ಬ್ರೇಕಿಂಗ್ ನ್ಯೂಸ್
20-08-24 06:43 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್.20: ಪಡುಬಿದ್ರೆ- ಕಾರ್ಕಳ ರಾಜ್ಯ ಹೆದ್ದಾರಿ ನಡುವಿನ ಕಂಚಿನಡ್ಕ ಎಂಬಲ್ಲಿ ಟೋಲ್ ನಿರ್ಮಾಣ ಮಾಡಲು ಮುಂದಾಗಿರುವ ಉಡುಪಿ ಜಿಲ್ಲಾಡಳಿತದ ಕ್ರಮವನ್ನು ಕೆನರಾ ಬಸ್ ಮಾಲಕರ ಅಸೋಸಿಯೇಷನ್ ಖಂಡಿಸಿದೆ. ಇದರ ವಿರುದ್ಧ ಯಾವುದೇ ರೀತಿಯ ಪ್ರತಿಭಟನೆಗೆ ಸಂಘಟನೆಯ ಬೆಂಬಲವಿದ್ದು ಆಗಸ್ಟ್ 24ರಂದು ನಡೆಯುವ ಪ್ರತಿಭಟನೆಗೆ ಕೈಜೋಡಿಸಲಿದೆ ಎಂದು ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಜ್ಯೋತಿಪ್ರಸಾದ್ ಹೆಗ್ಡೆ ಹೇಳಿದರು.
ಕೇಂದ್ರ ಸರಕಾರದ ನಿಯಮಗಳ ಅನ್ವಯ ಹೆದ್ದಾರಿಯಲ್ಲಿ 60 ಕಿಮೀ ಒಳಗಡೆ ಟೋಲ್ ಗೇಟ್ ನಿರ್ಮಾಣ ಮಾಡಲು ಅವಕಾಶವಿಲ್ಲ. ಆದರೆ ಹೆಜಮಾಡಿ ಟೋಲ್ ಗೇಟ್ ಇಲ್ಲಿಂದ 6 ಕಿಮೀ ದೂರದಲ್ಲಿದ್ದು ಇದರಿಂದ ಸಾರ್ವಜನಿಕರಿಗೆ ಭಾರೀ ಹೊರೆ ಬೀಳಲಿದೆ. 2018ರಲ್ಲಿ ಬೆಳ್ಮಣ್ ಬಳಿ ಇದೇ ರೀತಿ ಟೋಲ್ ನಿರ್ಮಾಣಕ್ಕೆ ಮುಂದಾದಾಗ ನಾವು ಉಗ್ರ ಪ್ರತಿಭಟನೆ ನಡೆಸಿದ್ದೆವು. ಆಗ ಇಲ್ಲಿ ರದ್ದಾಗಿದ್ದ ಟೋಲ್ ಅನ್ನು ಮತ್ತೆ ಕಂಚಿನಡ್ಕ ಬಳಿ ತೆರೆಯಲು ಮುಂದಾಗಿದೆ. ಇದು ರಾಜ್ಯ ಹೆದ್ದಾರಿ ಆಗಿರುವ ಕಾರಣ ಜನರನ್ನು ಯಾಮಾರಿಸಲು ಸರಕಾರ ಮುಂದಾಗಿದೆ ಎಂದವರು ಆರೋಪಿಸಿದರು.
ದುರ್ಗಾಪ್ರಸಾದ್ ಹೆಗ್ಡೆ ಮಾತನಾಡಿ, ಮುಂದೆ ಬರಲಿರುವ ಟೋಲ್ ನಲ್ಲಿ ದ್ವಿಚಕ್ರ ವಾಹನಗಳಿಗೆ 30 ರೂ. ಮತ್ತು ಕಾರ್ ಗಳಿಗೆ 50 ರೂ., ಬಸ್ ಗಳಿಗೆ 100 ರೂ. ಸುಂಕ ವಸೂಲಿ ಮಾಡಲು ಮುಂದಾಗಿದೆ. ಇದರ ವಿರುದ್ಧ ಆಗಸ್ಟ್ 24ರಂದು ಪ್ರತಿಭಟನೆ ನಡೆಯಲಿದ್ದು ಇದಕ್ಕೆ ಬಸ್ ಮಾಲಕರ ಸಂಘ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ಸುದೇಶ್, ಜಯರಾಮ ಶೆಟ್ಟಿ, ಜೀವಂಧರ್ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.
Mangalore Canara bus association slams government over setting of another toll plaza after Hejamady.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm