ಬ್ರೇಕಿಂಗ್ ನ್ಯೂಸ್
02-08-24 09:11 pm Mangalore Correspondent ಕರಾವಳಿ
ಉಳ್ಳಾಲ, ಆ.2: ನೂರು ವರುಷ ಇತಿಹಾಸವುಳ್ಳ ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿ ಕ್ರಾಸಿಂಗ್ ಮಾಡಲು ಪಾದಚಾರಿ ಮೇಲ್ಸೇತುವೆ ಅಥವಾ ಅಂಡರ್ ಪಾಸ್ ಅಗತ್ಯ ಇದ್ದು ಈ ಬಗ್ಗೆ ಎಲ್ಲರೂ ಒಟ್ಟಾಗಿ ಸಂಸದರ ಗಮನಕ್ಕೆ ತಂದು ಸಮಸ್ಯೆಯನ್ನ ಬಗೆಹರಿಸಬೇಕಿದೆ ಎಂದು ಉಳ್ಳಾಲ ನಗರಸಭಾ ಸದಸ್ಯ ದಿನಕರ ಉಳ್ಳಾಲ್ ಹೇಳಿದರು.
ತೊಕ್ಕೊಟ್ಟು ಒಳಪೇಟೆಯ ರೈಲ್ವೇ ಹಳಿಗಳನ್ನು ದಾಟಲು ಮೇಲ್ಸೇತುವೆ ನಿರ್ಮಾಣ ಮಾಡಲು ಆಗ್ರಹಿಸಿ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೀಡಲಾಗುತ್ತಿರುವ ಬ್ಯಾಂಕ್ ಲೋನ್ ಕೊಡಲು ವಿಳಂಬ ಮಾಡುತ್ತಿರುವ ಕೇಂದ್ರ ಸರಕಾರದ ಧೋರಣೆ ವಿರುದ್ಧ ಶುಕ್ರವಾರ ಸಂಜೆ ತೊಕ್ಕೊಟ್ಟಿನ ಫ್ಲೈ ಓವರ್ ಕೆಳಗಡೆ ಉಳ್ಳಾಲ ವಿದ್ಯಾರ್ಥಿ ಯೂನಿಯನ್ ವತಿಯಿಂದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ತೊಕ್ಕೊಟ್ಟು ಒಳಪೇಟೆಯ ರೈಲು ಹಳಿ ಕ್ರಾಸಿಂಗ್ ಸಮಸ್ಯೆಯ ಬಗ್ಗೆ ನಲ್ವತ್ತು ವರುಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ರೈಲ್ವೇ ಹಳಿಗಳನ್ನ ಸಾರ್ವಜನಿಕರು ದಾಟುವುದು ಕಾನೂನು ಬಾಹಿರ. ಹಿಂದೆ ಇಲ್ಲಿ ಒಂದು ಹಳಿ ಇತ್ತು. ಈಗ ಎರಡು ರೈಲ್ವೇ ಹಳಿಗಳಲ್ಲಿ ರೈಲುಗಳು ಓಡುತ್ತಿದ್ದು ಇಲ್ಲಿ ಪಾದಚಾರಿಗಳು ದಾಟುವುದು ಬಹಳ ಅಪಾಯಕಾರಿ. ಇಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕಾಗಿ ನಾವೊಮ್ಮೆ ಕೇಂದ್ರ ರೈಲ್ವೇ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಅವರಲ್ಲಿ ಮಾತುಕತೆ ನಡೆಸಿದ್ದೆವು. ಆದರೆ ಉಳ್ಳಾಲ ಪುರಸಭೆಯ ಅಸಡ್ಡೆಯಿಂದ ಅದು ಸಫಲಗೊಂಡಿರಲಿಲ್ಲ. ಈಗ ವಿ.ಸೋಮಣ್ಣ ಅವರು ರೈಲ್ವೇ ಸಚಿವರಾಗಿದ್ದಾರೆ. ಎಲ್ಲರೂ ಒಂದಾಗಿ ತೊಕ್ಕೊಟ್ಟಿನ ರೈಲ್ವೇ ಕ್ರಾಸಿಂಗ್ ಸಮಸ್ಯೆಯ ಬಗ್ಗೆ ದಕ್ಷಿಣ ಕನ್ನಡ ಸಂಸದರಾದ ಬ್ರಿಜೇಶ್ ಚೌಟರ ಗಮನಕ್ಕೆ ತಂದು ಆದಷ್ಟು ಬೇಗನೆ ಪಾದಚಾರಿ ಸೇತುವೆ ಅಥವಾ ಅಂಡರ್ ಪಾಸ್ ನಿರ್ಮಾಣಕ್ಕೆ ಪ್ರಯತ್ನಿಸಬೇಕೆಂದರು.
ತೊಕ್ಕೊಟ್ಟು ಒಳಪೇಟೆಯ ಶಾಲಾ ಕಾಲೇಜುಗಳು, ಮಸೀದಿ, ಮಂದಿರ, ಚರ್ಚ್ ಗಳಿಗೆ ತೆರಳಲು ಒಳಪೇಟೆಯ ರೈಲ್ವೇ ಹಳಿಯೇ ಕೊಂಡಿಯಾಗಿದೆ. ರೈಲ್ವೇ ಅಧಿಕಾರಿಗಳು ಸಾರ್ವಜನಿಕರು ಹಳಿ ದಾಟದಂತೆ ಕಬ್ಬಿಣದ ಬೇಲಿ ಹಾಕಿ ನಿರ್ಬಂಧ ಹೇರಿದ್ದಾರೆ. ಆದರೂ ಅನಿವಾರ್ಯ ಎಂಬಂತೆ ವಯಸ್ಕರು, ಅಂಗವಿಕಲರು ಕಬ್ಬಿಣದ ತಡೆಬೇಲಿಯನ್ನ ದಾಟಲು ಹೋಗಿ ಹಳಿಗಳ ಜಲ್ಲಿ ಕಲ್ಲುಗಳ ಮೇಲೆ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಆದಷ್ಟು ಬೇಗನೆ ಈ ಪ್ರದೇಶದಲ್ಲಿ ಪಾದಚಾರಿಗಳು ಹಳಿ ದಾಟಲು ಮೇಲ್ಸೇತುವೆ ನಿರ್ಮಿಸಬೇಕು. ಇಲ್ಲವಾದರೆ ವಿದ್ಯಾರ್ಥಿಗಳು ಸೇರಿ ಮುಂದೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುತ್ತೇವೆಂದು ವಿದ್ಯಾರ್ಥಿ ನಾಯಕಿ ರೀಷಲ್ ಡಿಸೋಜ ಎಚ್ಚರಿಕೆ ನೀಡಿದರು.
ಉಳ್ಳಾಲ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಸಫ್ವಾನ್ ಕೆರೆಬೈಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾದ ಫಾ.ಸಿಪ್ರಿಯನ್ ಪಿಂಟೋ, ಮಂಗಳೂರು ಕೆಥೋಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿಸೋಜ, ಉಳ್ಳಾಲ ನಗರಸಭಾ ಸದಸ್ಯರಾದ ಬಾಝಿಲ್ ಡಿಸೋಜ, ವೀಣಾ ಶಾಂತಿ ಡಿಸೋಜ, ಪ್ರಮುಖರಾದ ಆಸೀಫ್ ಅಂಬಟಡಿ, ಶಾಹಿಲ್ ಮಂಚಿಲ, ದೀಪಕ್ ಪಿಲಾರ್, ಸಾಜಿದ್ ಉಳ್ಳಾಲ್, ನಾಸೀರ್ ಸಾಮಾನಿಗೆ ಮೊದಲಾದವರು ಉಪಸ್ಥಿತರಿದ್ದರು.
A protest was held in Thokottu on Friday, August 2, demanding the construction of a pedestrian overpass or underpass at the Olapete railway crossing, which has a history of over a hundred years. Ullal municipal council member, Dinkar Ullal, emphasized the need for a united effort to bring this issue to the attention of the MPs and resolve it.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 06:22 pm
Giridhar Shetty, Mangaluru
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm