ಬ್ರೇಕಿಂಗ್ ನ್ಯೂಸ್
20-08-24 11:19 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 20: ಮೊಬೈಲ್ ಬಳಕೆಯ ಬಗ್ಗೆ ಹೆತ್ತವರು ಗದರಿಸಿದ್ದಕ್ಕೆ ಇಬ್ಬರು ಅಪ್ರಾಪ್ತ ಮಕ್ಕಳು ಸಾವಿಗೆ ಶರಣಾದ ಪ್ರತ್ಯೇಕ ಘಟನೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಪಿಯುಸಿ ವಿದ್ಯಾರ್ಥಿ ಪ್ರಥಮೇಶ್ ಬ್ಯಾಗ್ ಸಹಿತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ಕರಾಯದಲ್ಲಿ ನೀಲಮ್ ಎಂಬ ಜಾರ್ಖಂಡ್ ಮೂಲದ ಬಾಲಕಿ ನೇಣು ಬಿಗಿದು ಸಾವನ್ನಪ್ಪಿದ್ದಾಳೆ.
ಹಿರಿಯಡ್ಕ ಸರಕಾರಿ ಪದವಿಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಹಾಗು ಅಂಜಾರು ಪೊಲೀಸ್ ಕ್ವಾರ್ಟರ್ಸ್ ಬಳಿಯ ನಿವಾಸಿ ಪ್ರಥಮೇಶ್ (17) ಅತಿಯಾಗಿ ಮೊಬೈಲ್ ಬಳಸುತ್ತಿದ್ದ ಚಾಳಿ ಕಡಿಮೆ ಮಾಡಲು ಮನೆಯವರು ಮೊಬೈಲ್ ತೆಗೆದಿಟ್ಟಿದ್ದರು. ಕಾಲೇಜಿಗೆಂದು ತೆರಳಿದ್ದ ವಿದ್ಯಾರ್ಥಿ, ಅತ್ತ ಕಾಲೇಜಿಗೂ ಹೋಗದೆ, ಮನೆಗೂ ಬಾರದೆ ನಾಪತ್ತೆಯಾಗಿದ್ದ. ಸೋಮವಾರ ಎಷ್ಟು ಹುಡುಕಿದರೂ ಹುಡುಗ ಸಿಕ್ಕಿರಲಿಲ್ಲ. ಮಂಗಳವಾರ ಬೆಳಗ್ಗೆ ಹಿರಿಯಡ್ಕ ಪ್ರಥಮ ದರ್ಜೆ ಕಾಲೇಜಿನ ಸಮೀಪ ಜನವಸತಿ ರಹಿತ ಬಾವಿಯಲ್ಲಿ ಶಾಲಾ ಬ್ಯಾಗ್ ತೇಲುತ್ತಿರುವ ಮಾಹಿತಿ ಲಭಿಸಿತ್ತು. ಪೊಲೀಸರು ಹುಡುಕಾಡಿ ಬಾವಿಯಿಂದ ವಿದ್ಯಾರ್ಥಿಯ ಮೃತದೇಹ ಹೊರ ತೆಗೆದಿದ್ದಾರೆ.
ಮೊಬೈಲ್ ಗೀಳು, ತಾಯಿಗೆ ಗೋಳು
ಮೊಬೈಲ್‌ನಲ್ಲಿ ವಿಡಿಯೋ ಕರೆ ಮಾಡಿ ಮಾತನಾಡುವುದನ್ನು ಆಕ್ಷೇಪಿಸಿದ ತಾಯಿ ಬಗ್ಗೆ ಮುನಿಸಿಕೊಂಡ 14 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಸಮೀಪದ ಕರಾಯ ಗ್ರಾಮದಲ್ಲಿ ನಡೆದಿದೆ. ಕೃಷಿ ಕೂಲಿ ಕಾರ್ಮಿಕರಾಗಿ ಆಗಮಿಸಿದ್ದ ಜಾರ್ಖಂಡ್ ಮೂಲದ ಕುಟುಂಬದ ಬಾಲಕಿ ನೀಲಮ್ ಮೃತಳು. ಜಾರ್ಖಂಡ್‌ನ ಲಾತೆಹಾರ್ ಜಿಲ್ಲೆ ನಿವಾಸಿ ಸರ್ಜು ಬುಯ್ಯಾನ್ ಎಂಬವರು ಪತ್ನಿ, ಮಗಳೊಂದಿಗೆ ವಾರದ ಹಿಂದೆ ಕರಾಯದ ಜಗದೀಶ್ ಸರಳಾಯ ಎಂಬವರ ತೋಟದ ಕೆಲಸಕ್ಕೆ ಆಗಮಿಸಿದ್ದರು. ಭಾನುವಾರ ಸಂಜೆ ಮಗಳು ಮೊಬೈಲ್ ವಿಚಾರದಲ್ಲಿ ಸಿಟ್ಟಿಗೆದ್ದು ಮನೆ ಪಕ್ಕದ ಮರಕ್ಕೆ ನೇಣು ಬಿಗಿದು ಸಾವಿಗೆ ಶರಣಾಗಿದ್ದಾಳೆ.
Mangalore Udupi Mobile addict, two suicide cases registered over parents shouting over mobile use.
03-04-26 04:14 pm
HK News Staffer
ಬಾಗಲಕೋಟ, ದಾವಣಗೆರೆ ಉಪ ಚುನಾವಣೆ; ಗೆಲುವು ಕಷ್ಟ- ಗು...
03-04-26 03:48 pm
ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ ಕುಮಾರಸ್ವಾಮಿ- ಎಡಿಜ...
02-04-26 09:31 pm
ನಾನು ಮುಖ್ಯಮಂತ್ರಿಯಾಗಿ ಮುಸ್ಲಿಂ ಅಲ್ಪಸಂಖ್ಯಾತ ಮೀಸಲ...
02-04-26 08:07 pm
ತಮಿಳುನಾಡು ಚುನಾವಣೆಗೆ 44 ಮೀಸಲು ಕ್ಷೇತ್ರದಿಂದ ಕ್ರಿ...
02-04-26 08:03 pm
03-04-26 07:52 pm
HK News Staffer
50 ವರ್ಷಗಳ ಬಳಿಕ ಮಾನವ ಸಹಿತ ಚಂದ್ರಯಾನ; ಅಮೆರಿಕ, ಕೆ...
03-04-26 07:35 am
ಚಿಂತಿಸಬೇಡಿ, ನಿಮ್ಮ ಹಡಗು ಸುರಕ್ಷಿತ; ಹಾರ್ಮುಜ್ ಜಲಸ...
02-04-26 10:24 pm
ಇರಾನ್ ಕದನವಿರಾಮ ಕೇಳುತ್ತಿದೆ, ಒಪ್ಪದಿದ್ದರೆ ಶಿಲಾಯು...
01-04-26 11:03 pm
ಇರಾನ್ ಮೇಲೆ ಅಣ್ವಸ್ತ್ರ ದಾಳಿಗೆ ಅಮೆರಿಕ ಸಿದ್ಧತೆ; ವ...
01-04-26 12:46 pm
03-04-26 11:43 am
HK News Staffer
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
04-04-26 11:32 am
HK News Staffer
ಮೂರನೇ ಮಗುವೂ ಹೆಣ್ಣಾಗುತ್ತದೆಂದು ಗರ್ಭಿಣಿ ಪತ್ನಿ, ಇ...
03-04-26 11:00 pm
ಜಿಮ್ ಸೆಂಟರ್ ನೆಪದಲ್ಲಿ ಲವ್ ಜಿಹಾದ್! ಜಿಮ್ ಟ್ರೈ...
03-04-26 10:53 pm
ಮೆಲ್ಕಾರ್ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ;...
01-04-26 02:54 pm
ಕುಂಜತ್ ಬೈಲಿನಲ್ಲಿ ಫಲ್ಗುಣಿ ನದಿಗೆ ಬಿದ್ದು ಇಬ್ಬರು...
01-04-26 02:16 pm