ಬ್ರೇಕಿಂಗ್ ನ್ಯೂಸ್
13-07-24 09:54 pm Mangalore Correspondent ಕರಾವಳಿ
ಮಂಗಳೂರು, ಜುಲೈ.13: ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಿ ಸಂಸತ್ತಿನಲ್ಲಿ ಜನಪರ ಮಾತುಗಳನ್ನು ಆಡುತ್ತಿದ್ದರೆ, ನಾವು ಪ್ರತಿಭಟನೆ ಮಾಡುವ ಸ್ಥಿತಿ ಬರುತ್ತಿರಲಿಲ್ಲ. ನೂರ ಇಪ್ಪತ್ತು ಕೋಟಿ ಹಿಂದುಗಳಿರುವ ದೇಶದ ಸಂಸತ್ತಿನಲ್ಲಿ ಹಿಂದುಗಳು ಹಿಂಸಾವಾದಿಗಳೆಂದು ಮಾತನಾಡಿದ್ದಾರೆ. ಈ ಮಾತನ್ನು ಹಿಂದುತ್ವ ಒಪ್ಪಿಕೊಳ್ಳುವ ಯಾರು ಕೂಡ ಸಹಿಸೋದಿಲ್ಲ. ಭರತ್ ಶೆಟ್ಟಿ ಇವರ ಕೆನ್ನೆಗೆ ಹೊಡೆಯಬೇಕಿತ್ತು ಎಂದಿದ್ದರಲ್ಲಿ ಯಾವ ತಪ್ಪೂ ಇಲ್ಲ. ರಾಹುಲ್ ತನ್ನ ಮಾತನ್ನು ಹಿಂಪಡೆಯದಿದ್ದರೆ, ಮುಂದೆ ಈ ಜಿಲ್ಲೆಗೆ ಬಂದಾಗೆಲ್ಲ ನಾವು ಕಪ್ಪು ಬಾವುಟ ತೋರಿಸುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕಾವೂರಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಮಾತನಾಡಿದ್ದಕ್ಕೆ ಪೊಲೀಸರು ಎಫ್ಐಆರ್ ದಾಖಲಿಸಿದ್ದನ್ನು ವಿರೋಧಿಸಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆಯಾದಾಗ, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆದಾಗ, ರಾಜಸ್ಥಾನದಲ್ಲಿ ಅಮಾಯಕ ಟೈಲರ್ ಹತ್ಯೆ ಆದಾಗ, ಹಿಂದು ಹೆಣ್ಮಕ್ಕಳನ್ನು ಮತಾಂಧರು ಕೊಂದು ಹಾಕಿದಾಗ ಕಾಂಗ್ರೆಸಿನ ಒಬ್ಬನೇ ಒಬ್ಬ ತುಟಿ ಬಿಚ್ಚಲಿಲ್ಲ. ಈಗ ರಾಹುಲ್ ಗಾಂಧಿ ಕೆನ್ನೆಗೆ ಹೊಡೆಯಬೇಕಿತ್ತು ಎಂದ ಕೂಡಲೇ ಇವರು ಬೀದಿಗೆ ಬಂದಿದ್ದಾರೆ. ಮುಂದೇನಾದರೂ ರಾಹುಲ್ ಮೇಲೆ ಆಗಿಬಿಟ್ಟಲ್ಲಿ ಇವರೆಲ್ಲ ಏನು ಮಾಡಬೇಕು. ನಿಮ್ಮ ಸರಕಾರ ಇದೆಯೆಂದು ವಿನಾಕಾರಣ ನಮ್ಮ ಶಾಸಕರ ಮೇಲೆ ಕೇಸು ಹಾಕುತ್ತಿದ್ದೀರಿ. ಇದಕ್ಕೆಲ್ಲ ಬಿಜೆಪಿ ಕಾರ್ಯಕರ್ತರು ಬಗ್ಗಲ್ಲ. ಯಾವುದೇ ಒಬ್ಬ ಕಾರ್ಯಕರ್ತನಿಗೆ ಅನ್ಯಾಯ ಆದರೂ ನಾವು ಸಾವಿರಾರು ಮಂದಿ ಠಾಣೆಗೆ ಬರುತ್ತೇವೆ ಎಂದರು.
ಗಾಂಧಿ ಹೆಸರಿಟ್ಟು ರಾಜಕೀಯ ಮಾಡ್ತಾರೆ
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಸ್ವಾತಂತ್ರ್ಯ ಹೋರಾಟ ಮಾಡಿದ ಮಹಾತ್ಮ ಗಾಂಧೀಜಿಯವರ ಗಾಂಧಿ ಹೆಸರಿಟ್ಟುಕೊಂಡು ರಾಜಕೀಯಕ್ಕೆ ಬಂದವರು ರಾಹುಲ್ ಕುಟುಂಬಸ್ಥರು. ಸ್ವತಂತ್ರ ಅಸ್ತಿತ್ವವೇ ಇಲ್ಲದವರು. ಹಿಂದುಗಳನ್ನು ಕೆಣಕಿದರೆ ಮುಂದೆ ನಿಮಗೆ ಡಿಪಾಸಿಟ್ ಹಣವೂ ಉಳಿಯೋದಿಲ್ಲ. ಮಂಗಳೂರಿನ ಸ್ಥಿತಿಯೇ ಇಡೀ ರಾಜ್ಯದಲ್ಲಿ ಆಗಲಿದೆ ಎಂದು ಹೇಳಿದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಈ ದೇಶದ ಜನಸಾಮಾನ್ಯರ ಭಾವನೆಯನ್ನು ಶಾಸಕ ಭರತ್ ಶೆಟ್ಟಿ ವ್ಯಕ್ತ ಮಾಡಿದ್ದಾರೆ. ರಾಹುಲ್ ಗಾಂಧಿಯ ಅಜ್ಜಿಗೇ ನಾವು ಹೆದರಿಲ್ಲ. ದೇಶದಲ್ಲಿ ತುರ್ತು ಸ್ಥಿತಿ ಹೇರಿದಾಗ ಹೋರಾಟ ಮಾಡಿದ್ದು ಹಿಂದುತ್ವದ ಕಾರ್ಯಕರ್ತರು. ಈಗ ರಾಹುಲನಿಗೆ ಹೆದರುತ್ತೇವಾ ಎಂದು ಹೇಳಿದರು.
ಮೋದಿ ತಲೆ ಕಡೀಬೇಕು ಎಂದವನಿಗೆ ಕಾಂಗ್ರೆಸ್ ಟಿಕೆಟ್
ಶಾಸಕ ಭರತ್ ಶೆಟ್ಟಿ ಮಾತನಾಡಿ, ಹಿಂದುತ್ವ ವಿರುದ್ಧ ಯಾರು ಮಾತಾಡಿದ್ರೂ ನಮ್ಮದೇ ಒಂದೇ ಟ್ರೀಟ್ಮೆಂಟ್. ರಾಜಕೀಯ ಬದಿಗಿಟ್ಟು ನಾವು ಹಿಂದುತ್ವಕ್ಕಾಗಿ ಒಂದಾಗುತ್ತೇವೆ. ಇಮ್ರಾನ್ ಮಸೂದ್ ಎಂಬಾತ ಮೋದಿ ತಲೆ ಕಡೀಬೇಕು ಎಂದಿದ್ದ. ಆದರೆ ಅಂಥ ವ್ಯಕ್ತಿಗೆ ಕಾಂಗ್ರೆಸ್ ಎಂಪಿ ಸೀಟು ಕೊಟ್ಟಿತ್ತು. ರಾಹುಲ್ ತಾಯಿ ಸೋನಿಯಾ, ಮೋದಿಯವರನ್ನು ಸಾವಿನ ವ್ಯಾಪಾರಿ ಎಂದು ಹೇಳಿದ್ದರು. ಲೀಗಿನ ಐದು ಜನ ಸಂಸದರು ಇದ್ದ ವೇದಿಕೆಯಲ್ಲಿ ಹಿಂದುಗಳನ್ನು ಅವರ ದೇವಸ್ಥಾನದ ಎದುರಲ್ಲೇ ನೇತಾಡಿಸ್ತೀವಿ ಎಂದಿದ್ದರು. ಇವರೆಲ್ಲ ಏನು ಹೇಳಿದರೂ ನಾವು ಕೇಳಿಸಿಕೊಳ್ಳಬೇಕಾ ಎಂದು ಪ್ರಶ್ನಿಸಿದರು.
ಭಾರತದಲ್ಲಿ ಶಾಂತಿ ನೆಲೆಸಿದ್ದರೆ ಅದು ಹಿಂದುಗಳಿಂದಾಗಿ, ಅದು ಸೆಕ್ಯುಲರ್ ಶಬ್ದವನ್ನು ಸಂವಿಧಾನದಲ್ಲಿ ಸೇರಿಸಿದ್ದಕ್ಕಾಗಿ ಅಲ್ಲ ಎಂದು ಹೇಳಿದ ಭರತ್ ಶೆಟ್ಟಿ, ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ನನ್ನನ್ನು ಭಯೋತ್ಪಾದಕ ಅಂತಾನೆ. ಆದರೆ ಅವನ ಸಂತಾನವೇ ಭಯೋತ್ಪಾದಕರು ಎನ್ನುವುದನ್ನು ನೆನಪಿಸುತ್ತೇನೆ. ಇಂದಿರಾ ಕಾಲದಿಂದ ರಾಜಕಾರಣ ಮಾಡಿಕೊಂಡು ಬಂದ ರಮಾನಾಥ ರೈ ಬಾಯಿಗೆ ಬಂದಾಗೆ ಮಾತಾಡಿದ್ದಾರೆ. ಈ ಜಿಲ್ಲೆಯ ನಿಷ್ಠುರ ರಾಜಕಾರಣಿ ಜನಾರ್ದನ ಪೂಜಾರಿಯನ್ನು ಏಕವಚನದಲ್ಲಿ ನಿಂದಿಸಿದ್ದು ಇದೇ ರಮಾನಾಥ ರೈ ಎಂಬುದನ್ನು ಯಾರೂ ಮರೆತಿಲ್ಲ. ಇವರೆಲ್ಲ ಯಾವಾಗದ್ರೂ ಒಬ್ಬ ಹಿಂದುವಿಗೆ ಅನ್ಯಾಯ ಆದಾಗ ಮಾತಾಡಿದ್ದಾರೆಯೇ.. ಎಂದು ಪ್ರಶ್ನಿಸಿದರು.
ಒಬ್ಬನಾದ್ರೂ ಮುಸ್ಲಿಂ ನೋಟಾಗೆ ಹಾಕಿದ್ದಾನೆಯೇ ?
ಇನಾಯತ್ ಆಲಿ ನನ್ನ ಡಿಗ್ರಿ ಬಗ್ಗೆ ಡೆಂಟಲ್, ಮೆಂಟಲ್ ಎನ್ನುತ್ತಾರೆ. ಇವರಿಗೆ ಕನಿಷ್ಠ ಡಿಗ್ರಿ ಮಾಡೋದಕ್ಕೂ ಆಗಿಲ್ಲ. ಈಗೆಲ್ಲಾ ಪೋಸ್ಟಲ್ ನಲ್ಲಿ ಡಿಗ್ರಿ ಮಾಡಕ್ಕಾಗುತ್ತೆ. ಅದನ್ನಾದರೂ ಮಾಡಿಕೊಳ್ಳಲಿ ಎಂದು ವ್ಯಂಗ್ಯ ಮಾಡಿದ ಭರತ್ ಶೆಟ್ಟಿ, ಹಿಂದೆ ಶಿವಾಜಿ, ರಾಣಾ ಪ್ರತಾಪ ಸಿಂಗ್ ಶಾಂತಿಯಿಂದ ಇರುತ್ತಿದ್ದರೆ, ಈ ದೇಶದ ಸ್ಥಿತಿ ಏನಾಗುತ್ತಿತ್ತು. ಹಿಂದು ಸಮಾಜ ಯಾವಾಯ ಅಗತ್ಯವಿದೆಯೋ ಆಗೆಲ್ಲಾ ಶಸ್ತ್ರ ಹಿಡಿಯುತ್ತದೆ. ಆ ಮಾತಿನ ಕಾರಣಕ್ಕೆ ನನ್ನ ಮೇಲೆ ಕೇಸು ಹಾಕೋದಿದ್ದರೆ ನೂರು ಕೇಸು ಬೇಕಾದರೂ ಹಾಕಲಿ. ಮೊನ್ನೆ ಲೋಕಸಭೆ ಚುನಾವಣೆಯಲ್ಲಿ ನೋಟಾ ಅಭಿಯಾನ ಮಾಡಿದ್ದರು. ನೋಟಾ ಪರವಾಗಿ ಹಿಂದುಗಳೇ ಓಟ್ ಹಾಕಿದ್ದು ಬಿಟ್ಟರೆ, ಒಬ್ಬನೇ ಒಬ್ಬ ಮುಸಲ್ಮಾನ ಓಟ್ ಹಾಕಿದ್ದಾನೆಯೇ. ನಮ್ಮ ಜನರ ಬ್ರೇನ್ ವಾಷ್ ಮಾಡಿ ನೋಟಾ ಹಾಕಿಸಿದ್ದಾರೆ ಎಂದರು.
ಭರತ್ ಶೆಟ್ಟಿ ಹೊತ್ತು ಕುಣಿದ ಕಾರ್ಯಕರ್ತರು
ಪ್ರತಿಭಟನೆ ಮುಗಿದ ಬಳಿಕ ನೂರಾರು ಕಾರ್ಯಕರ್ತರ ಜೊತೆಗೆ ಮುಖಂಡರು ಕಾವೂರು ಠಾಣೆಯತ್ತ ನಡೆದುಕೊಂಡು ಬಂದು ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ರಸ್ತೆಗೆ ಅಡ್ಡ ಬ್ಯಾರಿಕೇಡ್ ಹಾಕಿ ನಿಂತಿದ್ದರಿಂದ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಹನುಮಾನ್ ಚಾಲೀಸಾ ಪಠಣ ಮಾಡಿದರು. ಬಿಜೆಪಿ ನಾಯಕರು ಶಾಸಕ ಭರತ್ ಶೆಟ್ಟಿ ಜೊತೆಗೆ ಠಾಣೆಯ ಒಳಗೆ ತೆರಳಿ, ಸಹಿ ಹಾಕಿ ಹೊರಬಂದರು. ಠಾಣೆಯಿಂದ ಹೊರಬಂದ ಭರತ್ ಶೆಟ್ಟಿಯನ್ನು ಸುರಿಯುತ್ತಿದ್ದ ಮಳೆಯ ನಡುವಿನಲ್ಲಿ ಕಾರ್ಯಕರ್ತರು ಹೆಗಲಲ್ಲಿ ಕೂರಿಸಿ ಕುಣಿದಾಡಿದರು. ಜುಲೈ 8ರಂದು ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನಾ ಸಭೆ ನಡೆಸಿದ್ದಾಗ, ಶಾಸಕ ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿಗೆ ಸಂಸತ್ತಿನ ಒಳಗಡೆಯೇ ಕೆನ್ನೆಗೆ ಬಾರಿಸಬೇಕಿತ್ತು ಎಂದು ಹೇಳಿಕೆ ನೀಡಿದ್ದಕ್ಕೆ ಕಾವೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
BJP leaders from Dakshina Kannada district held a protest at Kavoor junction on Saturday, July 13, in response to Congress filing a false FIR against MLA Dr Bharath Shetty. Opposition leader R Ashoka participated in the protest.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm