ಬ್ರೇಕಿಂಗ್ ನ್ಯೂಸ್
05-07-24 12:32 pm Mangalore Correspondent ಕರಾವಳಿ
ಮಂಗಳೂರು, ಜುಲೈ.5: ಮೂಡಾ ವಿಚಾರದಲ್ಲಿ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಮುಖ್ಯಮಂತ್ರಿ ತಪ್ಪಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಮೂರು ಎಕರೆ ಅತಿಕ್ರಮಣ ಮಾಡಿ ಮೂಡಾ ಲೇಔಟ್ ನಿರ್ಮಿಸಲಾಗಿದೆ. ಭೂ ಸ್ವಾಧೀನ ಆಗದ ಜಾಗದಲ್ಲಿ ಲೇಔಟ್ ಕಟ್ಟಿದ್ದಾರೆ. ಮುಖ್ಯಮಂತ್ರಿ ಆದ ತಕ್ಷಣ ಅವರು ತಮ್ಮ ಜಾಗ ಬಿಟ್ಟು ಕೊಡಬೇಕಾ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.
ಮಂಗಳೂರಿನಲ್ಲಿ ಮುಖ್ಯಮಂತ್ರಿ ಮೇಲಿನ ಮೂಡಾ ನಿವೇಶನ ಕುರಿತ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲೇ ಇದು ಅಗಿರೋದು. ಮುಖ್ಯಮಂತ್ರಿ ಆದ ತಕ್ಷಣ ಅವರು ಅವರ ಜಾಗ ಬಿಟ್ಟು ಕೊಡಬೇಕಾ? ನಿಮ್ಮ ಜಾಗ ಯಾರಾದ್ರೂ ಅತಿಕ್ರಮಣ ಮಾಡಿದ್ರೆ ಬಿಡ್ತೀರಾ? ಅದು ಅವರ ಪತ್ನಿಯ ಜಾಗ, ಮೂಡಾ ಕೂಡ ತಪ್ಪನ್ನು ಒಪ್ಪಿಕೊಂಡಿದೆ.
ಹಾಗೆ ನೋಡಿದ್ರೆ ಮುಖ್ಯಮಂತ್ರಿ ಕೋರ್ಟ್ ಗೆ ಹೋಗಿ ಜಾಗ ವಾಪಾಸ್ ಕೇಳಬೇಕಿತ್ತು. ಆದರೂ ಅವರು ಬದಲಿ ಜಾಗ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಭ್ರಷ್ಟಾಚಾರ ಎಲ್ಲಿ ಬರುತ್ತೆ?ಬಿಜೆಪಿಯವರ ಕಥೆಗಳನ್ನು ತೆಗೆದ್ರೆ ಗೊತ್ತಾಗುತ್ತೆ, ಎಲ್ಲಾ ಅವರ ಅವಧಿಯಲ್ಲೇ ಅಗಿರೋದು. ಅವರು ಮಾಡಿದ್ದ 50:50 ನಿವೇಶನ ಹಂಚಿಕೆಯನ್ನು ನಮ್ಮ ಸರ್ಕಾರವೇ ಕ್ಯಾನ್ಸಲ್ ಮಾಡಿದ್ದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ರಾಜ್ಯದಲ್ಲಿ ಡೆಂಗ್ಯು ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಸೊಳ್ಳೆಗಳನ್ನು ಲಾರ್ವಾ ಉತ್ಪತ್ತಿ ಸ್ಥಳಗಳಲ್ಲಿ ನಿಯಂತ್ರಣ ಮಾಡೋದು ಮೊದಲ ಕೆಲಸ. ಸಂಗ್ರಹವಾದ ನೀರಲ್ಲಿ ಸೊಳ್ಳೆ ಉತ್ಪತ್ತಿ ಆಗ್ತಿದೆ, ಅದನ್ನು ನಿಯಂತ್ರಿಸಬೇಕು. ಈ ವಿಚಾರವನ್ನು ಜನರು ಗಂಭೀರವಾಗಿ ತೆಗೆದುಕೊಳ್ತಿಲ್ಲ, ಮನೆಗಳ ಮುಂದೆ ನೀರು ನಿಲ್ತಿದೆ. ಸರ್ಕಾರದ ಕಡೆಯಿಂದ ಡೆಂಗ್ಯೂ ಪ್ರಕರಣದಲ್ಲಿ ಸೂಕ್ತ ಚಿಕಿತ್ಸೆ ಕೊಡುವ ವ್ಯವಸ್ಥೆ ಆಗಿದೆ. ಡೆಂಗ್ಯೂ ಒಂದು ವೈರಲ್ ಜ್ವರ, ಆದರೆ ಸಾವು ಸಂಭವಿಸದಂತೆ ತಡೆಯಬೇಕಾಗಿದೆ.
ಡೆಂಗ್ಯೂ ಟೆಸ್ಟಿಂಗ್ ವಿಚಾರದಲ್ಲಿ ಆರೋಗ್ಯ ಇಲಾಖೆಯಿಂದ ಬೆಲೆ ನಿಗದಿ ಮಾಡಲಾಗಿದೆ. ಅದಕ್ಕಿಂತ ಹೆಚ್ಚಳ ಮಾಡಿರುವುದು ಕಂಡುಬಂದರೆ ಖಾಸಗಿ ಆಸ್ಪತ್ರೆಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ದರ ಹೆಚ್ಚು ತೆಗೊಂಡ್ರೆ ಅವರ ಲೈಸನ್ಸ್ ಕೂಡ ನಾವು ಕ್ಯಾನ್ಸಲ್ ಮಾಡಬಹುದು. ಎಪಿಡೆಮಿಕ್ ಮತ್ತು ಕೆಪಿಎಂಇ ಕಾನೂನು ಅಡಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮಂಗಳೂರು ಸೇರಿದಂತೆ ದ.ಕ ಜಿಲ್ಲೆಯಲ್ಲಿ ಹಲವೆಡೆ ಗುಡ್ಡ ಕುಸಿತ ಆಗಿರುವ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮನೆ ಕಟ್ಟಲು ನಾವೇ ಗುಡ್ಡ ಅಗೀತಾ ಇದೀವಿ, ಕಟ್ಟಿಂಗ್ ಮಾಡ್ತಾ ಇದೀವಿ. ಅದು ವೈಜ್ಞಾನಿಕವಾಗಿ ಇರದೇ ಇದ್ದಾಗ ಮಳೆ ಬಂದಾಗ ಕುಸೀತಾ ಇದೆ. ಇದು ನಾವೇ ಸೃಷ್ಟಿ ಮಾಡಿಕೊಂಡಿರೋ ಸಮಸ್ಯೆ. ತಡೆಗೋಡೆ ಕಟ್ಟೋಕೆ ದೊಡ್ಡ ಅನುದಾನ ಬೇಕು, ಅದರ ಬಗ್ಗೆ ನೋಡೋಣ ಎಂದರು.
Cm's legal advisor A.S. Ponnanna has clearly stated that the Chief Minister is not at fault. Muda Layout has been constructed by encroaching on their three acres. The layout has been constructed on land where land has not been acquired. Health Minister Dinesh Gundu Rao questioned whether he should give up his place immediately after becoming the Chief Minister.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm