ಬ್ರೇಕಿಂಗ್ ನ್ಯೂಸ್
25-07-24 10:25 pm Mangalore Correspondent ಕರಾವಳಿ
ಉಳ್ಳಾಲ, ಜು.25: ಬೀದಿಬದಿ ವ್ಯಾಪಾರವು ಕೇವಲ ಜಪ್ಪಿನಮೊಗರಿನಿಂದ ತಲಪಾಡಿ ತನಕ ಮಾತ್ರ ಇರುವುದಲ್ಲ. ಭಾರತ ಮಾತ್ರವಲ್ಲ, ಇಡೀ ವಿಶ್ವದಲ್ಲೇ ಬೀದಿ ಬದಿ ವ್ಯಾಪಾರ ವ್ಯಾಪಿಸಿದ್ದು, ಅದನ್ನೇ ನಂಬಿಕೊಂಡವರ ಬದುಕಿನ ಅಂಗವಾಗಿದೆ. ಬಡ ವ್ಯಾಪಾರಿಗಳನ್ನ ಪದೇ ಪದೇ ಪೀಡಿಸುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ನೀವು ಹೆದ್ದಾರಿ ರಸ್ತೆಯ ದಯನೀಯ ಸ್ಥಿತಿಯನ್ನ ಒಮ್ಮೆ ಅವಲೋಕಿಸಿ ಎಂದು ದಕ್ಷಿಣ ಕನ್ನಡ ಬೀದಿ ಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷರಾದ ಬಿ.ಕೆ.ಇಮ್ತಿಯಾಝ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ, ತಲಪಾಡಿ ಬೀದಿಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಗುರುವಾರ ತಲಪಾಡಿಯ ಹಳೆ ಚರ್ಚ್ ಹಾಲ್ ನಲ್ಲಿ ಹೆದ್ದಾರಿ ಬದಿಯ ಅಂಗಡಿಗಳನ್ನ ತೆರವುಗೊಳಿಸಿ ಕಿರುಕುಳ ನೀಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಧೋರಣೆ ವಿರುದ್ಧ ನಡೆದ ಸಮಾಲೋಚನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಬೀದಿ ಬದಿ ವ್ಯಾಪಾರ ನಡೆಸಲು ವ್ಯಾಪಾರಿಗಳು ಅರ್ಜಿ ಹಾಕಿದವರಲ್ಲ. ತಮ್ಮ ಬದುಕು, ಕುಟುಂಬ ನಿರ್ವಹಣೆಗಾಗಿ ಅದೊಂದು ಅನಿವಾರ್ಯ ಆಯ್ಕೆಯಾಗಿದೆ. ಬೀದಿ ಬದಿ ವ್ಯಾಪಾರಿಗಳ ಹಿತಾಸಕ್ತಿಗಾಗಿಯೇ ದೇಶದಲ್ಲಿ ಕಾನೂನು ಇದ್ದು, ರಾಜ್ಯದಲ್ಲೂ ಜಾರಿಯಿದೆ. ಕೇವಲ ನಗರ ಪ್ರದೇಶಗಳಲ್ಲಿ ಮಾತ್ರ ಈ ಕಾನೂನು ಜಾರಿ ಚಾಲ್ತಿಯಲ್ಲಿದ್ದು, ಗ್ರಾ.ಪಂ.ಗಳಲ್ಲೂ ಅನುಷ್ಟಾನಗೊಳ್ಳಬೇಕು. ಕಾನೂನಿನ ಅಧಿನಿಯಮಗಳು ಎಲ್ಲಾ ಬೀದಿ ವ್ಯಾಪಾರಿಗಳಿಗೂ ಅನ್ವಯವಾಗಿದ್ದು ಇದನ್ನ ಹೆದ್ದಾರಿ ಪ್ರಾಧಿಕಾರ ಅರ್ಥ ಮಾಡಿಕೊಳ್ಳಬೇಕು. ಸ್ಥಳಿಯಾಡಳಿತಗಳು ಗುರುತಿನ ಚೀಟಿ ನೀಡಬೇಕಾದರೆ ವ್ಯಾಪಾರಿಯ ಸಮೀಕ್ಷೆ ನಡೆಸುವುದಲ್ಲದೆ, ವ್ಯಾಪಾರಿ ಸಂಘದ ವಲಯವನ್ನು ಮಾಡಿಕೊಡಬೇಕೆಂಬ ನಿಯಮ ಇದೆ. ಅದರಂತೆ ನಿಯಂತ್ರಣ ಕಾಯ್ದೆಯೂ ವ್ಯಾಪಾರಿಗಳಿಗೆ ಅನ್ವಯಿಸುತ್ತದೆ. ಬೀದಿ ವ್ಯಾಪಾರಿಗಳಿಗೆ ಸಾಲವನ್ನೂ ಸರಕಾರವೇ ನೀಡಿದ್ದು, ಮಳೆ, ಬಿಸಿಲೆನ್ನದೆ ವ್ಯಾಪಾರ ಮಾಡಿ ಸಾಲ ಕಟ್ಟಬೇಕು. ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಬಡ ವ್ಯಾಪಾರಿಗಳನ್ನ ಒಮ್ಮೆಲೇ ಓಡಿಸೋದು ಎಷ್ಟು ಸರಿ. ಬೀದಿ ವ್ಯಾಪಾರಿಗಳ ವಿವಿಧ ಬೇಡಿಕೆಗಳನ್ನ ಮುಂದಿಟ್ಟು ಆ.1 ರಂದು ತಲಪಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಸೋದಾಗಿ ಅವರು ಹೇಳಿದರು.
ದೇಶದಲ್ಲಿ ಟೋಲ್ ನೀತಿ ಇರುವುದೇ ಸುಲಿಗೆಗಾಗಿ !
ತೀರಾ ಕಳಪೆ ರಸ್ತೆ ನಿರ್ಮಿಸಿ ಜನರಿಂದ ಟೋಲನ್ನು ಸುಳಿಗೆ ಮಾಡಲಾಗುತ್ತಿದೆ. ದೇಶದ ಟೋಲ್ ನೀತಿಯೆಂಬುದೇ ಸುಲಿಗೆಗಾಗಿ ಇದ್ದಂತಿದೆ. ಅವೈಜ್ಞಾನಿಕ ಹೆದ್ದಾರಿಯಲ್ಲಿ ನಡೆದ ಅಪಘಾತಗಳಲ್ಲಿ ಎಷ್ಟೋ ಜನರು ಪ್ರಾಣ ಕಳಕೊಂಡಿದ್ದು,ಇನ್ನೆಷ್ಟೋ ಜನರು ಅಂಗವೈಕಲ್ಯಕ್ಕೀಡಾಗಿದ್ದಾರೆ. ಪೊಲೀಸರು ಅಪಘಾತಕ್ಕೆ ಕಾರಣವಾದ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಒಂದು ಕೇಸ್ ಹಾಕಿದ್ದಾರೆಯೇ..? ಬಡ ಬೀದಿ ವ್ಯಾಪಾರಿಗಳನ್ನ ಒಕ್ಕಲೆಬ್ಬಿಸಲು ಮಾತ್ರ ಪೊಲೀಸರು ಓಡೋಡಿ ಬರುತ್ತಾರೆ. ಕೇರಳದಲ್ಲಿ ವಾಹನ ಸವಾರರು ಮತ್ತು ಯಾತ್ರಿಗಳಿಗೆ ರಾತ್ರಿಯಿಡಿ ಕುಡಿಯಲು ನೀರು, ತಿನ್ನಲು ಆಹಾರ ಕೊಡೋದು ಬೀದಿ ವ್ಯಾಪಾರಿಗಳು. ಇಲ್ಲಿ ಸಂಜೆ ಎಂಟು ಗಂಟೆಗೇ ನಗರ ಪ್ರದೇಶಗಳು ಬಂದ್ ಆಗುವ ಅಲಿಖಿತ ಕಾನೂನು ಜಾರಿಯಲ್ಲಿದೆ. ಇಲ್ಲಿಯೂ ವ್ಯಾಪಾರಿಗಳು 24 ಗಂಟೆ ವ್ಯಾಪಾರ ನಡೆಸಲು ಅವಕಾಶ ಸಿಗಬೇಕೆಂದು ಇಮ್ತಿಯಾಝ್ ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ,ಮಾಜಿ ತಾ.ಪಂ. ಸದಸ್ಯೆ ಸುರೇಖಾ ಚಂದ್ರಹಾಸ್, ಸಾಮಾಜಿಕ ಕಾರ್ಯಕರ್ತ ಯಶು ಪಕ್ಕಳ ಮೊದಲಾದವರು ಉಪಸ್ಥಿತರಿದ್ದರು.
Mangalore Small street vendors assosiation slam high officials over bad roads at talapady.
22-07-25 03:02 pm
HK News Desk
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
22-07-25 03:04 pm
HK News Desk
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
22-07-25 01:27 pm
Mangalore Correspondent
Mangalore Landslide, Permanki: ಕೆತ್ತಿಕಲ್ ರೀತಿ...
22-07-25 11:19 am
High Drama in Dharmasthala, Fake Godman Remar...
21-07-25 06:42 pm
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
22-07-25 12:38 pm
HK News Desk
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm