ಬ್ರೇಕಿಂಗ್ ನ್ಯೂಸ್
08-09-24 09:06 pm Mangalore Correspondent ಕರಾವಳಿ
Photo credits : CatholicTime
ಮಂಗಳೂರು, ಸೆ.8: ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಗಣೇಶೋತ್ಸವ ಜೊತೆ ಜೊತೆಗೆ ಕ್ರೈಸ್ತರ ಮೋಂತಿ ಹಬ್ಬವೂ ಬಂದಿದೆ. ಭಾನುವಾರ ಉಭಯ ಜಿಲ್ಲೆಗಳ ಕ್ಯಾಥೊಲಿಕ್ ಚರ್ಚ್ ಗಳಲ್ಲಿ ಮೋಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮದರ್ ಮೇರಿಯ ಜನ್ಮದಿನದ ಹೆಸರಲ್ಲಿ ಮೋಂತಿ ಹಬ್ಬ ಆಚರಿಸಲಾಗುತ್ತದೆ. ಇದರ ಜೊತೆಗೆ ಕ್ರೈಸ್ತರ ಕೃಷಿ ಹಿನ್ನೆಲೆ ಬಿಂಬಿಸುವ ವಿವಿಧ ಆಚರಣೆಗಳನ್ನೂ ಮಾಡಲಾಗುತ್ತದೆ. ಭತ್ತದ ತೆನೆಯನ್ನು ತಂದು ಪೂಜಿಸಿ ಚರ್ಚ್ ಪಾದ್ರಿಗಳೇ ಭಕ್ತರಿಗೆ ವಿತರಣೆ ಮಾಡುತ್ತಾರೆ.
ಇದಲ್ಲದೆ, ಭತ್ತ ಇನ್ನಿತರ ಬೆಳೆಗಳು ಕೊಯ್ಲಿಗೆ ಬರುವುದರಿಂದ ಕೃಷಿ ಹಿನ್ನೆಲೆಯ ಕ್ರೈಸ್ತರು ಮೋಂತಿ ಹಬ್ಬಕ್ಕೆ ತಮ್ಮ ಬೆಳೆಗಳನ್ನು ತಂದು ಚರ್ಚ್ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಜೀಸಸ್ ಮಗುವಾಗಿದ್ದಾಗಿನ ಚಿತ್ರಣ, ಮದರ್ ಮೇರಿಯ ಚಿತ್ರಣವನ್ನು ಹೊತ್ತ ಟೆಂಪೋವನ್ನು ಶೃಂಗರಿಸಿ ಮಹಿಳೆಯರು, ಪುರುಷರು ಮೆರವಣಿಗೆಯಲ್ಲಿ ಬರುತ್ತಾರೆ. ಕಲ್ಯಾಣಪುರದ ಚರ್ಚ್, ಮಂಗಳೂರಿನ ಸೆಬಾಸ್ಟಿಯನ್ ಚರ್ಚ್ ಸೇರಿ ಪ್ರಮುಖ ಚರ್ಚ್ ಆವರಣಗಳಲ್ಲಿ ಮೋಂತಿ ಹಬ್ಬದ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿತ್ತು. ಮಕ್ಕಳು ಹೂವನ್ನು ಹಿಡಿದು ಬಂದಿದ್ದರೆ, ದೊಡ್ಡವರು ತಾವು ಬೆಳೆಸಿದ ಫಲ ವಸ್ತುಗಳನ್ನು ತರುತ್ತಾರೆ. ಬಳಿಕ ಹೊಸ ಅಕ್ಕಿಯ ಊಟವನ್ನೂ ಏರ್ಪಡಿಸುತ್ತಾರೆ. ಅಪರೂಪಕ್ಕೆ ತಾವು ಬೆಳೆದ ತರಕಾರಿಯನ್ನೇ ಬಳಸಿ ಊಟಕ್ಕೆ ಪದಾರ್ಥಗಳನ್ನು ಮಾಡುತ್ತಾರೆ.
ಗಣೇಶೋತ್ಸವ ಸಂದರ್ಭದಲ್ಲಿ ಕೆಲವು ಹಿಂದುಗಳ ಮನೆಗಳಲ್ಲಿ ಹೊಸ ಅಕ್ಕಿ ಊಟ, ತೆನೆ ಕಟ್ಟುವ ಸಂಪ್ರದಾಯ ಇದೆ. ಈ ಬಾರಿ ಕ್ರೈಸ್ತರ ಮೋಂತಿ ಹಬ್ಬವೂ ಜೊತೆಗೆ ಬಂದಿದ್ದರಿಂದ ಕರಾವಳಿಯಲ್ಲಿ ಎಲ್ಲೆಡೆ ಹಬ್ಬದ ಸಡಗರ ಮನೆ ಮಾಡಿದೆ.
Nativity 2024, Monthi Fest celebrated with joy in all catholic churches in Mangalore. Churches across the coastal districts of Mangaluru and Udupi celebrated the feast of Our Lady of Nativity, known as Monthi Fest, with joy and devotion on Sunday, September 8.
08-05-25 12:23 pm
HK News Desk
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
08-05-25 04:57 pm
HK News Desk
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
08-05-25 04:52 pm
Mangalore Correspondent
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm