ಬ್ರೇಕಿಂಗ್ ನ್ಯೂಸ್
26-07-24 02:11 pm Mangalore Correspondent ಕರಾವಳಿ
ಮಂಗಳೂರು, ಜು.26: ಮಾಜಿ ಸಚಿವ, ಧಾರವಾಡ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ತುಳುನಾಡಿನ ಕಾರಣಿಕ ಶಕ್ತಿ ಕೊರಗಜ್ಜನ ಮೊರೆ ಹೋಗಿದ್ದಾರೆ. ಜುಲೈ 27ರ ಶನಿವಾರ ಸಂಜೆ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಜಂಕ್ಷನ್ನ ಕೊರಗಜ್ಜನ ಕಟ್ಟೆಯಲ್ಲಿ ಕೋಲ ಸೇವೆ ನಡೆಸಲಿದ್ದಾರೆ.
ತೊಕ್ಕೊಟ್ಟು ಹಳೇ ಚೆಕ್ ಪೋಸ್ಟ್ ಬಳಿಯ ಗ್ರ್ಯಾಂಡ್ ಸಿಟಿ ವಾಣಿಜ್ಯ ಸಂಕೀರ್ಣದ ಮುಂಭಾಗದ ಸಾರ್ವಜನಿಕ ಕೊರಗಜ್ಜನ ಕಟ್ಟೆಯಲ್ಲಿ ಕೋಲ ಸೇವೆ ನಡೆಯಲಿದ್ದು ಮಳೆಯಿಂದಾಗಿ ಪೆಂಡಾಲ್ ಹಾಕಿ ಸಕಲ ಸಿದ್ಧತೆ ನಡೆಸಲಾಗಿದೆ.
ಬಿಜೆಪಿ ಜಿ.ಪಂ ಸದಸ್ಯ ಯೋಗೇಶ ಗೌಡ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯವು ವಿನಯ್ ಕುಲಕರ್ಣಿ ಅವರನ್ನ ಧಾರವಾಡ ಕ್ಷೇತ್ರ ಪ್ರವೇಶಿಸದಂತೆ ನಿರ್ಬಂಧ ಹೇರಿತ್ತು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ ತನ್ನ ಕ್ಷೇತ್ರಕ್ಕೆ ಭೇಟಿ ನೀಡದೆಯೇ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆದ್ದು ಬೀಗಿದ್ದರು. ಧಾರವಾಡ ಗ್ರಾಮಾಂತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ತನ್ನ ಕ್ಷೇತ್ರಕ್ಕೆ ಪ್ರವೇಶಿಸದೆ ಚುನಾವಣೆ ಗೆದ್ದ ರಾಜ್ಯದ ಮೊದಲ ಅಭ್ಯರ್ಥಿ ಎಂಬ ಹೆಗ್ಗಳಿಕೆ ಗಳಿಸಿದ್ದರು. ವಿನಯ್ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಮತ್ತು ಮಕ್ಕಳೇ ಪ್ರಚಾರದ ನೇತೃತ್ವ ವಹಿಸಿದ್ದರು. 89,333 ಮತಗಳನ್ನು ಪಡೆದಿದ್ದ ವಿನಯ್, ಬಿಜೆಪಿಯ ಹಾಲಿ ಶಾಸಕರಾಗಿದ್ದ ಅಮೃತ್ ದೇಸಾಯಿ ಅವರನ್ನು 18,037 ಮತಗಳ ಅಂತರದಿಂದ ಸೋಲಿಸಿದ್ದರು.
ಶಾಸಕ ವಿನಯ್ ಕುಲಕರ್ಣಿ ಅವರ ವಿರುದ್ಧದ ಕೊಲೆ ಆರೋಪದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು ಶಾಸಕನಾದರೂ ಕ್ಷೇತ್ರ ಪ್ರವೇಶಕ್ಕೆ ನಿರ್ಬಂಧ ಮುಂದುವರಿದಿದೆ. ಮುಂದಿನ ತಿಂಗಳು ಇದೇ ವಿಚಾರದಲ್ಲಿ ಕೋರ್ಟ್ ವಿಚಾರಣೆ ಇದೆ ಎನ್ನಲಾಗುತ್ತಿದೆ. ಇದರ ನಡುವೆ, ವಿನಯ ಕುಲಕರ್ಣಿ ಅವರು ತುಳುನಾಡಿನ ಕಾರಣಿಕ ಶಕ್ತಿ ಕೊರಗಜ್ಜನ ಮೊರೆ ಹೋಗಿದ್ದು ಕೋಲ ಸೇವೆ ನಡೆಸುವುದಕ್ಕೆ ಮುಂದಾಗಿದ್ದಾರೆ. ನಾಳೆ ಸಂಜೆ 6.30 ಗಂಟೆಗೆ ತೊಕ್ಕೊಟ್ಟಿನಲ್ಲಿ ಕೋಲ ಸೇವೆ ಆರಂಭಗೊಳ್ಳಲಿದೆ. ಕೋಲ ಸೇವೆಯಲ್ಲಿ ಖುದ್ದು ವಿನಯ್ ಕುಲಕರ್ಣಿ ಮತ್ತು ಕುಟುಂಬಸ್ಥರು ಭಾಗವಹಿಸಲಿದ್ದಾರೆಂದು ತಿಳಿದುಬಂದಿದೆ.
Mangalore, MLA Vinaya Kulkarni visits Koragajja temple at Thokottu, organises Kola on July 27 at old check post near grand city building.
22-07-25 03:02 pm
HK News Desk
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
22-07-25 03:04 pm
HK News Desk
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
22-07-25 01:27 pm
Mangalore Correspondent
Mangalore Landslide, Permanki: ಕೆತ್ತಿಕಲ್ ರೀತಿ...
22-07-25 11:19 am
High Drama in Dharmasthala, Fake Godman Remar...
21-07-25 06:42 pm
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
22-07-25 12:38 pm
HK News Desk
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm