ಬಜರಂಗಿ ಬಲಿ ವ್ಯಾಯಾಮ ಶಾಲೆಯಲ್ಲಿ ಕರಾವಳಿಯಲ್ಲಿ ಮೊದಲ ಬಾರಿಗೆ ಗಣೇಶೋತ್ಸವ ಆರಂಭಿಸಲಾಗಿತ್ತು. ಮೂರು ವರ್ಷ ಅಲ್ಲಿ ಉತ್ಸವ ಮಾಡಿದ್ದೇವೆ. ಮೊದಲ ವರ್ಷ ಗಣಪತಿ ಕೂರಿಸಲು ಬಂದರಿನ ಅಕ್ಬರಾಲಿ ಶೇಟ್ ಮೇಜಿನ ವ್ಯವಸ್ಥೆ ಮಾಡಿಕೊಟ್ಟಿದ್ದರು. ಎದುರಿನಲ್ಲಿ ಮಸೀದಿ ಇದ್ದರೂ, ನಮ್ಮ ನಡುವೆ ಸೌಹಾರ್ದ ಇತ್ತು.
1952ರಲ್ಲಿ ಈಗ ಗೋಕರ್ಣನಾಥ ಕಾಲೇಜು ಇರುವ ಜಾಗದಲ್ಲಿ ಸೂಟರ್ ಹಾಸ್ಟೆಲ್ ಅಂತ ಇತ್ತು. ಅಲ್ಲಿ ಒಂದು ವರ್ಷ ಗಣೇಶೋತ್ಸವ ನಡೆದಿತ್ತು. ಆನಂತರ, 1953ರಲ್ಲಿ ಈಗ ಸಂಘನಿಕೇತನ ಇರುವಲ್ಲಿ ಖಾಲಿ ಜಾಗವೊಂದನ್ನು ದಾನಿಯೊಬ್ಬರು ದಾನ ನೀಡಿದರು. ಅಲ್ಲಿ ಮೂರು ವರ್ಷ ಕಾಲ ಖಾಲಿ ಚಪ್ಪರ ಹಾಕಿ ಗಣೇಶೋತ್ಸವ ಮಾಡಿದ್ದೇವೆ. ಆಗ ಮೂರು ದಿನ ಗಣಪತಿ ಇಡುತ್ತಿದ್ದೆವು. 1955ರ ನಂತರ ಐದು ದಿನಗಳ ಉತ್ಸವ ಶುರು ಮಾಡಿದ್ದು. 53ರ ಕಾಲದಿಂದಲೂ ಮಣ್ಣಗುಡ್ಡದ ಮೋಹನ್ ರಾವ್ ಕುಟುಂಬಸ್ಥರು ಗಣಪತಿ ಮಾಡಿಕೊಡುತ್ತಿದ್ದಾರೆ. ವಿಶೇಷ ಅಂದ್ರೆ, ಅಂದಿನ ಗಣಪತಿಗೂ ಇಂದಿನ ಗಣಪತಿಗೂ ಗಾತ್ರ, ಆಕಾರ, ಆಕರ್ಷಣೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ.
1977ರ ತುರ್ತು ಪರಿಸ್ಥಿತಿಯ ಕಾಲದಲ್ಲಿಯೂ ಉತ್ಸವ ನಿಂತಿರಲಿಲ್ಲ. 50ನೇ ವರ್ಷಾಚರಣೆಯನ್ನು ಡಾ.ಮಾಧವ ಭಂಡಾರಿ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಗಿತ್ತು. ಮೊದಲಿನಿಂದಲೂ ಮುಸ್ಲಿಂ, ಕ್ರೈಸ್ತರು ನಮ್ಮ ಜೊತೆಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಪ್ರತಿ ವರ್ಷ ಯಾವುದೇ ಅಪೇಕ್ಷೆ ಇಲ್ಲದೆ, ಭಕ್ತಿಯಿಂದ ಬರುತ್ತಾರೆ. ದೇಶ ಮುನ್ನಡೆಯಲು ಎಲ್ಲರೂ ಸೌಹಾರ್ದ, ಸಾಮರಸ್ಯ ಭಾವ ಇರಬೇಕು. ಇದನ್ನೇ ತಿಲಕರು ಬಯಸಿದ್ದರು. ಅದನ್ನು ಸಂಘನಿಕೇತನದಲ್ಲಿ ಸಾಕಾರಗೊಳಿಸಿದ್ದೇವೆ ಎಂದು ಸತೀಶ್ ಪ್ರಭು ಸ್ಮರಿಸಿದರು.
In a heart-warming gesture that fosters the spirit of unity and harmony, leaders of Catholic delegations visited Sanghaniketan to be part of Ganesh Chaturthi celebrations on Saturday September 08. The delegation got a warm welcome from Sanghaniketan Ganeshotsava committee. The Sanghaniketan is celebrating 77th year of Ganeshotsava in the city.
08-05-25 12:23 pm
HK News Desk
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
08-05-25 04:57 pm
HK News Desk
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
08-05-25 04:52 pm
Mangalore Correspondent
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm