ಬ್ರೇಕಿಂಗ್ ನ್ಯೂಸ್
02-07-24 10:38 pm Mangalore Correspondent ಕರಾವಳಿ
ಮಂಗಳೂರು, ಜುಲೈ.2: ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗವನ್ನು ಒಳಗೊಂಡಿರುವ ಮಂಗಳೂರು ಅರಣ್ಯ ವಿಭಾಗದಲ್ಲಿ ಕಳೆದ ವರ್ಷ 26 ಲಕ್ಷ ಸಸಿಗಳನ್ನು ನೆಡಲಾಗಿದೆ. ಈ ಬಾರಿ 12 ಲಕ್ಷ ಸಸಿಗಳನ್ನು ನೆಡಲು ಯೋಜನೆ ಹಾಕಿದ್ದು, ಜುಲೈ ಒಳಗೆ ಸಸಿಗಳನ್ನು ನೆಟ್ಟು ಮುಗಿಸಲಿದ್ದಾರೆ. ರಾಜ್ಯದಲ್ಲಿ ಒಟ್ಟು 5 ಕೋಟಿ ಸಸಿಗಳನ್ನು ನೆಡಲಾಗುವುದು ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಮಂತ್ರಿ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪರಿಸರ ಸಂರಕ್ಷಣೆಯ ಉದ್ದೇಶದಿಂದ ಕಾಂಡ್ಲಾ ವನ ಬೆಳೆಸುವುದಕ್ಕೂ ಯೋಜನೆ ಹಾಕಿದ್ದೇವೆ. ಅದಕ್ಕೆ ಇನ್ನೂ ಅಂತಿಮ ರೂಪುರೇಷೆ ಆಗಿಲ್ಲ. ಸಸಿಗಳನ್ನು ನೆಡುವುದು ಮಾತ್ರವಲ್ಲ, ಅದನ್ನು ಪೋಷಿಸುವುದು ಮುಖ್ಯ. ಈ ಬಾರಿ ಅರಣ್ಯ ಬೆಳೆಸುವುದಕ್ಕಾಗಿ ರಾಜ್ಯದ ಮುಖ್ಯಮಂತ್ರಿ 100 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.
ಪರಿಸರ ಮಾಲಿನ್ಯ ನಿಯಂತ್ರಣದ ಉದ್ದೇಶದಲ್ಲಿ ಕಳೆದ ವರ್ಷ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಮಾಡಲಾಗಿತ್ತು. ಆ ರೀತಿಯ ಪ್ಲಾಸ್ಟಿಕ್ ಉತ್ಪಾದನೆಯನ್ನೇ ನಿಲ್ಲಿಸಲಾಗಿತ್ತು. ಹಾಗಿದ್ದರೂ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಆಗಿಲ್ಲ. ಈ ಬಗ್ಗೆ ಜನಜಾಗೃತಿ ಮೂಡಿಸುವ ಅಗತ್ಯವಿದ್ದು, ಜನರೇ ಪ್ಲಾಸ್ಟಿಕ್ ಬಗ್ಗೆ ಜಾಗ್ರತೆ ವಹಿಸಬೇಕಿದೆ. ಇಲಾಖೆಯಲ್ಲಿ ಸಿಬಂದಿ ಕೊರತೆಯೂ ಇದ್ದು, ಅದರ ಬಗ್ಗೆ ಉನ್ನತ ಮಟ್ಟದಲ್ಲಿ ಚಿಂತಿಸಲಾಗುವುದು ಎಂದರು. ಮಾನವ – ಪ್ರಾಣಿ ಸಂಘರ್ಷದಿಂದಾಗಿ ಕಳೆದ ವರ್ಷ 65 ಮಂದಿ ಪ್ರಾಣ ಕಳಕೊಂಡಿದ್ದಾರೆ. ಈ ರೀತಿಯ ಸಾವು ಆಗದಂತೆ ನೋಡಿಕೊಳ್ಳಬೇಕಿದ್ದು, ಈ ಕುರಿತಾಗಿ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ನಡೆಸಲಾಗುವುದು. ಅದರಲ್ಲಿ ಪ್ರಮುಖ ವಿಷಯ ತಜ್ಞರನ್ನು ಕರೆಸಲಾಗುವುದು ಎಂದು ಹೇಳಿದರು.
ಮಂಗಳೂರು ವಿಭಾಗದಲ್ಲಿ 3912 ಅರಣ್ಯ ಒತ್ತುವರಿ ಪ್ರಕರಣಗಳಿದ್ದು, ಈ ಪೈಕಿ ದ.ಕ. ಜಿಲ್ಲೆಯಲ್ಲಿ 2591, ಕುಂದಾಪುರ ವಿಭಾಗದಲ್ಲಿ 1158, ಕಾರ್ಕಳ ವೈಲ್ಡ್ ಲೈಫ್ ವಿಭಾಗದಲ್ಲಿ 163 ಒತ್ತುವರಿ ಪ್ರಕರಣಗಳಿವೆ. ಈ ಪೈಕಿ 3 ಎಕ್ರೆಗಿಂತ ಕಡಿಮೆ ಒತ್ತುವರಿ ಆಗಿರುವಲ್ಲಿ ತೆರವು ಮಾಡುವುದಕ್ಕೆ ಸರಕಾರದ ಆದೇಶ ಬಂದಿಲ್ಲ. 10ರಿಂದ 30 ಎಕ್ರೆ ಮತ್ತು 3ರಿಂದ ಹತ್ತು ಎಕ್ರೆ ವ್ಯಾಪ್ತಿಯ ಅರಣ್ಯ ಒತ್ತುವರಿಗಳನ್ನು ತೆರವು ಮಾಡಲಾಗುವುದು. ಕೆಲವು ಪ್ರಕರಣ ಕೋರ್ಟಿನಲ್ಲಿದ್ದರೂ, ಅದನ್ನು ತೆರವು ಮಾಡುವುದಕ್ಕೆ ಕೋರ್ಟಿನಿಂದ ಆದೇಶ ತರಲಿದ್ದೇವೆ ಎಂದಿದ್ದಾರೆ.
The Forest Department has set a target of planting 25 crore tree saplings at the rate of five crore saplings a year in the next five years, said Minister for Forest, Environment and Ecology Eshwar B. Khandre on Tuesday, July 2.
21-07-25 01:31 pm
Bangalore Correspondent
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 03:11 pm
Mangalore Correspondent
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm