ಬ್ರೇಕಿಂಗ್ ನ್ಯೂಸ್
10-07-24 03:40 pm Mangaluru Correspondent ಕರಾವಳಿ
ಮಂಗಳೂರು, ಜುಲೈ 10: ಮಂಗಳೂರಿನಲ್ಲಿ ದರೋಡೆ ನಡೆಸಿದ್ದ ಚಡ್ಡಿ ಗ್ಯಾಂಗಿನ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಫೈರ್ ಮಾಡಿದ್ದಾರೆ. ದರೋಡೆ ಕೃತ್ಯಕ್ಕೆ ಬಳಸಿದ್ದ ರಾಡ್ ಅನ್ನು ವಶಕ್ಕೆ ಪಡೆಯುವ ಸಲುವಾಗಿ ಆರೋಪಿಗಳನ್ನು ಮುಲ್ಕಿ ಬಳಿಯ ಪಡು ಪಣಂಬೂರಿಗೆ ಕರೆದೊಯ್ದಿದ್ದಾಗ ಇಬ್ಬರು ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ್ದು ಈ ವೇಳೆ ಉರ್ವಾ ಪೊಲೀಸ್ ಇನ್ಸ್ ಪೆಕ್ಟರ್ ಭಾರತಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ.
ಮಧ್ಯಪ್ರದೇಶದ ಗುಣಾ ಜಿಲ್ಲೆಯ ರಾಜು ಸಿಂಘಾನಿಯಾ(24) ಮತ್ತು ಮಾಧವ್ಗಡ್ ನಿವಾಸಿ ಬಾಲಿ (22) ಗುಂಡೇಟಿಗೆ ಒಳಗಾದವರು. ರಾಜು ಮೇಲೆ ತೊಡೆಯ ಭಾಗಕ್ಕೆ ಗುಂಡೇಟು ಬಿದ್ದಿದ್ದು, ಬಾಲಿ ಮೇಲೆ ಕಾಲಿಗೆ ಗುಂಡು ಬಿದ್ದಿದೆ. ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೇ ವೇಳೆ, ಆರೋಪಿಗಳಿಂದ ಗಾಯಕ್ಕೀಡಾದ ಎಎಸ್ಐ ವಿನಯಕುಮಾರ್ ಮತ್ತು ಸಿಬಂದಿ ಶರತ್ ಅವರನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಉರ್ವಾ ಬಳಿಯ ಕೋಟೆಕಣಿಯಲ್ಲಿ ಜುಲೈ 9ರ ನಸುಕಿನಲ್ಲಿ ವಿಕ್ಟರ್ ಮೆಂಡೋನ್ಸ ಅವರ ಮನೆಗೆ ಹೊಕ್ಕಿದ್ದ ಚಡ್ಡಿ ಬನಿಯನ್ ಹಾಕ್ಕೊಂಡಿದ್ದ ದರೋಡೆಕೋರರು ವಿಕ್ಟರ್ ಮತ್ತು ಅವರ ಪತ್ನಿಗೆ ಹಲ್ಲೆಗೈದು ಕಪಾಟಿನ ಕೀ ಪಡೆದು 13 ಲಕ್ಷ ಚಿನ್ನಾಭರಣ ಲೂಟಿ ಮಾಡಿದ್ದರು. ಅಲ್ಲದೆ, ಒಂದು ಲಕ್ಷ ಮೌಲ್ಯದ ಬ್ರಾಂಡೆಡ್ ವಾಚ್ ಅನ್ನೂ ಲೂಟಿ ಮಾಡಿದ್ದು, ಮೂರು ಮೊಬೈಲ್ ಗಳನ್ನು ನೆಲಕ್ಕೆ ಬಡಿದು ಪುಡಿ ಮಾಡಿದ್ದರು. ಆನಂತರ, ಮನೆಯಲ್ಲಿದ್ದ ಕಾರಿನ ಕೀ ಪಡೆದು ಅದರಲ್ಲಿ ಪರಾರಿಯಾಗಿದ್ದರು. ಕೂಡಲೇ ಉರ್ವಾ ಪೊಲೀಸ್ ಇನ್ಸ್ ಪೆಕ್ಟರ್ ಭಾರತಿ ಅವರು ಸ್ಥಳಕ್ಕೆ ಬಂದಿದ್ದು, ಸಿಸಿಟಿವಿ ಚೆಕ್ ಮಾಡಿದ್ದಾರೆ. ಅಲ್ಲದೆ, ಎಲ್ಲ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಿ ಅಲರ್ಟ್ ಮಾಡಿದ್ದಾರೆ.
ಕಿಟಕಿ ಗ್ರಿಲ್ಸ್ ಕತ್ತರಿಸಿ ಒಳನುಗ್ಗಿದ್ದು ಮತ್ತು ಚಡ್ಡಿ ಹಾಕಿದ್ದರು ಎನ್ನುವ ಮಾಹಿತಿಯಿಂದಾಗಿ ಇದು ಮಧ್ಯಪ್ರದೇಶ ಮೂಲದ ಚಡ್ಡಿ ಗ್ಯಾಂಗ್ ನದ್ದೇ ಕೃತ್ಯವೆಂದು ದೃಢವಾಗಿತ್ತು. ಸಿಸಿಟಿವಿ ಚೆಕ್ ಮಾಡಿದಾಗ, ಕೆಂಪು ಬಣ್ಣದ ಕಾರು ಉಡುಪಿಯತ್ತ ತೆರಳಿರುವುದು ಪತ್ತೆಯಾಗಿತ್ತು. ಹೆಜಮಾಡಿ ಗೇಟ್ ದಾಟಿರುವುದು ತಿಳಿಯುತ್ತಿದ್ದಂತೆ ಮೂಲ್ಕಿ ಪಿಎಸ್ಐ ಅಲರ್ಟ್ ಆಗಿದ್ದು, ಮೂಲ್ಕಿ ಆಸುಪಾಸಿನಲ್ಲಿ ಚೆಕ್ ಮಾಡಿದಾಗ ಕಾರು ಪತ್ತೆಯಾಗಿತ್ತು. ಬಸ್ ನಿಲ್ದಾಣದಲ್ಲಿ ಸಿಸಿಟಿವಿ ನೋಡಿದಾಗ, ನಾಲ್ವರು ಯುವಕರು ಕೆಎಸ್ಸಾರ್ಟಿಸಿ ಬಸ್ ಹತ್ತಿ ಮರಳಿ ಮಂಗಳೂರಿನತ್ತ ತೆರಳಿದ್ದು ಕಂಡುಬಂದಿತ್ತು.
ಕೂಡಲೇ ಕೆಎಸ್ಸಾರ್ಟಿಸಿ ಬಸ್ ಸಿಬಂದಿಯನ್ನು ಸಂಪರ್ಕಿಸಿದಾಗ, ಆರೋಪಿಗಳು ಬೆಂಗಳೂರಿನತ್ತ ತೆರಳಿದ್ದು ತಿಳಿಯುತ್ತಿದ್ದಂತೆ ಆ ಬಸ್ಸಿನ ನಿರ್ವಾಹಕರನ್ನು ಸಂಪರ್ಕಿಸಿ ಸಕಲೇಶಪುರದಲ್ಲಿ ನಿಲ್ಲಿಸಲು ಸೂಚಿಸಿದ್ದರು. ಸಕಲೇಶಪುರ ಪೊಲೀಸರು ಬಸ್ಸನ್ನು ಚೆಕ್ ಮಾಡಿದಾಗ, ನಾಲ್ವರು ಹಿಂದಿ ಮಾತನಾಡುವ ಯುವಕರು ಸಿಕ್ಕಿದ್ದಾರೆ. ಇದರ ಬೆನ್ನಲ್ಲೇ ಉರ್ವಾ ಇನ್ಸ್ ಪೆಕ್ಟರ್ ಭಾರತಿ ಅವರು ತನ್ನ ತಂಡದೊಂದಿಗೆ ಸಕಲೇಶಪುರಕ್ಕೆ ತೆರಳಿದ್ದು, ನಾಲ್ವರನ್ನು ಎತ್ತಾಕ್ಕೊಂಡು ಬಂದಿದ್ದಾರೆ. ಆರೋಪಿಗಳ ಬಳಿ ದರೋಡೆ ಮಾಡಿದ್ದ ಚಿನ್ನಾಭರಣಗಳು ಸಿಕ್ಕಿದ್ದು, ಎರಡೇಟು ನೀಡುತ್ತಿದ್ದಂತೆ ಸತ್ಯ ಬಾಯಿಬಿಟ್ಟಿದ್ದರು.
ದರೋಡೆ ಸಂದರ್ಭದಲ್ಲಿ ವಿಕ್ಟರ್ ಮೆಂಡೋನ್ಸ ಅವರಿಗೆ ರಾಡ್ ನಲ್ಲಿ ಹಲ್ಲೆ ನಡೆಸಿದ್ದರು. ಅವರ ಒಂದು ಕಾಲು ಮುರಿತವಾಗಿದ್ದು, ಸರ್ಜರಿಯಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೃತ್ಯದ ಬಳಿಕ ಕಾರಿನಲ್ಲೇ ರಾಡನ್ನು ಎತ್ತಿಕೊಂಡು ತೆರಳಿದ್ದು ಮೂಲ್ಕಿಯ ಪಡು ಪಣಂಬೂರಿನಲ್ಲಿ ಎಸೆದು ಹೋಗಿದ್ದರು. ಅದನ್ನು ವಶಕ್ಕೆ ಪಡೆಯುವ ಸಲುವಾಗಿ ನಾಲ್ವರು ಕಳ್ಳರನ್ನು ಪೊಲೀಸರು ಇಂದು ಬೆಳಗ್ಗೆ 6.30ಕ್ಕೆ ಸ್ಥಳಕ್ಕೆ ಕರೆದೊಯ್ದಿದ್ದರು. ಈ ವೇಳೆ, ಇಳಿಜಾರು ಪ್ರದೇಶದಲ್ಲಿ ರಸ್ತೆ ಬದಿ ನಡೆದು ಸಾಗುತ್ತಿದ್ದಂತೆ ರಾಜು ಸಿಂಘಾನಿಯಾ ತನ್ನನ್ನು ಹಿಡಿದುಕೊಂಡಿದ್ದ ಎಎಸ್ಐ ವಿನಯಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನೊಬ್ಬ ಆರೋಪಿ ಬಾಲಿ ಕೂಡ ತನ್ನನ್ನು ಹಿಡಿದಿದ್ದ ಸಿಬಂದಿ ಶರತ್ ಮೇಲೆ ಹಲ್ಲೆ ನಡೆಸಿದ್ದು, ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಈ ವೇಳೆ, ಪೊಲೀಸ್ ಇನ್ಸ್ ಪೆಕ್ಟರ್ ಇಬ್ಬರ ಮೇಲೂ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ರಾಜು ಸಿಂಘಾನಿಯಾ ಮಧ್ಯಪ್ರದೇಶ ಸೇರಿದಂತೆ ಹಲವು ಕಡೆ ಹತ್ತಕ್ಕೂ ಹೆಚ್ಚು ಕೇಸುಗಳನ್ನು ಎದುರಿಸುತ್ತಿದ್ದಾನೆ. ಮಂಗಳೂರಿನಲ್ಲಿ ಈ ಹಿಂದೆ ಕೃತ್ಯ ಎಸಗಿದ್ದಾನೋ ಎನ್ನುವ ಬಗ್ಗೆ ತನಿಖೆ ಮಾಡಲಾಗುವುದು. ಹಿಂದಿನ ಪ್ರಕರಣದಲ್ಲಿ ಬೆರಳಚ್ಚು ತಾಳೆಯಾಗುತ್ತಾ ಎಂದು ತಪಾಸಣೆ ಮಾಡುತ್ತೇವೆ. ಮೊನ್ನೆ ಕೋಡಿಕಲ್ ನಲ್ಲಿ ಇದೇ ತಂಡ ಕೃತ್ಯ ಎಸಗಿರುವುದೆಂದು ಪತ್ತೆಯಾಗಿದೆ. ಇವರ ಜೊತೆ ಇನ್ನಷ್ಟು ಮಂದಿ ಇರುವ ಶಂಕೆಯಿದ್ದು, ದೊಡ್ಡ ಜಾಲ ಇದೆಯಾ ಎನ್ನುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.
ಎರಡು ತಂಡಕ್ಕೂ 50 ಸಾವಿರ ಬಹುಮಾನ
ತುರ್ತು ಕಾರ್ಯಾಚರಣೆ ನಡೆಸಿ, ಕೇವಲ 5 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿರುವ ಉರ್ವಾ ಇನ್ಸ್ ಪೆಕ್ಟರ್ ಭಾರತಿ ಮತ್ತು ತಂಡಕ್ಕೆ 50 ಸಾವಿರ ಬಹುಮಾನ ನೀಡಲಾಗುವುದು. ಇದೇ ವೇಳೆ, ಕಂಕನಾಡಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟು ದರೋಡೆ ಕೃತ್ಯ ಭೇದಿಸಿರುವ ತಂಡಕ್ಕೂ 50 ಸಾವಿರ ಬಹುಮಾನ ನೀಡಲಾಗುವುದು. ಅಷ್ಟೇನೂ ಸುಳಿವು ಇಲ್ಲದ ಕೃತ್ಯವನ್ನು ಪೊಲೀಸರು ಚಾಣಾಕ್ಷತೆಯಿಂದ ಭೇದಿಸಿದ್ದಾರೆ. ಅವರ ತಂಡದ ಶ್ರಮ ಶ್ಲಾಘಿಸುವಂಥದ್ದು ಎಂದು ಕಮಿಷನರ್ ಹೇಳಿದರು.
ಕದ್ರಿ ದೇವಸ್ಥಾನದ ಒಳಗಡೆ ಬೈಕ್ ನಲ್ಲಿ ಸಾಗಿ ದಾಂಧಲೆ ನಡೆಸಿರುವ ಘಟನೆ ಬಗ್ಗೆ ಕೇಳಿದ ಪ್ರಶ್ನೆಗೆ, ಆತನಿಗೆ ಮಾನಸಿಕ ಸಮಸ್ಯೆ ಇರುವ ಬಗ್ಗೆ ವಿಚಾರಣೆ ವೇಳೆ ತಿಳಿದುಬಂದಿದೆ. ಯಾವ ರೀತಿಯ ಸಮಸ್ಯೆ ಎಂದು ತಿಳಿದುಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು ಎಂದರು. ದರೋಡೆ ಕೃತ್ಯ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಒಂಟಿ ಮನೆಗಳಿರುವೆಡೆ ನೈಟ್ ಬೀಟ್ ವ್ಯವಸ್ಥೆಯನ್ನು ಬಿಗಿಗೊಳಿಸಲಾಗುವುದು. ಸಿಸಿಟಿವಿಗಳನ್ನು ಬಲ ಪಡಿಸಲಾಗುವುದು ಎಂದು ಹೇಳಿದರು. ಡಿಸಿಪಿಗಳಾದ ಸಿದ್ದಾರ್ಥ್ ಗೋಯಲ್, ಬಿಪಿ ದಿನೇಶ್ ಕುಮಾರ್ ಇದ್ದರು.
Chaddi gang arrest in Mangalore, police commissioner gives cash price of 50 thousand to Urwa inspector Bharathi and team for their commendable job in nabbing the most notorious criminals of chaddi gang who were wanted in many crimanal issue in India.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm