ಬ್ರೇಕಿಂಗ್ ನ್ಯೂಸ್
27-07-24 02:09 pm Mangalore Correspondent ಕರಾವಳಿ
ಮಂಗಳೂರು, ಜುಲೈ.27: ಸಕಲೇಶಪುರ ಬಳಿಯ ಎಡಕುಮೇರಿ- ಕಡಗರವಳ್ಳಿ ಮಧ್ಯೆ ರೈಲು ಹಳಿಗೆ ಭೂಕುಸಿತ ಆಗಿರುವುದರಿಂದ ಮಂಗಳೂರು – ಬೆಂಗಳೂರು ನಡುವಿನ ರೈಲು ಸಂಚಾರ ಅಸ್ತವ್ಯಸ್ತವಾಗಿದೆ. ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದಂತೆಯೇ ಈ ಹಾದಿಯಲ್ಲಿ ಸಾಗುವ ಜುಲೈ 29ರ ವರೆಗಿನ ಎಂಟು ರೈಲುಗಳನ್ನು ರದ್ದುಪಡಿಸಲಾಗಿದೆ. ಈ ಬಗ್ಗೆ ದಕ್ಷಿಣ ರೈಲ್ವೇಯ ಪಿಆರ್ ಓ ದೇವದಾನಂ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.
ಜುಲೈ 27ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ವಿಜಯಪುರಕ್ಕೆ ತೆರಳಬೇಕಿದ್ದ ಸ್ಪೆಷಲ್ ಎಕ್ಸ್ ಪ್ರೆಸ್ ರೈಲನ್ನು (ಸಂಖ್ಯೆ 07378) ರದ್ದುಪಡಿಸಲಾಗಿದೆ. ಜುಲೈ 28ರಂದು ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಬೆಂಗಳೂರು ಯಶವಂತಪುರಕ್ಕೆ ತೆರಳಬೇಕಿದ್ದ ಪ್ಯಾಸೆಂಜರ್ ರೈಲು (ಸಂಖ್ಯೆ 16540) ರದ್ದಾಗಿದೆ. ರೈಲು ಸಂಖ್ಯೆ 07377 ವಿಜಯಪುರದಿಂದ ಮಂಗಳೂರು ಸೆಂಟ್ರಲ್ ನಿಲ್ದಾಣ ಮಧ್ಯೆ ಜುಲೈ 27ರಂದು ಓಡಾಟ ನಡೆಸಬೇಕಿದ್ದ ರೈಲನ್ನೂ ರದ್ದುಪಡಿಸಲಾಗಿದೆ.
ಜುಲೈ 28ರಂದು ಬೆಂಗಳೂರಿನಿಂದ ಕಾರವಾರಕ್ಕೆ ತೆರಳುವ ಸ್ಪೆಷಲ್ ಎಕ್ಸ್ ಪ್ರೆಸ್ (ಸಂಖ್ಯೆ 06567) ರೈಲನ್ನೂ ರದ್ದು ಮಾಡಲಾಗಿದೆ. ಜುಲೈ 27ರಂದು ಕಾರವಾರದಿಂದ ಬೆಂಗಳೂರು ತೆರಳಬೇಕಿದ್ದ 06568 ನಂಬರಿನ ರೈಲನ್ನೂ ರದ್ದುಪಡಿಸಲಾಗಿದೆ. ಜುಲೈ 27ರಂದು ಎಸ್ಎಂವಿಟಿ ಬೆಂಗಳೂರು- ಮುರುಡೇಶ್ವರ ಮಧ್ಯೆ ಓಡಾಟ ನಡೆಸಬೇಕಿದ್ದ ಎಕ್ಸ್ ಪ್ರೆಸ್ (ಸಂಖ್ಯೆ 16585) ರೈಲನ್ನು ರದ್ದು ಮಾಡಲಾಗಿದೆ. ಜುಲೈ 28ರಂದು ಮುರುಡೇಶ್ವರದಿಂದ ಬೆಂಗಳೂರು ತೆರಳಬೇಕಿದ್ದ 16586 ನಂಬರಿನ ರೈಲನ್ನೂ ರದ್ದು ಮಾಡಲಾಗಿದೆ. ಜುಲೈ 28ರಂದು ಯಶವಂತಪುರ- ಮಂಗಳೂರು ಜಂಕ್ಷನ್ ಮಧ್ಯೆ ಸಂಚರಿಸುವ (ಸಂಖ್ಯೆ 16575) ರೈಲನ್ನೂ ರದ್ದುಪಡಿಸಲಾಗಿದೆ. ಜುಲೈ 29ರಂದು ಸಂಚರಿಸುವ ಮಂಗಳೂರು ಜಂಕ್ಷನ್ – ಯಶವಂತಪುರ ಜಂಕ್ಷನ್ ನಡುವಿನ ರೈಲನ್ನೂ ರದ್ದು ಮಾಡಲಾಗಿದೆ.
Train services between Karwar-Mangaluru and Bengaluru were affected after a landslip between Yadakumari and Kadagaravalli (Western Ghats section) of South Western Railway at 6.56 p.m. on Friday. A release from South Western Railway said that train No. 06568 Karwar – SMVT Bengaluru Special Express was cancelled and seven other trains had been diverted as a result.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm