ಬ್ರೇಕಿಂಗ್ ನ್ಯೂಸ್
19-07-24 06:36 pm Giridhar Shetty, Mangalore Correspondent ಕರಾವಳಿ
ಮಂಗಳೂರು, ಜುಲೈ 19: ಫಲ್ಗುಣಿ ನದಿ ತುಂಬಿದರೆ ಪ್ರತಿ ಬಾರಿ ಈ ಗ್ರಾಮಕ್ಕೆ ಮಾತ್ರ ಮುಳುಗಡೆಯ ಬರೆ ಬೀಳುತ್ತದೆ. ಹೌದು.. ಮಂಗಳೂರು ಹೊರವಲಯದ ಮರವೂರು ಬಳಿಯ ಅದ್ಯಪಾಡಿ ಗ್ರಾಮದ ಮುಗೇರಕುದ್ರು ಕಳೆದ ಹನ್ನೊಂದು ವರ್ಷಗಳಿಂದಲೂ ಪ್ರತಿವರ್ಷ ಮುಳುಗುತ್ತಲೇ ಇದೆ. 2019ರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಶಶಿಕಾಂತ್ ಸೆಂಥಿಲ್ ಈ ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆ ಪರಿಹಾರದ ಭರವಸೆ ನೀಡಿದ್ದರು. ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಅದ್ಯಪಾಡಿಗೆ ಬಂದು ದೋಣಿಯಲ್ಲಿ ಸಂತ್ರಸ್ತರ ಮನೆಗಳಿಗೆ ತೆರಳಿದ್ದು ನಿವಾಸಿಗಳ ಕಷ್ಟವನ್ನು ಸ್ವತಃ ನೋಡಿ ಮನಕರಗಿದ್ದಾರೆ.
ಮುಗೇರಕುದ್ರು ಪ್ರದೇಶದಲ್ಲಿ 35 ಮನೆಗಳಿದ್ದು, ಸುಮಾರು ನೂರಕ್ಕೂ ಹೆಚ್ಚು ಜನರಿದ್ದಾರೆ. ಕಳೆದ ಒಂದು ವಾರದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಫಲ್ಗುಣಿ ನದಿ ತುಂಬಿ ಹರಿದಿದ್ದು, ಅದ್ಯಪಾಡಿ ಗ್ರಾಮದ ಹಲವು ಕಡೆ ಕೃಷಿ ಜಮೀನು, ಮನೆಗಳು ಅರ್ಧಕ್ಕೆ ಮುಳುಗಿಬಿಟ್ಟಿವೆ. ನಾಲ್ಕು ದಿನಗಳಿಂದ ನೆರೆ ನೀರು ಒಂದೇ ಸಮನೆ ಮನೆಗಳಿಗೆ ನುಗ್ಗುತ್ತಿದ್ದು, ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಅಲ್ಲಿನ ನಿವಾಸಿಗಳು ಮನೆಯ ಅಂಗಳ ದಾಟುವುದಕ್ಕೂ ಅತ್ತಿತ್ತ ಹೋಗುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಮಕ್ಕಳು ಶಾಲೆಗೆ ಹೋಗುವುದಕ್ಕೂ, ಯಾರಾದ್ರೂ ಹೊರಗೆ ಹೋಗುವುದಕ್ಕೂ ದೋಣಿಗಳನ್ನು ಆಶ್ರಯಿಸುತ್ತಿದ್ದಾರೆ.
ಇಷ್ಟಕ್ಕೂ ಇವರಿಗೆ ಸಂಕಷ್ಟ ತಂದಿರುವುದು ಮರವೂರಿನಲ್ಲಿ ಹನ್ನೊಂದು ವರ್ಷಗಳ ಹಿಂದೆ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟು. ಭಾರೀ ಮಳೆಗೆ ನದಿ ತುಂಬಿಕೊಂಡಾಗ, ಅಣೆಕಟ್ಟಿನಲ್ಲಿ ನೀರನ್ನು ಬಿಟ್ಟುಕೊಡುವ ವ್ಯವಸ್ಥೆ ಇಲ್ಲ. ಹೀಗಾಗಿ ಚೆಕ್ ಡ್ಯಾಮ್ ರೀತಿಯ ಅಣೆಕಟ್ಟಿನ ಮೇಲ್ಗಡೆಯೇ ನದಿ ಹರಿಯುತ್ತದೆ. ಇದರಿಂದಾಗಿ ನದಿಯ ಸಹಜ ಹರಿವಿಗೆ ತೊಡಕಾಗುವುದರಿಂದ ಆಸುಪಾಸಿನ ಗ್ರಾಮಗಳಿಗೆ ನೆರೆ ನೀರು ನುಗ್ಗುತ್ತದೆ. ಈ ಕಾರಣದಿಂದ ಪ್ರತಿ ಮಳೆಗಾಲದಲ್ಲೂ ಅದ್ಯಪಾಡಿ ಜನರ ಪಾಲಿಗೆ ಮರವೂರು ಅಣೆಕಟ್ಟು ಅನ್ನೋದು ರಾಕ್ಷಸ ರೂಪದಲ್ಲಿ ಕಾಡುತ್ತಲೇ ಇದೆ. 2019ರಲ್ಲಿ ಮಾಧ್ಯಮಗಳ ಸುದ್ದಿ ನೋಡಿ, ಆಗಿನ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅದ್ಯಪಾಡಿಗೆ ತೆರಳಿದ್ದರು. ಮಳೆಗಾಲಕ್ಕೆ ಅಣೆಕಟ್ಟಿನಲ್ಲಿ ನೀರು ಹರಿಯಲು ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳಿ ಹೋಗಿದ್ದರು. ಆದರೆ, ಜನಪ್ರತಿನಿಧಿಗಳು ಸೇರಿ ಯಾರು ಬಂದರೂ, ಇವರದು ತೀರದ ಸಮಸ್ಯೆಯಾಗಿ ಬಿಟ್ಟಿದೆ.
ಅರ್ಧಕ್ಕೆ ಮುಳುಗಿದ್ದ ಮನೆಯಲ್ಲಿ ವೃದ್ಧ ದಂಪತಿ
ಶುಕ್ರವಾರ ಬೆಳಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬಂದಾಗಲೂ, ಸ್ಥಳೀಯರ ಬೇಡಿಕೆ ಒಂದೇ. ಅಣೆಕಟ್ಟಿನಲ್ಲಿ ನೀರು ಹರಿಯಲು ಪರ್ಯಾಯ ವ್ಯವಸ್ಥೆ ಮಾಡಿ ಎಂದಷ್ಟೇ. ಮಳೆಗಾಲದಲ್ಲಿ ನಾವು ಪ್ರತಿ ಬಾರಿ ಸಮಸ್ಯೆ ಎದುರಿಸುತ್ತೇವೆ. ಇದಕ್ಕೆ ಯಾರು ಹೊಣೆ, ನೀವಾದರೂ ನಮ್ಮ ಸಂಕಷ್ಟಕ್ಕೆ ಪರಿಹಾರ ಕೊಡಿ ಎಂದು ಗೋಗರೆದರು. ಆನಂತರ, ಜಿಲ್ಲಾಧಿಕಾರಿ ಅಲ್ಲಿದ್ದ ಸ್ಥಳೀಯ ದೋಣಿಯಲ್ಲೇ ಸಂತ್ರಸ್ತರ ಮನೆಗಳಿಗೆ ತೆರಳಿದರು. ಅವರ ಜೊತೆಗೆ ಜಿಪಂ ಸಿಇಓ ಆನಂದ್, ಎಡಿಸಿ ಹರ್ಷವರ್ಧನ್ ಇದ್ದರು. ಆ ಮನೆಯ ಜಗುಲಿ ಮುಳುಗುವಷ್ಟು ನೀರು ತುಂಬಿಕೊಂಡಿದ್ದರೆ, ಅಂಗಳದಲ್ಲಿದ್ದ ಬಾವಿ ಅಲ್ಲಿನ ವಾಸ್ತವ ಸ್ಥಿತಿಗೆ ಕನ್ನಡಿ ಹಿಡಿಯುವಂತಿತ್ತು. ಜಿಲ್ಲಾಧಿಕಾರಿ ಹೋಗಿದ್ದ ಅಡಿಕೆ ತೋಟ ನಡುವಿದ್ದ ಮನೆಯಲ್ಲಿ ವೃದ್ಧ ದಂಪತಿ ಮಾತ್ರ ಇದ್ದರು. ಜಿಲ್ಲಾಧಿಕಾರಿ ಅವರಲ್ಲಿ ಕನ್ನಡದಲ್ಲಿ ನೀವ್ಯಾಕೆ ಈ ಮನೆಯಲ್ಲಿ ಉಳಿದುಕೊಂಡಿದ್ದೀರಿ. ನಿಮಗೆ ಮಕ್ಕಳು ಇಲ್ಲವೇ. ಇಲ್ಲಿರೋದು ಅಪಾಯ ಅಲ್ವೇ.. ಬೇರೆ ಕಡೆಗೆ ಬನ್ನಿ ಎಂದು ಹೇಳಿದರು.
ಮೊಮ್ಮಗನಲ್ಲಿ ಹೇಳಿಸಲೇ ಎಂದ ಜಿಲ್ಲಾಧಿಕಾರಿ
ಆದರೆ, ಅಕ್ಷರ ಕಲಿಯದ ಬಡ ವೃದ್ಧ ಮಹಾಬಲ ಮೂಲ್ಯರಿಗೆ ಜಿಲ್ಲಾಧಿಕಾರಿಯ ಕನ್ನಡ ಮಾತು ಅರ್ಥವಾಗಲಿಲ್ಲ. ಜೊತೆಗಿದ್ದವರು ಜಿಲ್ಲಾಧಿಕಾರಿ ಹೇಳಿದ್ದನ್ನು ತುಳುವಿನಲ್ಲಿ ಪುನರುಚ್ಚರಿಸಿದರು. ಮೊಮ್ಮಗನ ಮೂಲಕ ಹೇಳಿಸಲೇ ಎಂದು ಜಿಲ್ಲಾಧಿಕಾರಿ ಕೇಳಿದ್ದಕ್ಕೆ, ಏನೂ ಬೇಡ. ಹೆಚ್ಚು ನೀರು ಬಂದರೆ ಹೊರಗೆ ಬರುತ್ತೇವೆ, ಸ್ಥಳೀಯರು ಸಹಾಯ ಮಾಡುತ್ತಾರೆ. ನಮಗೇನೂ ಭಯ ಇಲ್ಲ ಎಂದರು. ಆ ಮನೆಯಲ್ಲಿ ವೃದ್ಧ ದಂಪತಿ ಅಷ್ಟೇ ಇದ್ದಾರೆ. ಇರೋ ಒಬ್ಬ ಮಗಳಿಗೆ ಮದುವೆಯಾಗಿ ದೂರವಿದ್ದಾರೆ. ಸಂಬಂಧಿಕರೂ, ಸ್ಥಳದಲ್ಲಿ ದೋಣಿ ಓಡಿಸುತ್ತಾ ಜಿಲ್ಲಾಧಿಕಾರಿಯನ್ನೂ ಆ ಜಾಗಕ್ಕೆ ಕರೆತಂದಿದ್ದ ಶಿವರಾಮ ಅವರು ನಾವು ನೋಡಿಕೊಳ್ಳುತ್ತೇವೆ, ನೀರು ಹೆಚ್ಚಿದರೆ ನಾವೇ ಸ್ಥಳಾಂತರ ಮಾಡುತ್ತೇವೆ ಎಂದು ಆತಂಕದಲ್ಲಿದ್ದ ಡೀಸಿಗೆ ಮನವರಿಕೆ ಮಾಡಿದರು.
ಮುಗೇರಕುದ್ರು ಪ್ರದೇಶದಲ್ಲಿ ನಡುವೆ ಸಣ್ಣ ಹೊಳೆ ಹರಿಯುತ್ತಿದ್ದು, ಮುಂದಕ್ಕೆ ಫಲ್ಗುಣಿ ನದಿ ಸೇರುತ್ತದೆ. ಆದರೆ, ಸ್ಪಲ್ಪ ದೂರದಲ್ಲಿ ಅಣೆಕಟ್ಟಿಗೆ ಅಡ್ಡಲಾಗಿ ಡ್ಯಾಮ್ ಕಟ್ಟಿದ್ದರಿಂದ ನೀರಿನ ಸಹಜ ಹರಿವಿಗೆ ತಡೆಯಾಗಿದ್ದು, ಮುಗೇರಕುದ್ರುವನ್ನು ಮುಳುಗಿಸಿದೆ. ಹೊಳೆಯೋ, ಗದ್ದೆಯೋ ಒಂದೂ ತಿಳಿಯದಂತಿದ್ದ ಪ್ರದೇಶದಲ್ಲಿ ದೋಣಿ ಸವಾರಿ ಮಾಡಿಬಂದ ಜಿಲ್ಲಾಧಿಕಾರಿ, ಅಲ್ಲಿದ್ದ ಸ್ಥಳೀಯ ಪಿಡಿಓ ಮತ್ತಿತರ ಅಧಿಕಾರಿಗಳಿಗೆ ಸಂಜೆಯ ವರೆಗೂ ನೀರು ಕಡಿಮೆಯಾಗದಿದ್ದರೆ, ಎಲ್ಲರನ್ನೂ ಸ್ಥಳಾಂತರ ಮಾಡಬೇಕು. ಇಲ್ಲಿ ಸಂಬಂಧಿಕರ ಮನೆ ಅಥವಾ ಸರಕಾರಿ ವ್ಯವಸ್ಥೆ ಇದ್ದರೆ ವಸತಿ ಒದಗಿಸಿ ಎಂದು ಸೂಚನೆ ನೀಡಿದರು..
ಜಿಲ್ಲಾಧಿಕಾರಿ ಫೋಟೊ ಇಟ್ಟು ಪೂಜೆ ಮಾಡುತ್ತೇವೆ
ಗ್ರಾಪಂ ಸದಸ್ಯೆ ವಿಜಯಲಕ್ಷ್ಮೀ ಸುವರ್ಣ ಮತ್ತು ಮುಗೇರಕುದ್ರು ನಿವಾಸಿಗಳು ಜಿಲ್ಲಾಧಿಕಾರಿಗೆ ಅಲ್ಲಿನ ಸಮಸ್ಯೆ ಬಗ್ಗೆ ಹೇಳಿಕೊಂಡರು. ಅಣೆಕಟ್ಟಿನ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಮಾಡುತ್ತೀರಾ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಮಳೆಗಾಲದಲ್ಲಿ ನೀರು ಹರಿಯುವುದಕ್ಕೆ ಪರ್ಯಾಯ ವ್ಯವಸ್ಥೆ ಆಗಬೇಕಿದೆ. ಸ್ಥಳೀಯರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಅಣೆಕಟ್ಟಿನ ಬಗ್ಗೆ ವಾಸ್ತವ ಸ್ಥಿತಿಗತಿ ಏನಿದೆ ಎಂದು ವರದಿ ತರಿಸುತ್ತೇನೆ ಎಂದರು. ಕೊನೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ದೋಣಿ ಓಡಿಸುತ್ತಿದ್ದ ಶಿವರಾಮ ಅವರು, ಜಿಲ್ಲಾಧಿಕಾರಿ ಏನಾದ್ರೂ ಸಮಸ್ಯೆ ಪರಿಹರಿಸಿದ್ರೆ ಅವರ ಫೋಟೋ ಹಾಕಿ ಪ್ರತಿದಿನ ಪೂಜೆ ಮಾಡುತ್ತೇವೆ ಎಂದಿದ್ದು ನರಕ ಯಾತನೆಯನ್ನು ಸಾರಿ ಹೇಳುವಂತಿತ್ತು.
Mangalore rain, Dakshina Kannada DC Mullai Muhilan visits flooded areas of Adyapadi in boat. As the entire place has been flooded with water due to poor engineer work of the dam it has been difficult for the residents of pavoor adyapadi. DC visited the spot and residents have requested him for solution.
10-05-25 11:30 am
HK News Desk
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm