ಬ್ರೇಕಿಂಗ್ ನ್ಯೂಸ್
06-09-24 10:05 pm Mangalore Correspondent ಕರಾವಳಿ
ಮಂಗಳೂರು, ಸೆ.6: ಇಡೀ ದೇಶ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿರುವ ಹೊತ್ತಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅರ್ಥವಿಲ್ಲದ ನೀತಿ ನಿಯಮಗಳನ್ನು ಹೇರಿ ಹಿಂದೂಗಳಲ್ಲಿ ಇನ್ನಿಲ್ಲದ ಗೊಂದಲ ಸೃಷ್ಟಿಸುತ್ತಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.
ಗಣೇಶೋತ್ಸವಕ್ಕೆ ಅನುಮತಿ ಬೇಕಾದರೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರ-ಅತಿಥಿಗಳ ಹೆಸರು ಕೊಡಿ, ಅವರ ಮೊಬೈಲ್ ಸಂಖ್ಯೆ ಕೊಡಿ, ವಿಳಾಸ ಕೊಡಿ, ಟ್ಯಾಬ್ಲೋ ಎಷ್ಟು ಇರುತ್ತದೆ, ಎಲ್ಲಿಂದ ಬರುತ್ತದೆ, ಯಾವ ವಾಹನದಲ್ಲಿ ಬರುತ್ತದೆ, ಅದರ ದಾಖಲೆ ಕೊಡಿ, ಎಷ್ಟು ಜನ ಬರುತ್ತಾರೆ, ಎಂದೆಲ್ಲ ತೊಂದರೆ ಕೊಟ್ಟರೆ ಯಾವ ಹಬ್ಬ ತಾನೇ ಸಂಭ್ರಮದಿಂದ ಆಚರಿಸಲು ಸಾಧ್ಯ? ಇವೆಲ್ಲವೂ ಭಾರತದಲ್ಲೇ ಭಾರತದ ಸಂಸ್ಕೃತಿಯನ್ನು ಹೊಸಕಿ ಹಾಕುವ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಷಡ್ಯಂತ್ರವೆಂದು ಎಂತವರಿಗಾದರೂ ಅರ್ಥವಾಗುತ್ತದೆ. ಇಷ್ಟೆಲ್ಲಾ ಷರತ್ತುಗಳ ನಂತರವೂ ಗಣೇಶೋತ್ಸವದ ಒಂದು ಅನುಮತಿಗಾಗಿ ಆಯೋಜಕರನ್ನು ಹತ್ತಾರು ಬಾರಿ ಪೊಲೀಸ್ ಠಾಣೆ, ಪಾಲಿಕೆ, ಸ್ಥಳೀಯಾಡಳಿತ ಹೀಗೆ ಎಲ್ಲೆಡೆ ಅಲೆದಾಡಿಸುತ್ತಿರುವುದು ಯಾಕೆ? ಎಂದು ಶಾಸಕರು ಪ್ರಶ್ನಿಸಿದರು.
ಬಿಜೆಪಿ ಮೇಲಿನ ರಾಜಕೀಯ ಕೋಪಕ್ಕಾಗಿ ಗಣೇಶ ಹಬ್ಬಕ್ಕೆ ಅಡ್ಡಿಯುಂಟು ಮಾಡಲು ಹೊರಟಿದ್ದು ಕಾಂಗ್ರೆಸ್ಸಿನಲ್ಲಿರುವ ಹಿಂದುಗಳಿಗಾದರೂ ಸಹಿಸಲು ಸಾಧ್ಯವೇ? ಈ ಹಿಂದೆ ಮೊಘಲ್ ಆಡಳಿತದಲ್ಲಿ, ಬ್ರಿಟಿಷ್ ಆಡಳಿತದಲ್ಲಿ ಇದ್ದಂತಹ ಸರ್ಕಾರಕ್ಕೆ ಕಪ್ಪ ಕಾಣಿಕೆ ನೀಡುವ ಪದ್ಧತಿಯನ್ನು ಸಹ ಇಂದು ಸರ್ಕಾರ ಚಲನ್ ಕಟ್ಟಿಸಿಕೊಳ್ಳುವ ಮೂಲಕ ಆರಂಭಿಸಿರುವುದು ದುರಂತ. ಈ ಸರ್ಕಾರದ ಹಿಂದೂ ವಿರೋಧಿ ನೀತಿ ಇಷ್ಟಕ್ಕೆ ನಿಲ್ಲದೆ ಗಣೇಶ ಚತುರ್ಥಿಯ ಪ್ರಸಾದ ತಯಾರಿಸಿ ಹಂಚಲೂ ಸಹ FSSAI (ಆಹಾರ ಸುರಕ್ಷತಾ ಗುಣಮಟ್ಟ ಇಲಾಖೆ) ಅನುಮತಿ ಪಡೆಯಬೇಕೆಂಬ ನಿಯಮ ರೂಪಿಸುವ ವರೆಗೆ ಬಂದು ನಿಂತಿದೆ.
ಭಕ್ತರು ಅತ್ಯಂತ ಭಕ್ತಿ ಹಾಗೂ ನಂಬಿಕೆಯಿಂದ ಪ್ರಸಾದ ಸ್ವೀಕರಿಸುವಷ್ಟೇ ಶ್ರದ್ಧೆಯಿಂದ ಪ್ರಸಾದವನ್ನೂ ತಯಾರಿಸಲಾಗುತ್ತದೆ. ಸ್ವಾತಂತ್ರ್ಯ ಪೂರ್ವದಿಂದಲೂ ಅತ್ಯಂತ ಶ್ರದ್ಧಾ ಭಕ್ತಿಯಿಂದ ಗಣೇಶೋತ್ಸವ ಆಚರಿಸುತ್ತಿರುವ ಆಯೋಜಕರಿಗೆ ಭಕ್ತರ ಸುರಕ್ಷತೆಯ ಬಗ್ಗೆ ಈ ಸರ್ಕಾರಕ್ಕಿಂತ ಹೆಚ್ಚು ಕಾಳಜಿ ಇದೆ. ಇಂತಹ ದುರುದ್ದೇಶಪೂರಿತ ಆದೇಶದಿಂದ ಕಲಿಯುವ ಅಗತ್ಯ ಹಿಂದೂ ಸಮಾಜಕ್ಕಿಲ್ಲ. ಇಂತಹ ನಿಯಮಗಳು ಹಿಂದೂಗಳಿಗೆ ಮಾತ್ರ ಯಾಕೆ? ಆ ನಿಯಮಗಳು ಬಿರಿಯಾನಿಗೆ ಅನ್ವಯಿಸುವುದಿಲ್ಲ ಯಾಕೆ? ನಿಗದಿತ ಸುರಕ್ಷತಾ ನೀತಿ ಅನುಸರಿಸದೇ ರಾಜಸ್ಥಾನದಿಂದ ಮಾಂಸಗಳನ್ನು ತಂದು ಮಾರುವವರಿಗೆ FSSAI ಪರವಾನಿಗೆ ಅಗತ್ಯವಿಲ್ಲ ಯಾಕೆ? ಕೇವಲ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಮಾತ್ರ ಈ ಎಲ್ಲಾ ಕಟ್ಟುನಿಟ್ಟಿನ ನಿಯಮಗಳು ನೆನಪಾಗುವುದೇ?
ಒಂದೋ ಇಂತಹ ನಿಯಮಗಳನ್ನು ಕೂಡಲೇ ಹಿಂಪಡೆಯಿರಿ ಇಲ್ಲವೇ, ನೀವು ಹಿಂದೂ ವಿರೋಧಿಗಳು ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಳ್ಳಿರಿ. ಕೂಡಲೇ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಇಲ್ಲಿಗೆ ಕೈ ಬಿಟ್ಟು ಹಿಂದೂ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡುವುದನ್ನು ಕಲಿಯಲಿ. ಗಣೇಶ ಇಡೀ ಜಗತ್ತಿನ ವಿಘ್ನವನ್ನು ಕಳೆಯುವ ವಿಘ್ನ ವಿನಾಯಕ. ಅಂತಹ ಮಹಾನ್ ಶಕ್ತಿಗೆ ವಿಘ್ನ ತಂದೊಡ್ಡಿರುವ ಮೂರ್ಖತನ ಬೇಡ. ಇಷ್ಟರ ಮೇಲೆಯೂ ಕಾಂಗ್ರೆಸ್ ಸರ್ಕಾರ ತನ್ನ ಹಠವನ್ನೇ ಸಾಧಿಸುವುದಾದರೆ ಭಾರತೀಯ ಜನತಾ ಪಾರ್ಟಿ ಗಣೇಶೋತ್ಸವ ಆಯೋಜಕರ ಪರವಾಗಿ ನಿಲ್ಲುತ್ತದೆ. ಯಾವುದೇ ಕಾರಣಕ್ಕೂ ಸರ್ಕಾರದ ಬೆದರಿಕೆಗಳಿಗೆ ಜಗ್ಗುವುದು ಬೇಡ. ಹಬ್ಬವನ್ನು ಇನ್ನಷ್ಟು ಸಂಭ್ರಮದಿಂದ ಆಚರಿಸಿ. ಯಾವುದೇ ಅಡ್ಡಿ ಆತಂಕ ಬಂದರೂ ನಿಮ್ಮೊಂದಿಗೆ ನಾವಿದ್ದೇವೆ, ಇಡೀ ಹಿಂದೂ ಸಮಾಜವಿದೆ ಎಂಬ ಭರವಸೆಯನ್ನು ಈ ಮೂಲಕ ನೀಡುತ್ತಿದ್ದೇವೆ ಎಂದು ಶಾಸಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Harrasment to Ganeshotsav organisers won't be tolerated says MLA Vedavyas kamath in Mangalore
28-08-26 12:41 pm
HK News Staffer
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 02:11 pm
HK News Staffer
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
28-08-26 07:40 pm
HK News Staffer
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm