ಬ್ರೇಕಿಂಗ್ ನ್ಯೂಸ್
06-08-24 01:13 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 6: ನಗರ ಹೊರವಲಯದ ವಾಮಂಜೂರು ಬಳಿಯ ಕೆತ್ತಿಕಲ್ ಗುಡ್ಡ ಕುಸಿಯುವ ಭೀತಿ ಎದುರಾಗಿದ್ದು, ಅಪಾಯ ಎದುರಿಸುತ್ತಿರುವ 12 ಮನೆಗಳ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಮೊನ್ನೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದ ಸಂದರ್ಭದಲ್ಲಿ ಅಪಾಯ ಎದುರಿಸುತ್ತಿರುವ ಮನೆಗಳ ಸ್ಥಳಾಂತರಕ್ಕೆ ಸೂಚನೆ ನೀಡಿದ್ದರು.
ಕೆತ್ತಿಕಲ್ ಗುಡ್ಡದ ಮೇಲ್ಭಾಗದಲ್ಲಿ ಕುಸಿಯುತ್ತಿರುವ ಪ್ರದೇಶದ ಸನಿಹದ ಮನೆಗಳ ನಿವಾಸಿಗಳನ್ನು ಮಾತ್ರ ಸ್ಥಳಾಂತರ ಮಾಡಲಾಗಿದೆ. ಉಳಿದಂತೆ, ಅಲ್ಲಿರುವ ರಸ್ತೆಯ ಪಕ್ಕದಲ್ಲಿ ಇನ್ನೂ ಹತ್ತಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಆತಂಕ ಎದುರಿಸುತ್ತಿದ್ದಾರೆ. ಸದ್ಯಕ್ಕೆ 12 ಮನೆಗಳ ಅಂದಾಜು 60ಕ್ಕೂ ಹೆಚ್ಚು ನಿವಾಸಿಗಳು ಸ್ಥಳಾಂತರಗೊಂಡಿದ್ದು, ಕಳೆದ ಐದಾರು ದಿನಗಳಿಂದ ಸಂಬಂಧಿಕರ ಮನೆಗಳಲ್ಲಿ ಮತ್ತು ಇನ್ನು ಕೆಲವರು ಬಾಡಿಗೆ ಮನೆ ಮಾಡಿಕೊಂಡು ಇದ್ದಾರೆ.
ಸ್ಥಳಾಂತರಗೊಂಡ ಮನೆಯ ನಿವಾಸಿ ಮೋಹನ್ ಎಂಬವರು ಕಳೆದ ನವೆಂಬರ್ ತಿಂಗಳಲ್ಲಿ 32 ಲಕ್ಷಕ್ಕೆ ಮನೆಯನ್ನು ಖರೀದಿಸಿ ಇಲ್ಲಿ ನೆಲೆಸಿದ್ದರಂತೆ. ಆನಂತರ, ಮನೆಯನ್ನು ಬಾಡಿಗೆ ಕೊಟ್ಟಿದ್ದ ಅವರು ಮೇ ತಿಂಗಳಲ್ಲಿ ಬಂದು ಅದೇ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ, ಅಷ್ಟರಲ್ಲೇ ಕೆಳಗಿನ ಭಾಗದಲ್ಲಿ ಮಣ್ಣು ತೆರವು ಮಾಡಲಾಗಿತ್ತು. ನಾವು ಜನವರಿಯಲ್ಲಿ ಬಂದಿದ್ದಾಗ ಇಷ್ಟರ ಮಟ್ಟಿಗೆ ಮಣ್ಣು ತೆರವು ಆಗಿರಲಿಲ್ಲ. ಆನಂತರ, ಹೆದ್ದಾರಿ ಕಾಮಗಾರಿ ಮತ್ತು ಗುರುಪುರ ಸೇತುವೆಯ ಆಸುಪಾಸಿನಲ್ಲಿ ಸ್ಥಳೀಯರು ತಮ್ಮ ಗದ್ದೆ ಜಮೀನನ್ನು ತುಂಬಿಸಲು ಮಣ್ಣನ್ನು ಹೊತ್ತೊಯ್ದಿದ್ದರು. ಸ್ಥಳೀಯ ಅಧಿಕಾರಿಗಳೇ ಮಣ್ಣು ತೆರವು ಮಾಡುವುದಕ್ಕೆ ಒಪ್ಪಿಗೆ ನೀಡಿದ್ದು ಈಗ ನಮಗೆ ಆಪತ್ತು ತಂದಿದೆ. ಈಗ ಮಳೆಗಾಲ ಮುಗಿಯೋ ವರೆಗೂ ಇಲ್ಲಿ ನೆಲೆಸಬಾರದು ಎನ್ನುತ್ತಿದ್ದಾರೆ. ಬೇರೆಯವರ ಮನೆಗಳಲ್ಲಿ ಎಷ್ಟು ದಿನ ಉಳಿಯಬಹುದು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೀಗಾಗಿದೆ, ಜಿಲ್ಲಾಡಳಿತ ನಮಗೆ ಬಾಡಿಗೆ ಮನೆ ಮಾಡಿಕೊಡಬೇಕು ಎಂದು ಮೋಹನ್ ಅಲವತ್ತುಕೊಂಡಿದ್ದಾರೆ.
ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಅವರಲ್ಲಿ ಕೇಳಿದಾಗ, ಸ್ಥಳಾಂತರ ಆಗಿರುವ ನಿವಾಸಿಗಳು ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡಿದ್ದಾರೆ ಎಂದಿದ್ದಾರೆ. ಮಣ್ಣು ತೆರವು ಮಾಡುವಾಗ ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದಾಗ, ಅಧಿಕಾರಿಗಳ ಮಟ್ಟದಲ್ಲಿ ಆಗಿರೋದು, ನಮಗೇನೂ ಗೊತ್ತಿಲ್ಲ ಎಂದಿದ್ದಾರೆ. ಸ್ಥಳೀಯರು, ಆರು ತಿಂಗಳ ಹಿಂದೆಯೇ ಬೇಕಾಬಿಟ್ಟಿ.ಗಿ ಗುಡ್ಡದ ಮಣ್ಣು ತೆರವು ಮಾಡುವುದಕ್ಕೆ ವಿರೋಧಿಸಿದ್ದರು. ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆಗೂ ದೂರು ನೀಡಲಾಗಿತ್ತು. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದಲೇ ಗುಡ್ಡ ಅಗೆದು ಮಣ್ಣು ಒಯ್ಯಲಾಗಿದೆ. ಸಂತ್ರಸ್ತರು ಈಗ ತಮಗೆ ಬೇರೆ ಕಡೆ ಬಾಡಿಗೆ ಮನೆ ಕೊಡಿ ಎಂದು ಕೇಳುತ್ತಿದ್ದಾರೆ. ಅಧಿಕಾರಿಗಳು ಮಾತ್ರ ಸರಕಾರದಲ್ಲಿ ಅದಕ್ಕೆಲ್ಲ ಅವಕಾಶ ಇಲ್ಲ, ಬೇಕಾದ್ರೆ ಗಂಜಿಕೇಂದ್ರ ಮಾಡಿಸುತ್ತೇವೆಂದು ದರ್ಪ ಮಾತನಾಡಿದ್ದಾರೆ ಎಂದು ನಿವಾಸಿಗಳು ನೋವು ಹೇಳಿಕೊಂಡಿದ್ದಾರೆ.
ಮೇಲ್ಭಾಗದಲ್ಲಿ 15ಕ್ಕೂ ಹೆಚ್ಚು ಮನೆಗಳು ಅಪಾಯ ಎದುರಿಸುತ್ತಿದ್ದರೆ, ಹೆದ್ದಾರಿಯ ಕೆಳಗಿನ ಭಾಗದಲ್ಲಿಯೂ ಏಳೆಂಟು ಮನೆಗಳಿದ್ದು ಆತಂಕದಲ್ಲಿವೆ. ವಾಮಂಜೂರು, ಪಚ್ಚನಾಡಿ, ಪಿಲಿಕುಳ, ಮೂಡುಶೆಡ್ಡೆಯ ವರೆಗೂ ಸಮತಟ್ಟಾದ ವಿಶಾಲ ಪದವು ಪ್ರದೇಶ ಆಗಿರುವುದರಿಂದ ಕೆಳಭಾಗದ ಕೆತ್ತಿಕಲ್ ಗುಡ್ಡವನ್ನು ಕಡಿದು ಹಾಕಿದ್ದರಿಂದ ಮಳೆಯ ಸಂದರ್ಭದಲ್ಲಿ ಒರತೆ ನೀರು ಬರುತ್ತಿದೆ. ಇದರಿಂದಾಗಿ ಕೆತ್ತಿಕಲ್ ಭಾಗದ ಹೆದ್ದಾರಿಯಲ್ಲಿ ಸ್ವಚ್ಛ ನೀರು ಹರಿದು ರಸ್ತೆಗೆ ಬೀಳುವುದನ್ನು ಕಾಣಬಹುದು. ಇದಲ್ಲದೆ, ಬೇಸಗೆಯಲ್ಲಿ ಗುಡ್ಡದ ಮಧ್ಯೆ ಇದ್ದ ಬಂಡೆ ಕಲ್ಲನ್ನೂ ಸ್ಫೋಟಿಸಿ ಒಡೆದು ಹಾಕಿದ್ದರು. ಆ ಸಂದರ್ಭದಲ್ಲಿ ಮೇಲ್ಭಾಗದ ಮನೆಗಳಲ್ಲಿ ನಡುಗಿದ ಅನುಭವ ಆಗಿತ್ತು ಎನ್ನುತ್ತಾರೆ, ಸ್ಥಳೀಯರು. ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ಕಡಿದು ಹಾಕಿದ್ದರಿಂದಲೇ ಅಮಾಯಕ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
Residents of 12 houses in the city have been evacuated as the Kettikal hill ock near Vamanjoor on the outskirts of the city is facing the threat of collapse. District in-charge minister Dinesh Gundu Rao, who visited the spot yesterday, had instructed to shift the houses facing danger.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 06:22 pm
Giridhar Shetty, Mangaluru
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm