ಬ್ರೇಕಿಂಗ್ ನ್ಯೂಸ್
03-07-24 10:50 am Mangaluru Correspondent ಕರಾವಳಿ
ಮಂಗಳೂರು, ಜುಲೈ 3: ದಕ್ಷಿಣ ಕನ್ನಡ ಎಸ್ಪಿ ಸಿ.ಬಿ. ರಿಷ್ಯಂತ್ ಸಿಂಗ್ ಸೇರಿದಂತೆ ರಾಜ್ಯದಲ್ಲಿ 21 ಐಪಿಎಸ್ ಅಧಿಕಾರಿಗಳ ವರ್ಗಾವಣೆಯಾಗಿದ್ದು, ಬೇರೆ ಬೇರೆ ಕಡೆ ಪೋಸ್ಟ್ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಫ್ ಅಂಡ್ ಟಫ್ ಮತ್ತು ದಕ್ಷ ಅಧಿಕಾರಿಯೆಂದು ಹೆಸರು ಮಾಡಿದ್ದ ರಿಷ್ಯಂತ್ ಸಿಂಗ್ ಅವರನ್ನು ಬೆಂಗಳೂರು ವೈರ್ ಲೆಸ್ ವಿಭಾಗದಲ್ಲಿ ಎಸ್ಪಿ ಆಗಿ ವರ್ಗ ಮಾಡಲಾಗಿದೆ.
ಮಂಡ್ಯ ಜಿಲ್ಲೆಯ ಎಸ್ಪಿ ಆಗಿದ್ದ ಯತೀಶ್ ಎನ್. ಅವರನ್ನು ದಕ್ಷಿಣ ಕನ್ನಡ ಎಸ್ಪಿಯಾಗಿ ನೇಮಕ ಮಾಡಲಾಗಿದೆ. ಉಳಿದಂತೆ ಉತ್ತರ ಕನ್ನಡ ಜಿಲ್ಲೆ ಎಸ್ಪಿಯಾಗಿದ್ದ ವಿಷ್ಣುವರ್ಧನ್ ಅವರನ್ನು ಮೈಸೂರು ಎಸ್ಪಿಯಾಗಿ, ಮೈಸೂರಿನಲ್ಲಿ ಎಸ್ಪಿಯಾಗಿದ್ದ ಸೀಮಾ ಲಾಟ್ಕರ್ ಅವರನ್ನು ಮೈಸೂರು ನಗರ ಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಮೈಸೂರು ಕಮಿಷನರ್ ಆಗಿದ್ದ ರಮೇಶ್ ಡಿಐಜಿ ದರ್ಜೆಗೆ ಭಡ್ತಿ ಪಡೆದಿದ್ದು ದಾವಣಗೆರೆ ವಲಯ ಐಜಿಪಿಯಾಗಿದ್ದಾರೆ.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕಮಿಷನರ್ ಆಗಿದ್ದ ಡಿಐಜಿ ದರ್ಜೆಯ ಎನ್.ಶಶಿಕುಮಾರ್ ಅವರನ್ನು ಹುಬ್ಬಳ್ಳಿ- ಧಾರವಾಡ ಕಮಿಷನರ್ ಆಗಿ ವರ್ಗ ಮಾಡಲಾಗಿದೆ. ಗುಪ್ತಚರ ವಿಭಾಗದ ಐಜಿಪಿ ಆಗಿದ್ದ ಲಾಬೂರಾಮ್ ಅವರನ್ನು ಬೆಂಗಳೂರು ಕೇಂದ್ರ ವಲಯ ಐಜಿಪಿ ಆಗಿ ನೇಮಿಸಲಾಗಿದೆ. ಬೆಂಗಳೂರು ಕೇಂದ್ರ ವಲಯದ ಐಜಿಪಿ ಬಿ.ಆರ್. ರವಿಕಾಂತೇ ಗೌಡ ಅವರನ್ನು ಬೆಂಗಳೂರು ಹೆಡ್ ಕ್ವಾರ್ಟರ್ಸ್ ವಿಭಾಗದ ಐಜಿ ಆಗಿ ವರ್ಗಾಯಿಸಲಾಗಿದೆ. ಸಿಐಡಿಯಲ್ಲಿ ಎಸ್ಪಿ ಆಗಿದ್ದ ಸಾರಾ ಫಾತಿಮಾ ಅವರನ್ನು ಬೆಂಗಳೂರು ಸೌತ್ ಈಸ್ಟ್ ವಿಭಾಗದಲ್ಲಿ ಡಿಸಿಪಿ ಹುದ್ದೆ ನೀಡಲಾಗಿದೆ. ಬೆಂಗಳೂರು ಬಿಎಂಟಿಎಫ್ ಎಸ್ಪಿ ಆಗಿದ್ದ ಶೋಭಾರಾಣಿ ವಿಜೆ ಅವರಿಗೆ ಬಳ್ಳಾರಿ ಎಸ್ಪಿ ಹುದ್ದೆ ನೀಡಲಾಗಿದೆ.
ದಕ್ಷ ಅಧಿಕಾರಿಯೆಂದು ಹೆಸರು ಮಾಡಿದ್ದ ರಿಷ್ಯಂತ್
ಒಂದು ವರ್ಷದ ಹಿಂದೆ, 2023ರ ಜೂನ್ 20ರಂದು ದಕ್ಷಿಣ ಕನ್ನಡ ಎಸ್ಪಿಯಾಗಿದ್ದ ವಿಕ್ರಂ ಅಮಟೆ ಅನಾರೋಗ್ಯಕ್ಕೆ ತುತ್ತಾಗಿದ್ದಾಗ, ಸಿ.ಬಿ. ರಿಷ್ಯಂತ್ ಸಿಂಗ್ ಅವರನ್ನು ದಕ್ಷಿಣ ಕನ್ನಡಕ್ಕೆ ಪ್ರಭಾರಿಯಾಗಿ ನೇಮಕ ಮಾಡಲಾಗಿತ್ತು. ಆನಂತರ, ಅವರನ್ನೇ ಎಸ್ಪಿ ಹುದ್ದೆಯಲ್ಲಿ ಮುಂದುವರಿಸಲಾಗಿತ್ತು. ಒಂದು ವರ್ಷದ ಅವಧಿಯಲ್ಲಿ ರಿಷ್ಯಂತ್ ಸಿಂಗ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಕ್ಷ ಅಧಿಕಾರಿಯೆಂದು ಹೆಸರು ಪಡೆದಿದ್ದರು. ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳದಲ್ಲಿ ಅಕ್ರಮ ಮರಳುಗಾರಿಕೆ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಠಾಣೆಯಲ್ಲಿ ರಂಪ ಎಸಗಿದ್ದಾಗ ದಿಟ್ಟತನದಲ್ಲಿ ಕಾನೂನು ಚಾಟಿ ಬೀಸಿದ್ದು ಜನರ ಗಮನ ಸೆಳೆದಿತ್ತು. ಪ್ರತಿ ಪ್ರಕರಣದಲ್ಲಿಯೂ ಕಾನೂನು ಬಿಟ್ಟು ಆಚೀಚೆ ವಾಲದೆ, ಕಾನೂನು ಕೈಗೆ ತೆಗೆದುಕೊಂಡರೆ ಕಾನೂನೇ ಮಾತಾಡುತ್ತದೆ ಎಂದು ತೋರಿಸಿಕೊಟ್ಟಿದ್ದರು.
In a significant reshuffle, the Karnataka state government has issued orders transferring 25 IPS officers late on Tuesday night. Among the notable transfers, C B Ryshyanth, the superintendent of police (SP) for Dakshina Kannada (DK) district, has been moved to Bengaluru, where he will now serve as the SP for the wireless division.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm