ಬ್ರೇಕಿಂಗ್ ನ್ಯೂಸ್
14-08-24 08:42 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 14: ಮಂಗಳೂರು ಮೂಲದ ವರುಣ್ ಡಿ'ಕೋಸ್ಟ ಅಂತರಾಷ್ಟ್ರೀಯ ಮಟ್ಟದ ಮಾಡೆಲಿಂಗ್ ವೇದಿಕೆಯಲ್ಲಿ ಛಾಪು ತೋರಿದ್ದು, ಥೈಲ್ಯಾಂಡಿನಲ್ಲಿ ನಡೆದ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿ ಗೆದ್ದಿದ್ದಾರೆ.
ಮಂಗಳೂರಿನ ಬಜ್ಪೆ ನಿವಾಸಿ, ಎಂಟನೇ ಕ್ಲಾಸ್ ಹುಡುಗ ವರುಣ್ ಡಿ'ಕೋಸ್ಟಾ ಥೈಲ್ಯಾಂಡಿನಲ್ಲಿ ನಡೆದ ಪ್ರಖ್ಯಾತ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದು, ಮಂಗಳೂರಿಗೆ ಗರಿಮೆ ತಂದಿದ್ದಾನೆ. ಈ ಸ್ಪರ್ಧೆ ಪ್ರತಿ ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ಫ್ಯಾಷನ್, ಮಾಡೆಲಿಂಗ್ ಹಾಗೂ ಪ್ರತಿಭಾ ಪ್ರದರ್ಶನಗಳ ಮೂಲಕ ನಡೆಯುತ್ತದೆ.




ಈ ಸಲದ ಸ್ಪರ್ಧೆಯಲ್ಲಿ ಅಮೇರಿಕಾ, ಲೆಬನಾನ್, ಅರ್ಮೇನಿಯಾ, ಯುಎಇ, ಓಮಾನ್, ಥೈಲ್ಯಾಂಡ್, ಮಲೇಶಿಯಾ, ಶ್ರೀಲಂಕಾ, ಇಂಡೋನೇಷ್ಯಾ, ವಿಯೆಟ್ನಾಂ, ನೇಪಾಳ ಸೇರಿದಂತೆ ಹಲವಾರು ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು. ವರುಣ್ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಇತರ ಸ್ಪರ್ಧಿಗಳನ್ನು ಹಿಂದಿಕ್ಕಿ, ಭಾರತವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಲು ಆಯ್ಕೆಯಾಗಿದ್ದ. ವರುಣ್ ಪ್ರಸ್ತುತ ಮಂಗಳೂರು ಬಜ್ಪೆ ಸೇಂಟ್ ಜೋಸೆಫ್ ಹೈಸ್ಕೂಲ್‌ನ 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ತಾಯಿ ಲಿಡಿವಿನ್ ಡಿ'ಕೋಸ್ಟಾ ಮತ್ತು ತಂದೆ ವಿನ್ಸೆಂಟ್ ಡಿ'ಕೋಸ್ಟಾ ಅವರ ನಿರಂತರ ಬೆಂಬಲದಿಂದ ವರುಣ್ ಈ ಸ್ಥಾನಕ್ಕೇರಿದ್ದಾನೆ.
ವಿಜೇ ಡಿಕ್ಸನ್, ಯಶಸ್ವಿನಿ ದೇವಾಡಿಗ, ಸುಧೀರ್ ಉಲ್ಲಾಲ್, ಪ್ರಮೋದ್ ಅಲ್ವಾ, ಕೌಶಿಕ್ ಸುವರ್ಣ, ಸುಮಿತ್, ಕಿಂಗ್ಸ್ ಡ್ಯಾನ್ಸ್ ಅಕಾಡೆಮಿಯ ಸುರೇಶ್ ಮುಕುಂದ್, ನೃತ್ಯ ಶಕ್ತಿಯ ಶಕ್ತಿ ಮೋಹನ್, ಬಿಗ್ ಡ್ಯಾನ್ಸ್ ಸೆಂಟರ್, ಸ್ಪಾಟ್ ಲೈಟ್ ಅಕಾಡೆಮಿ, ಟೆರೆನ್ಸ್ ಲೆವಿಸ್ ಡ್ಯಾನ್ಸ್ ಅಕಾಡೆಮಿ, ಸ್ವೇತಾ ಅರೇಹೋಳೆ, ಪ್ರಮೋದ್ ಆಳ್ವ, ಟ್ವಿಸ್ಟರ್ ಡ್ಯಾನ್ಸ್ ಅಕಾಡೆಮಿಯ ನಿತಿನ್, ಓಷನ್ ಕಿಡ್ಸ್ ನ ಚರಣ್, ಎನ್.ಪಿ ಸ್ಟುಡಿಯೋದ ನಿಕ್ಕಿ ಪಿಂಟೋ, ಆರ್ಯನ್ ಸ್ಟುಡಿಯೋ ನ ನವೀನ್ ಆರ್ಯನ್, ಮುಂಬೈನ ಜೋರ್ಡನ್ ಮತ್ತು ಲವಾನ್ಸ್ ಅವರ ಮಾರ್ಗದರ್ಶನದಲ್ಲಿ ವರುಣ್ ತರಬೇತಿ ಪಡೆದಿದ್ದ. ಡಿಸೈನಿಂಗ್ ಉಡುಪುಗಳನ್ನು ಹೇರಾ ಪಿಂಟೋ ವಿನ್ಯಾಸಗೊಳಿಸಿದರು. ಕಳೆದ ವರ್ಷ ಮಿಸ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿ ಗೆದ್ದ ಯಶಸ್ವಿನಿ ದೇವಾಡಿಗ ಕೂಡ ಮಂಗಳೂರು ಮೂಲದವರು ಎನ್ನೋದು ವಿಶೇಷ.
In a dazzling display of talent and determination, Varun D'Costa, a young star from Mangalore, has proudly brought home the prestigious Mr. Teen Super Globe title. The competition, held in Thailand, is a global event that celebrates fashion, modeling, and talent, with participants from around the world showcasing their skills in talent rounds, grooming sessions, and ramp walks over three exciting days.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm