ಬ್ರೇಕಿಂಗ್ ನ್ಯೂಸ್
09-12-20 03:39 pm Mangalore Correspondent ಕರಾವಳಿ
ಉಳ್ಳಾಲ, ಡಿ, 9 : ತನ್ನ ಫರ್ನಿಚರ್ ವರ್ಕ್ ಶಾಪ್ ಗೆ ತಡೆಯಾಗುತ್ತಿದೆ ಎಂಬ ನೆಪ ಹೇಳಿ, ಹೆದ್ದಾರಿ ಅಂಚಿನಲ್ಲಿದ್ದ ಬೀದಿ ವ್ಯಾಪಾರಿಗಳ ಗೂಡಂಗಡಿಗಳನ್ನು ಮಾಜಿ ಕಾಂಗ್ರೆಸ್ ಸೇವಾದಳದ ನಾಯಕ ಅಶ್ರಫ್ ಪೊಲೀಸರಿಂದ ಕಿತ್ತು ತೆಗೆಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಕಾಂಗ್ರೆಸಿನ ಸೇವಾದಳದ ಜಿಲ್ಲಾ ನಾಯಕನಾಗಿದ್ದ ಅಶ್ರಪ್ ಅವರು ತೊಕ್ಕೊಟ್ಟು , ಅಂಬಿಕಾರೋಡ್ ಹೆದ್ದಾರಿ ಪಕ್ಕದಲ್ಲಿ ತನ್ನ ಫರ್ನಿಚರ್ ವರ್ಕ್ ಶಾಪ್ ಹೊಂದಿದ್ದಾರೆ. ಸ್ಥಳೀಯರ ಪ್ರಕಾರ ಈ ಫರ್ನಿಚರ್ ವರ್ಕ್ ಶಾಪ್ ಅಕ್ರಮ ಎಂದು ಹೇಳಲಾಗುತ್ತಿದೆ. ಅಶ್ರಫ್ ಮೇಲೆ ಅತ್ಯಾಚಾರದ ಆರೋಪ ಕೇಸ್ ಆದ ಮೇಲೆ ಅವರು ಕಾಂಗ್ರೆಸ್ ಪಕ್ಷದಿಂದ ಮೂಲೆಗುಂಪಾಗಿದ್ದರು. ಇವತ್ತು ಅಶ್ರಫ್, ತನ್ನ ಫರ್ನಿಚರ್ ವರ್ಕ್ ಶಾಪ್ ಮುಂದೆ ವ್ಯಾಪಾರ ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನ ಏಕಾಏಕಿ ಪೊಲೀಸ್ ಬಲ ಪ್ರಯೋಗಿಸಿ ಎತ್ತಂಗಡಿ ಮಾಡಿಸಲು ಪ್ರಯತ್ನಿಸಿದ್ದಾರೆ.
ಅಲ್ಲದೆ ಉಳ್ಳಾಲ ನಗರಸಭೆ ಪೌರಾಯುಕ್ತರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಸ್ಥಳಕ್ಕೆ ಬಂದ ನಗರ ಪೌರಾಯುಕ್ತ ರಾಯಪ್ಪನವರೂ ಧನಿಕನ ಮಾತು ಕೇಳಿ ತನಗೆ ಸಂಬಂಧಿಸದ ಹೆದ್ದಾರಿ ಬದಿಯ ಬೀದಿ ವ್ಯಾಪಾರಿಗಳ ಗೂಡುಗಳನ್ನು ತೆರವುಗೊಳಸಿ ಅಮಾನವೀಯತೆ ಮೆರೆದಿದ್ದಾರೆ. ಹೆದ್ದಾರಿ ಅಂಚಿನ ವರೆಗೂ ಇರುವ ಜಾಗ ತನ್ನದೇ ಎಂದು ಬೀದಿ ಬದಿ ವ್ಯಾಪಾರಿಗಳಲ್ಲಿ ಅಶ್ರಫ್ ಹೇಳಿಕೊಂಡಿದ್ದಾರಂತೆ.
ಸ್ಥಳದಲ್ಲಿ ಸ್ಥಳೀಯ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಸೇರಿ ಒಟ್ಟಾಗಿ ಪೊಲೀಸ್ ದೌರ್ಜನ್ಯವನ್ನು ವಿರೋಧಿಸಿದ್ದಾರೆ. ಬಡವರು ಹೆದ್ದಾರಿಯಲ್ಲಿ ಎಲ್ಲೆಡೆಯಲ್ಲೂ ಹೊಟ್ಟೆ ಹೊರೆಯಲು ಸಣ್ಣ ವ್ಯಾಪಾರ ನಡೆಸೋದು ಸಾಮಾನ್ಯ. ಆದರೆ ಓರ್ವ ಪ್ರಭಾವಿಯ ಮಾತು ಕೇಳಿ ಈ ರೀತಿ ಬಡವರ ಮೇಲೆ ಏಕಾಏಕಿ ಆಕ್ರಮಣ ಸರಿಯಲ್ಲವೆಂದು ಪೊಲೀಸರನ್ನು ತರಾಟೆಗೆ ತೆಗೆದಿದ್ದಾರೆ.
ಕಾಂಗ್ರೆಸ್ನ ದೀಪಕ್ ಪಿಲಾರ್, ಖಾದರ್ ಉಳ್ಳಾಲ್, ಬಿಜೆಪಿಯ ಚರಣ್ ಪೂಜಾರಿ, ನಾಗೇಶ್ ಕುಂಪಲ ಮೊದಲಾದವರು ಸ್ಥಳದಲ್ಲಿದ್ದು ಬಡ ಬೀದಿ ವ್ಯಾಪಾರಿಗಳ ಪರ ನಿಂತಿದ್ದಾರೆ.
Congress Member Ashraff from Thokottu mercilessly demolishes petty shops through police personal for the sake of his business activities.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm