ಬ್ರೇಕಿಂಗ್ ನ್ಯೂಸ್
17-07-24 03:58 pm Mangalore Correspondent ಕರಾವಳಿ
Photo credits : Karnataka Tak
ಮಂಗಳೂರು, ಜುಲೈ.17: ಸಿದ್ದರಾಮಯ್ಯ ಅವರನ್ನು ಬಹಳ ಕಾಲದಿಂದ ನೋಡಿಕೊಂಡಿದ್ದೇನೆ. ಮುಡಾ, ವಾಲ್ಮೀಕಿ ನಿಗಮದ ಹಗರಣ ನೋಡಿಕೊಂಡು ಯಾಕೆ ಸುಮ್ಮನಿದ್ದಾರೆ ಅಂತ ಸಂಶಯ ಕಾಡುತ್ತಿದೆ. ಸಿದ್ದರಾಮಯ್ಯ ಅವರು ಹಿಂದೆ ಇದ್ದ ರೀತಿ ಈಗ ಇಲ್ಲ. ತುಂಬ ಬದಲಾಗಿದ್ದಾರೆ. ಹತ್ತು ಹನ್ನೆರಡು ಸೈಟ್ ಪಡೆಯುವಷ್ಟು ಬದಲಾಗಿದ್ದಾರೆ ಅಂತ ನನಗೆ ನಂಬೋಕೆ ಆಗ್ತಿಲ್ಲ ಎಂದು ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ ವ್ಯಂಗ್ಯವಾಡಿದ್ದಾರೆ.
ಮಾಧ್ಯಮದವರು ವಾಲ್ಮೀಕಿ ಹಗರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಾಲ್ಮೀಕಿ ಹಗರಣದ ದುಡ್ಡು ಒಂದು ಬಳ್ಳಾರಿಗೆ ಹೋಗಿದ್ದಲ್ಲ. 187 ಕೋಟಿ ಅಂಥ ಎಷ್ಟು ಬಳ್ಳಾರಿಗಳಿಗೆ ಹೋಗಿದೆಯೋ ಗೊತ್ತಿಲ್ಲ. ಅದರ ಬಗ್ಗೆ ತನಿಖೆ ಆಗ್ತಾ ಇದೆ. ಕಳ್ಳರು ಸಿಕ್ಕಿಬೀಳುತ್ತಾರೆ. ಆದರೆ, ಮುಡಾ, ವಾಲ್ಮೀಕಿ ಹಗರಣದ ಜೊತೆಗೆ ಏಗುವುದಕ್ಕಿಂತ ಸಿದ್ದರಾಮಯ್ಯ ಅವರು ರಾಜಿನಾಮೆ ಕೊಟ್ಟು ಹೊರಬರೋದು ಒಳ್ಳೆದು ಅನಿಸುತ್ತೆ. ಆ ರೀತಿಯ ಕೆಲಸ ಮಾಡಿಕೊಂಡು ಬಂದವರಲ್ಲ ಸಿದ್ದರಾಮಯ್ಯ. ಹಾಗಾಗಿ, ಹಗರಣದ ವಿಚಾರದಲ್ಲಿ ಅವರು ಕೈಕಟ್ಟಿ ಕೂರದೆ ರಾಜಿನಾಮೆ ಕೊಟ್ಟು ಹೊರಬರಲಿ ಅಂತ ಹೇಳುತ್ತೇನೆ ಎಂದರು.
ರೈಲ್ವೇ ಅಧಿಕಾರಿಗಳ ಸಭೆಗೆ ಸೂಚನೆ
ಮಂಗಳೂರು ಪ್ರತ್ಯೇಕ ರೈಲ್ವೇ ವಿಭಾಗ ಮಾಡುತ್ತೀರಾ ಎಂಬ ಪ್ರಶ್ನೆಗೆ, ಕೊಂಕಣ ರೈಲ್ವೇ, ದಕ್ಷಿಣ ರೈಲ್ವೇ ಮತ್ತು ದಕ್ಷಿಣ – ಪಶ್ಚಿಮ ವಿಭಾಗದ ರೈಲ್ವೇ ಜನರಲ್ ಮ್ಯಾನೇಜರ್ ಗಳು, ಡಿಆರ್ ಎಂಗಳು ಮತ್ತು ಈ ಭಾಗದ ಸಂಸದರು, ಶಾಸಕರೆಲ್ಲ ಜುಲೈ 20ರಂದು ಸಭೆ ನಡೆಸಲು ಸೂಚನೆ ನೀಡಿದ್ದೇನೆ. ಎಲ್ಲರು ಕುಳಿತು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಲು ಹೇಳಿದ್ದೇನೆ. ಆನಂತರ, ವಿಭಾಗದ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಹೇಳಿದರು.
ಕೊಂಕಣ ರೈಲ್ವೇ ವಿಲೀನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ವಿಲೀನದ ಬಗ್ಗೆ ಹೇಳಲು ಬರುವುದಿಲ್ಲ. ಈ ಭಾಗಕ್ಕೆ ಒಳ್ಳೆದು ಆಗಲು ಏನು ಆಗಬೇಕೋ ಅದನ್ನು ಕುಳಿತು ಚರ್ಚೆ ಮಾಡಬೇಕು. ನಮ್ಮ ಸಂಸದ ಬ್ರಿಜೇಶ್ ಚೌಟ ಮತ್ತು ಕೋಟ ಶ್ರೀನಿವಾಸ ಪೂಜಾರಿಯವರು ಹಾಗೂ ಈ ಭಾಗದ ಶಾಸಕರು ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಅದನ್ನು ಕಾರ್ಯಗತ ಮಾಡಲು ನಾನಿದ್ದೇನೆ ಎಂದರು.
V Somanna slams CM Siddaramaiah in Mangalore on Muda scam, also he alleged that why CM is so silent in Valmiki scam. Stressing on the need to strike a coordination between various divisions of Railways, the minister said that he emphasises on maintaining a cordial relation with officials.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm