ಬ್ರೇಕಿಂಗ್ ನ್ಯೂಸ್
22-08-24 04:48 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್. 22: ಇದೊಂದು ಸರ್ಕಾರ ಮತ್ತು ಪೊಲೀಸರ ಪ್ರಾಯೋಜಿತ ದಂಗೆ. ಎರಡೂ ವ್ಯವಸ್ಥೆ ಒಟ್ಟು ಸೇರಿ ಕಲ್ಲು ಹೊಡೆಯೋದು, ಬೆಂಕಿ ಹಚ್ಚೋದು ಮಾಡಿದ್ದಾರೆ. ಐವಾನ್ ಡಿಸೋಜ ಒಬ್ಬ ಮೆಂಟಲ್ ಗಿರಾಕಿ, ಬಾಯಿಗೆ ಬಂದ ಹಾಗೆ ಮಾತನಾಡಿದ್ದಾನೆ. ಆದರೆ ಪೊಲೀಸರು ಯಾರದ್ದೇ ಚೇಲಾಗಳಾಗಿ ವರ್ತಿಸಬಾರದು. ಬಾಂಗ್ಲಾ ರೀತಿ ರಾಜಭವನಕ್ಕೆ ನುಗ್ಗುತ್ತೇವೆ ಎಂದವನ ಮೇಲೆ ಕೇಸು ಹಾಕುವ ಎದೆಗಾರಿಕೆ ತೋರಿಸಬೇಕು ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಅಬ್ಬರಿಸಿದ್ದಾರೆ.
ಬಾಂಗ್ಲಾ ಪರ ಹೇಳಿಕೆ ನೀಡಿದ ಐವಾನ್ ಡಿಸೋಜ ವಿರುದ್ಧ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭರತ್ ಶೆಟ್ಟಿ ಮಾತನಾಡಿದರು. ಐವಾನ್ ಡಿಸೋಜ ತನ್ನ ಮನೆಯ ಮೇಲೆ ಕಲ್ಲು ತೂರಾಟವನ್ನ ಇವನ ಹುಡುಗರಿಂದಲೇ ಮಾಡಿಸಿರಬಹುದು. ಇದರಲ್ಲೂ ಹೀರೋ ಆಗಲು ನೋಡುತ್ತಿದ್ದಾನೆ. ಹೆಲ್ಮೆಟ್ ಹಾಕಿದ ಇಬ್ಬರು ಕಲ್ಲು ತೂರಾಟ ನಡೆಸಿದ್ದಾರಂತೆ. ಆ ಹೆಲ್ಮೆಟ್ ಹಾಕಿದ ಇಬ್ಬರು ನಾನು ಹಾಗೂ ವೇದವ್ಯಾಸ್ ಕಾಮತ್ ಎಂದು ಕೇಸ್ ಹಾಕಿದರೂ ಹಾಕಬಹುದು. ಈಗಾಗಲೇ ಸಾಕಷ್ಟು ಕೇಸ್ ಗಳನ್ನು ಹಾಕಿದ್ದಾರೆ, ಇನ್ನು ರೌಡಿಶೀಟ್ ತೆರೆಯಬಹುದೇನೋ ಗೊತ್ತಿಲ್ಲ. ಐವಾನ್ ರಾಜ್ಯಪಾಲರ ಮನೆಗೆ ನುಗ್ಗಿ ಹೊಡಿಯುತ್ತೇವೆ, ಓಡಿಸುತ್ತೇವೆ ಎಂದು ಹೇಳಿದ್ರು. ಅವರ ಮೇಲೆ ಕೇಸ್ ಹಾಕಲು ಪೊಲೀಸರು ಹಿಂದೆ ಮುಂದೆ ನೋಡುತ್ತಾರೆ. ಸರಕಾರ ಇದೆ ಎಂಬ ಕಾರಣಕ್ಕೆ ಪೋಲೀಸರು ಅವರ ಪರವಾಗಿ ನಿಲ್ಲಬೇಡಿ. ನಿಮ್ಮ ಆತ್ಮಸಾಕ್ಷಿಯಾಗಿ ಸರಿಯಾಗಿ ಕೆಲಸ ಮಾಡಿ. ನಮಗೂ ಕಲ್ಲು ಹೊಡೆಯೋದಕ್ಕೆ 5 ನಿಮಿಷ ಸಾಕು. ಟಯರ್ ಹಚ್ಚೋದಕ್ಕೆ 5 ನಿಮಿಷ ಸಾಕು. ಕಲ್ಲು ಹೊಡೆಯಲು ನಮ್ಮ ಯುವಮೋರ್ಚಾ ಕಾರ್ಯಕರ್ತರು ರೆಡಿ ಇದ್ದಾರೆ. ಆ ರೀತಿಯ ಅರಾಜಕತೆಯ ಪರಿಸ್ಥಿತಿ ತರುವ ಅವಶ್ಯಕತೆ ನಮಗಿಲ್ಲ ಎಂದರು.




ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಒಬ್ಬ ದಲಿತ ರಾಜ್ಯಪಾಲರನ್ನು ಬಾಂಗ್ಲಾ ಮಾದರಿಯಲ್ಲಿ ಓಡಿಸ್ತೀವಿ ಅಂತ ಬೆದರಿಕೆ ಹಾಕ್ತಿದಾರೆ. ಕಾಂಗ್ರೆಸ್ ನ ಒಬ್ಬ ಸಚಿವ ರಾಜ್ಯಪಾಲರ ಬಗ್ಗೆ ಏಕವಚನದಲ್ಲಿ ಮಾತನಾಡ್ತಾನೆ. ಇದನ್ನು ನಾವು ರಾಷ್ಟ್ರಭಕ್ತರು ನೋಡಿಕೊಂಡು ಸುಮ್ಮನಿರಬೇಕಾ ಎಂದು ಪ್ರಶ್ನಿಸಿದರು. ಐವನ್ ಡಿಸೋಜಾ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಧಮ್ಮಿಲ್ಲ, ಹಾಗಾಗಿ ಎಫ್ ಐಆರ್ ದಾಖಲಾಗಿಲ್ಲ. ಇಲ್ಲಿನ ಪೊಲೀಸರ ನಡೆಯ ಬಗ್ಗೆ ನಮಗೆ ಬಹಳ ನಾಚಿಕೆ ಆಗುತ್ತಿದೆ. ಬಸ್ಸಿಗೆ ಕಲ್ಲು ಹೊಡೆದ ನಾಮನಿರ್ದೇಶಿತ ಕಾರ್ಪೋರೆಟರನ್ನ ಇವರು ಬಂಧಿಸಿಲ್ಲ. ಪಾಲಿಕೆಗೆ ಬಂದರೆ ಇಂಥವರನ್ನು ಮೇಯರ್ ಅವರು ಒದ್ದು ಹೊರಗೆ ಹಾಕಬೇಕು ಎಂದರು.
ಮುಸಲ್ಮಾನರ ಬಸ್ಸಿಗೆ ಕಲ್ಲು ಹೊಡೆಸಿ ಬಿಜೆಪಿ ಕಾರ್ಯಕರ್ತರ ಮೇಲೆ ಹಾಕುವ ಷಡ್ಯಂತ್ರ ಮಾಡಿದ್ದಾರೆ. ಆಮೂಲಕ ಕೋಮು ಗಲಭೆ ನಡೆಸುವ ಷಡ್ಯಂತ್ರ ಮಾಡಿದ್ದರು. ಐವಾನ್ ಡಿಸೋಜ ತನ್ನ ವಕೀಲನ ಬುದ್ದಿ ಉಪಯೋಗಿಸಿ ಮನೆಗೆ ಕಲ್ಲು ಹೊಡೆಸಿದ್ದಾನೆ. ಯಾವುದೋ ಕಾಂಗ್ರೆಸ್ ಪುಂಡ ಪೋಕರಿಗಳಿಂದ ಮನೆಗೆ ಕಲ್ಲು ಹೊಡೆಸಿದ್ದು ಇದನ್ನ ಬಿಜೆಪಿ ಕಾರ್ಯಕರ್ತರು ಹೊಡೆದಿದ್ದು ಅಂತ ಹೇಳ್ತಾನೆ. ನಾವು ಕಲ್ಲು ಹೊಡೆಯೋದಾದ್ರೆ ಮೊನ್ನೆಯೇ ಹೊಡೀತಾ ಇದ್ದೆವು. ಹೊಡೆಯೋದಾದ್ರೆ ನಿಮ್ಮ ಮನೆಗೆ ಅಲ್ಲ, ನಿಮ್ಮ ತಲೆಗೆ ಹೊಡೀತಾ ಇದ್ವಿ.. ನಮ್ಮಲ್ಲಿ ಕಲ್ಲು ಹೊಡೆಯೋ ಸಾಮರ್ಥ್ಯ ಇದ್ದರೂ ಈ ನೆಲದ ಕಾನೂನಿಗೆ ಗೌರವ ಕೊಡ್ತೇವೆ. ಅವನೇ ತನ್ನ ಮನೆಗೆ ಕಲ್ಲು ಹೊಡೆದು ನಾಟಕ ಮಾಡ್ತಿದಾನೆ. ಐವನ್ ಡಿಸೋಜಾ ಬಂಧಿಸದೇ ಇದ್ರೆ ಉಗ್ರ ಹೋರಾಟ ಮಾಡ್ತೇವೆ ಎಂದು ಹೇಳಿದರು. ಪ್ರತಾಪಸಿಂಹ ನಾಯಕ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಜೀವ ಮಠಂದೂರು, ಮಾಜಿ ಸಚಿವ ಎಸ್. ಅಂಗಾರ ಮತ್ತಿತರರಿದ್ದರು.
Mangalore Mla Bharath Shetty slams Ivan Dsouza, says he's mental. We just require five minutes to pelt stone. We will take care of the police department when our government comes he added.
06-11-25 03:06 pm
Bangalore Correspondent
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 02:08 pm
Mangalore Correspondent
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm