ಬ್ರೇಕಿಂಗ್ ನ್ಯೂಸ್
13-07-24 01:29 pm Udupi Correspondent ಕರಾವಳಿ
ಉಡುಪಿ, ಜುಲೈ 13: ಕಾರ್ಕಳದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರದ ಬಗ್ಗೆ ನೇರವಾಗಿ ಶಾಸಕ ಸುನಿಲ್ ಕುಮಾರ್ ಮತ್ತು ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅವರನ್ನು ಪ್ರಶ್ನೆ ಮಾಡಿದ್ದು, ಅಧಿಕಾರಿಗಳು ಮತ್ತು ಶಾಸಕರನ್ನು ತೀವ್ರ ಮುಜುಗರಕ್ಕೀಡು ಮಾಡಿದ ಪ್ರಸಂಗ ನಡೆದಿದೆ. ಇದೇ ವೇಳೆ ವಿಡಿಯೋ ಮಾಡುತ್ತಿದ್ದ ಪತ್ರಕರ್ತರು ಮತ್ತು ಸಾರ್ವಜನಿಕರನ್ನು ಡಿವೈಎಸ್ಪಿ ಸೇರಿದಂತೆ ಪೊಲೀಸರು ಬೆದರಿಸಲು ಯತ್ನಿಸಿದ್ದು ಸಾರ್ವಜನಿಕರ ಜೊತೆಗೆ ಜಟಾಪಟಿ ನಡೆಸಿದ್ದಾರೆ.
ಕಾರ್ಕಳ ಪೆರ್ವಾಜೆಯ ನಾರಾಯಣ ಗುರು ಸಭಾಭವನದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ನೇತೃತ್ವದಲ್ಲಿ ಜನಸ್ಪಂದನ ಸಭೆ ನಡೆದಿದ್ದು, ಬೈಲೂರಿನ ಪರಶುರಾಮ ಥೀಮ್ ಪಾರ್ಕಿನ ಕುರಿತು ನಿಟ್ಟೆ ನಿವಾಸಿ ವಿವೇಕ್ ಶೆಟ್ಟಿ ಎಂಬವರು ಅಹವಾಲು ನೀಡಿದ್ದರು. ಪರಶುರಾಮ ಮೂರ್ತಿ ನಕಲಿಯೆಂದು ಗೊತ್ತಿದ್ದರೂ, ನೀವು ಅದನ್ನು ಸ್ಥಾಪಿಸಿದ್ದು ಯಾಕೆ. ಆ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಿದ್ದೇವೆ. ಯಾಕೆ, ಇದಕ್ಕೆ ಕಾರಣವಾದವರ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ, ಶಾಸಕ ಸುನಿಲ್ ಕುಮಾರ್ ಮತ್ತು ವಿವೇಕ್ ಶೆಟ್ಟಿ ನಡುವೆ ಮಾತಿನ ಚಕಮಕಿ ನಡೆದಿದ್ದು, ನೀವು ಕೋರ್ಟಿನಲ್ಲಿ ನೋಡಿಕೊಳ್ಳಿ. ಕೇಸ್ ಮಾಡಿ. ಇಲ್ಲಿ ಯಾಕೆ ಪ್ರಶ್ನೆ ಮಾಡುತ್ತೀರಿ ಎಂದು ವಿವೇಕ್ ಶೆಟ್ಟಿಗೆ ಶಾಸಕರು ಸವಾಲು ಹಾಕಿದ್ದಾರೆ.
ಅಲ್ಲದೆ, ಇಲ್ಲಿ ವಿಡಿಯೋ ಮಾಡಬೇಡಿ. ನೀವು ಪ್ರಚಾರ ಪಡೆದುಕೊಳ್ಳುವುದು ಬೇಡ ಎಂದು ಹೇಳಿದ ಶಾಸಕ ಸುನಿಲ್ ಕುಮಾರ್, ವಿಡಿಯೋ ಮಾಡುತ್ತಿರುವ ಮೊಬೈಲ್ ಗಳನ್ನು ಸೀಜ್ ಮಾಡುವಂತೆ ಡಿವೈಎಸ್ಪಿಗೆ ಸೂಚನೆ ನೀಡಿದ್ದಾರೆ. ಇದರಿಂದ ಕೆಲವು ಪೊಲೀಸರು ಮತ್ತು ಡಿವೈಎಸ್ಪಿ ಅರವಿಂದ ಕಲ್ಲಗುಚ್ಚಿ ಸಾರ್ವಜನಿಕರ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಕೆಲವರು ವಿಡಿಯೋ ಮಾಡುತ್ತಿದ್ದರೆ, ಪೊಲೀಸರು ವಿಡಿಯೋ ಮಾಡದಂತೆ ತಡೆದಿದ್ದಾರೆ. ಮಾಧ್ಯಮದ ಕ್ಯಾಮರಾಗಳನ್ನೂ ಬಂದ್ ಮಾಡುವಂತೆ ಹೇಳಿದ್ದಾರೆ.
ಇದೇ ವೇಳೆ, ಡಿವೈಎಸ್ಪಿ ಅರವಿಂದ ಕಲ್ಲಗುಚ್ಚಿ ಅವರು ಸಾರ್ವಜನಿಕರ ಜೊತೆ ಗೂಂಡಾ ರೀತಿ ವರ್ತಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಮೊಬೈಲ್ ಕಿತ್ತುಕೊಳ್ಳಲು ಬಂದಾಗ, ಎದುರಿಗೆ ಬಂದ ಪುರಸಭಾ ಸದಸ್ಯ ಕಾಂಗ್ರೆಸ್ ಮುಖಂಡ ಶುಭದಾ ರಾವ್, ಮೊಬೈಲ್ ಕಿತ್ತುಕೊಳ್ಳಲು ನೀವು ಯಾರು. ಇದು ಸರಕಾರಿ ಕಾರ್ಯಕ್ರಮ. ಇದನ್ನು ಮೊಬೈಲಿನಲ್ಲಿ ಚಿತ್ರೀಕರಣ ಮಾಡಬಾರದು ಅಂತ ಯಾರು ಹೇಳಿರೋದು. ಆ ರೀತಿಯ ಆರ್ಡರ್ ಏನಾದ್ರೂ ಇದೆಯೇ.. ಮಾಧ್ಯಮವನ್ನು ತಡೆದಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಡಿವೈಎಸ್ಪಿ ಮತ್ತು ಶುಭದಾ ರಾವ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ನಾವು ಜನಸ್ಪಂದನ ಸಭೆಗೆ ಸಮಸ್ಯೆ ಹೇಳಿಕೊಳ್ಳಲು ಬಂದಿರುವುದು, ಮೊಬೈಲ್ ಕಸಿಯಲು ನಿಮಗೆ ಅಧಿಕಾರ ಇಲ್ಲ ಎಂದಾಗ ಇಡೀ ಸಭೆಯೇ ಗೊಂದಲದ ಗೂಡಾಯಿತು. ಬಳಿಕ ಶುಭದಾ ರಾವ್ ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಫೋನ್ ಕರೆ ಮಾಡಿದ್ದು, ದೂರು ನೀಡಿದ್ದಾರೆ. ಅಲ್ಲದೆ, ಫೋನನ್ನು ಡಿವೈಎಸ್ಪಿಗೆ ಕೊಟ್ಟು ಮೊಬೈಲ್ ಚಿತ್ರೀಕರಣ ತಡೆದಿರುವುದನ್ನು ಪ್ರಶ್ನೆ ಮಾಡಿಸಿದ್ದಾರೆ. ಇದರ ನಡುವೆಯೂ ವಿವೇಕ್ ಶೆಟ್ಟಿ ತನ್ನ ಅಹವಾಲು ಮುಂದಿಟ್ಟು ಜಿಲ್ಲಾಧಿಕಾರಿ ಅವರನ್ನು ಪ್ರಶ್ನೆ ಮಾಡಿದ್ದಾರೆ. ಸಾರ್ವಜನಿಕರಿಗೆ ಪ್ರಶ್ನೆ ಮಾಡುವುದಕ್ಕೂ ಅಧಿಕಾರಿಗಳು ಅವಕಾಶ ನೀಡಲಿಲ್ಲ.
ಇಷ್ಟಾಗುತ್ತಿದ್ದಂತೆ, ಪೊಲೀಸರು ಮತ್ತು ಕೆಲವು ಅಧಿಕಾರಿಗಳು ಬೇರೆಯವರ ಅಹವಾಲುಗಳನ್ನು ತರುವಂತೆ ಹೇಳಿ ಇನ್ನೊಂದು ಕುರ್ಚಿ ಹಾಕಿ ವಿವೇಕ್ ಪ್ರಶ್ನೆಗೆ ತಡೆ ಹಾಕಿದ್ದಾರೆ. ಪರಶುರಾಮ ಥೀಮ್ ಪಾರ್ಕ್ ಕುರಿತ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಜಿಲ್ಲಾಧಿಕಾರಿ ಮತ್ತು ಇತರೇ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಶಾಸಕ ಸುನಿಲ್ ಕುಮಾರ್ ಕೂಡ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಇರಿಸು ಮುರಿಸು ಅನುಭವಿಸಿದ್ದಾರೆ. ಪರಶುರಾಮ ಥೀಮ್ ಪಾರ್ಕ್ ಅನ್ನು 11 ಕೋಟಿ ವೆಚ್ಚದಲ್ಲಿ ಮಾಡಿದ್ದರೂ, ಕಂಚಿನ ಬದಲು ಫೈಬರ್ ಮೂರ್ತಿ ಸ್ಥಾಪಿಸಿದ್ದು ಭಾರೀ ಟೀಕೆಗೆ ಗುರಿಯಾಗಿದೆ. ಇತ್ತೀಚೆಗೆ ಈ ಬಗ್ಗೆ ತನಿಖೆಗೆ ಆದೇಶ ಮಾಡಿದ್ದರೂ ಎಲ್ಲವೂ ನಾಮ್ಕೇವಾಸ್ತೆ ಎನ್ನುವಂತಿದೆ. ಶಾಸಕ ಸುನಿಲ್ ಕುಮಾರ್ ಮೂಗಿನಡಿಯಲ್ಲೇ ಈ ಅವ್ಯವಹಾರ ನಡೆದಿದೆಯೆಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ನಿರಂತರ ಹೋರಾಟ ನಡೆಸುತ್ತ ಬಂದರೂ ರಾಜ್ಯ ಮಟ್ಟದ ನಾಯಕರು ಈ ವಿಚಾರವನ್ನೇ ನಗಣ್ಯ ಮಾಡಿದ್ದಾರೆ.
Udupi Public raise voice against karkala Mla Sunil Kumar in over his corruption in general meeting, fight erupts between public, police and MLA. Sunil Kumar orders to seize the mobile phone for recording after which fight erupts in the meeting.
21-07-25 10:38 pm
Bangalore Correspondent
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
21-07-25 11:23 pm
HK News Desk
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ವಾಯುಪಡೆ ತರಬೇತಿ ವಿಮಾ...
21-07-25 09:56 pm
ತನ್ನ ಜೊತೆಗೆ ಲಿವ್ ಇನ್ ರಿಲೇಶನ್ನಲ್ಲಿದ್ದ ಎಎಸ್ಐ ಯು...
20-07-25 04:47 pm
21-07-25 06:42 pm
Mangalore Correspondent
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
21-07-25 11:01 pm
HK News Desk
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm